ಸುದ್ದಿಮೂಲವಾರ್ತೆ
ಕೊಪ್ಪಳ,ಅ.9:ಜನಜಾಗೃತಿ ಅಭಿಯಾನದ ಅಡಿಯಲ್ಲಿ ಪಾನಮುಕ್ತರ ಸಮಾವೇಶ, ಗಾಂಧಿಸ್ಮೃತಿ, ಅಭಿನಂದನೆ ಹಾಗು ಪದಗ್ರಹಣ ಕಾರ್ಯಕ್ರಮವು ಅ11 ರಂದು ಬಾಲಾಜಿ ಪಂಕ್ಷನ್ ಹಾಲಿನಲ್ಲಿ ನಡೆಯಲಿದೆ ಎಂದು ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾದ ಗುಪ್ತಾ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಹಳ್ಳಿಗಳಲ್ಲಿ ಕುಡಿತದಿಂದ ಜನರ ಬದುಕು ದುಸ್ತರವಾಗುತ್ತದೆ. ಬಲವಂತದಿಂದ ಬಿಡಸದೆ ಅವರೊಂದಿಗೆ ಮಾತನಾಡಿ ಕುಡಿತ ಬಿಡಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗವಿಮಠ ಹಾಗು ಭಾಗ್ಯನಗರದ ಶಂಕರ ಮಠದ ಸ್ವಾಮೀಜಿಗಳು ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಡಲಿದ್ದಾರೆ. ಶ್ರೀನಿವಾಸ ಗುಪ್ತಾ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಜನೆಯ ಸೌಲಭ್ಯ ವಿತರಣೆ ಯನ್ನು ಸಂಸದ ಸಂಗಣ್ಣ ಕರಡಿ ಮಾಡಲಿದ್ದಾರೆ. ಪಾನಮುಕ್ತರಿಗೆ ಅಭಿನಂದನೆಯನ್ನು ಶಾಸಕ ರಾಘವೇಂದ್ರ ಪಾನಗಂಟಿ ಮಾಡಲಿದ್ದಾರೆ.ಜಾಥವನ್ನು ನಳಿನ ಅತುಲ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಮದ್ಯದ ಅಂಗಡಿಗಳನ್ನು ಆರಂಭಿಸಬಾರದು ಈಗಾಗಲೇ ಸಾಕಷ್ಟು ಭಾರಿ ಪತ್ರ ಚಳುವಳಿ ಮಾಡಲಾಗಿದೆ ಎಂದರು.
ಇಲ್ಲಿಯವರೆಗೂ ಒಂದು ಲಕ್ಷ ಮೂವತ್ತು ಸಾವಿರ ಜನರು ಮದ್ಯವರ್ಜನೆ ಮಾಡಲಾಗಿದೆ. ಪ್ರತಿ ತಿಂಗಳು ಮದ್ಯವರ್ಜನೆಗಳ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಹೇಳಿದರು.
ಪಾನಮುಕ್ತರನ್ನು ಈಶ್ವರ ಪಾರ್ಕಿನಿಂದ ಭಾಗ್ಯನಗರದ ಬಾಲಾಜಿ ಪಂಕ್ಷನ್ ಹಾಲ್ ನವರೆಗೂ ನಡೆಯಲಿದೆ. ಸುಮಾರು 3 ಸಾವಿರ ಜನರಿಂದ ಮನೋರಂಜನೆಯ ಹಾಗು ಮಳೆಗಾಗಿ ದೇವರ ಪ್ರಾರ್ಥನೆ ಮಾಡಲಾಗುತ್ತಿದೆ ಎಂದು ಬಂಗೇರಾ ತಿಳಿಸಿದರು.
ಜಿಲ್ಲೆಯಲ್ಲಿ 210 ಜನ ನಿರ್ಗತಿಕರಿಗೆ ಧನ ಸಹಾಯ ಹಾಗು ನಿವೇಶನ ನೀಡಿ ಮನೆ ಕಟ್ಟಿಸಿಕೊಡಲಾಗುತ್ತಿದೆ. ಪಂಚಾಯತ್ ಯವರ ಸಹಕಾರದಿಂದ ಕುಡಿವ ನೀರಿನ ಘಟಕ ತೆರೆಯಲಾಗಿದೆ. ಅಂಗವಿಕಲರಿಗೆ ವೀಲ್ ಚೇರ್ ಸೇರಿ ಹಲವು ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಕರಾದ ರಾಧ ಕುಲಕುರ್ಣಿ, ತ್ರೀಶೂಲ, ಯೋಜನಾಧಿಕಾರಿಗಳಾದ ರಘರಾಮ,ಜಗದೀಶ ಇದ್ದರು.