ಸುದ್ದಿಮೂಲ ವಾರ್ತೆ ಹೊಸಪೇಟೆ, ಅ.07:
ಮಹಾಕಾವ್ಯ ರಾಮಾಯಣದ ಮೂಲಕ ಜೀವನದ ಮೌಲ್ಯಗಳನ್ನು ಜಗತ್ತಿಿಗೆ ಸಾರಿದವರು ಮಹಾಕವಿ ಶ್ರೀಮಹರ್ಷಿ ವಾಲ್ಮೀಕಿ ಎಂದು ಶಾಸಕ ಹೆಚ್. ಆರ್.ಗವಿಯಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯೋೋತ್ಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಲ್ಮೀಕಿ ಸಮುದಾಯಕ್ಕಾಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಸಮುದಾಯದವರು ಸದ್ಭಳಕೆ ಪಡಿಸಿಕೊಳ್ಳಬೇಕು.
ನಾನು ಸಹ ಮುಖ್ಯಮಂತ್ರಿಿಗಳಿಗೆ ಮುಂದಿನ ದಿನದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಿಗಾಗಿ ವಿಶೇಷ ಯೋಜನೆಗಳನ್ನು ಜಾ ರಿಗೆ ತರುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಮಹರ್ಷಿ ವಾಲ್ಮೀಕಿಯವರು ಮಹಾಕಾವ್ಯ ರಾಮಾಯಣ ರಚಿಸಿ ಮಾನವ ಧರ್ಮಕ್ಕೆೆ ಕೊಡುಗೆ ನೀಡುವ ಮೂಲಕ ಪೂಜ್ಯನೀಯರಾಗಿದ್ದಾರೆ. ಸಂಸ್ಕೃತದಲ್ಲಿ ಮೊಟ್ಟ ಮೊದಲಿಗೆ ರಾಮಾಯಣ ರಚಿಸಲಾಯಿತು. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆೆ ಅನನ್ಯವಾದ ಕೊಡುಗೆ ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿಯವರನ್ನು ನಾವೆಲ್ಲರೂ ಸದಾಕಾಲವೂ ಸ್ಮರಿಸಿಕೊಳ್ಳಬೇಕು ಎಂದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಾಾಧ್ಯಾಾಪಕರು ಮತ್ತು ಸದಸ್ಯರಾದ ಡಾ.ಸಿ.ಬಿ. ಚಿಲ್ಕರಾಗಿ ರವರು ಉಪನ್ಯಾಾಸ ನೀಡಿ, ರಾಮಾಯಣ ಕಾವ್ಯದ ಮೂಲಕ ಅವರು ನೀಡಿರುವ ಆದರ್ಶ ಮೌಲ್ಯಗಳನ್ನು ಯುವಪೀಳಿಗೆಯು ತಿಳಿಯಬೇಕಿದೆ. ಮಹರ್ಷಿ ವಾಲ್ಮೀಕಿಯವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮಾನತೆ, ಮಮತೆ, ಭ್ರಾಾತೃತ್ವ, ಕರುಣೆ, ತ್ಯಾಾಗ, ಧರ್ಮರಕ್ಷಣೆ ಮತ್ತು ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾಾರಕ್ಕಾಾಗಿ ಮಾರ್ಗದರ್ಶನ ನೀಡಿದ್ದಾರೆ. ರಾ ಮಾಯಣ ಮಹಾಕಾವ್ಯವು ಭಾರತದ ಚಿತ್ರಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ , ಪರಂಪರೆ, ಸಂಗೀತ, ನೃತ್ಯಕಲೆ, ರಂಗಭೂಮಿ, ನಾಟಕ, ಯಕ್ಷಗಾನ, ಚಲನಚಿತ್ರ, ಮುಂತಾದ ಕ್ಷೇತ್ರಗಳ ಮೇಲೆ ಅಗಾಧವಾದ ಪ್ರಭಾವ ಬೀರಿದೆ.ವಿಶ್ವ ಸಾಹಿತ್ಯ ಮಟ್ಟದ ಮಹಾಕಾವ್ಯವಾಗಿ ಜನಪ್ರಿಿಯತೆ ಪಡೆದಿದೆ. ವಾಲ್ಮೀಕಿಯವರು ವಿ ಶ್ವಕವಿಯಾಗಿ, ಇತಿಹಾಸಕಾರರಾಗಿ, ಶಾಸಜ್ಞರಾಗಿ, ತತ್ವಜ್ಞಾನಿಯಾಗಿ ಗೌರವಿಸಲ್ಪ ಡುತ್ತಾಾರೆ. ಅವರ ಜೀವನಗಾಥೆ ದಲಿತ ಪ್ರತಿಭೆಗೆ ಪ್ರೇೇರಣೆಯಾಗಿದೆ ಮತ್ತು ಸತ್ಯ ಹಾಗೂ ಧರ್ಮದ ಹಾದಿಯಲ್ಲಿ ನಡೆಯಲು ಉದಾಹರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಎಸ್ಸೆೆಸ್ಸೆೆ ಲ್ಸಿಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೈಭವ, ನವೀನ.ಎಂ.ಬಿ. ರವರಿಗೆ ಜಡಗ ಮ ತ್ತು ಬಾಲ ಯೋಜನೆಯಡಿ 1 ಲಕ್ಷ ರೂ. ಗಳ ಪ್ರೋೋತ್ಸಾಾಹಧನ ನೀಡಲಾಯಿತು.
ದೇವದಾಸಿ ಮಕ್ಕಳ ವಿವಾಹವಾದ ದಂಪತಿಗಳು ಹೊಸಪೇಟೆ ತಾಲೂಕಿನ ಪಿ.ಅಶ್ವಿಿನಿ ಗಂಡ ಎನ್.ರಮೇಶ್, ಕೂಡ್ಲಿಿಗಿ ತಾಲೂಕಿನ ಡಿ.ಹುಲಿಗೆಮ್ಮ ಗಂಡ ಎನ್.ಅ ಜ್ಜಯ್ಯ ಮತ್ತು ಹಗರಿಬೊಮ್ಮನಹಳ್ಳಿಿ ತಾಲೂಕಿನ ಹೆಚ್.ಯಮುನಕ್ಕ ಗಂಡ ಶಿವ ರಾಜ ಇವರಿಗೆ ತಲಾ 5 ಲಕ್ಷ ರೂ.ಗಳು ದೇವದಾಸಿ ಮಕ್ಕಳ ವಿವಾಹ ಪ್ರೋೋತ್ಸಾಾಹ ಧನ ಬಾಂಡ್ ವಿತರಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ಎಸ್ಸೆೆಸ್ಸೆೆಲ್ಸಿಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಾರ್ಥಿಗಳಿಗೆ ಪ್ರಶಸ್ತಿಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಿ ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ.ಎಸ್ ಮನ್ನಿಿಕೇರಿ, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಾಯ್ ಮೊಹಮದ್ ಅಲಿ ಅ ಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾ ರಿ ಇ.ಬಾಲಕೃಷ್ಣಪ್ಪ, ಅರಣ್ಯ ಇಲಾಖೆಯ ಜಿಲ್ಲಾ ಅಧಿಕಾರಿ ಅನುಪಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಟಿ.ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಾಣ ಇಲಾಖೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಾಣಾಧಿಕಾರಿ ರವಿಕುಮಾರ.ಜೆ, ಸಹಾಯಕ ಆಯುಕ್ತರ ಪಿ.ವಿವೇಕಾನಂದ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಜಂಬ ಯ್ಯ, ತಹಶೀಲ್ದಾಾರ ಶೃತಿ, ಹೊಸಪೇಟೆ ಬಿಇಓ ಶೇಖರಪ್ಪ ಹೊರಪೇಟೆ, ಶಿಶು ಅಭಿ ವೃದ್ದಿ ಯೋಜನಾಧಿಕಾರಿ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.