ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.27:
ಅನಾರೋಗ್ಯದ ಕಾರಣ ನಿಧನರಾಗಿದ್ದ ಕೊಳಗಲ್ಲು ಗ್ರಾಾಮದ ಶ್ರೀ ಎರ್ರಿಿತಾತನ ಮಠದ ಧರ್ಮಕರ್ತೆಯಾಗಿದ್ದ ಎರೆಪ್ಪತಾತ ಅವರ ಧರ್ಮಪತ್ನಿಿಯಾಗಿದ್ದ ಶ್ರೀಮತಿ ರತ್ಮಮ್ಮವ್ವ ಅವರ ಅಂತ್ಯಸಂಸ್ಕಾಾರ ಗ್ರಾಾಮಸ್ಥರು, ಭಕ್ತಾಾದಿಗಳು, ಪೊಲೀಸ್ ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶನಿವಾರ ಮಧ್ಯಾಾಹ್ನ ನೆರವೇರಿಸಲಾಯಿತು.
ಪರಿಶಿಷ್ಟ ಜಾತಿಗೆ ಸೇರಿರುವ ಶ್ರೀಮತಿ ರತ್ಮಮ್ಮವ್ವಳ ವಂಶಸ್ಥರು (ತವರು ಮನೆ)ಗೆ ಸೇರಿದ ಸ್ಥಳದಲ್ಲಿ ಪವಾಡಪುರುಷ ಎರ್ರಿಿತಾತ ಎನ್ನುವವರ ಸಮಾಧಿಯನ್ನು ನಿರ್ಮಾಣ ಮಾಡಿ, ಮಠ ಕಟ್ಟಲಾಗಿದೆ. ನಂತರದ ದಿನಗಳಲ್ಲಿ ರತ್ಮಮ್ಮವ್ವ ಮತ್ತು ಅವರ ಪತಿ ಎರ್ರೆೆಪ್ಪ ಅವರು ಮಠದ ಆವರಣದಲ್ಲಿಯೇ ಮನೆ ಮಾಡಿಕೊಂಡು, ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಾಾ ಅನೇಕರಿಗೆ ಭಕ್ತಿಿಮಾರ್ಗವನ್ನು ಬೋಧಿಸುತ್ತಿಿದ್ದರು.
ಶ್ರೀ ಎರ್ರೆೆಪ್ಪ ತಾತ ಅವರು ದೈವಾಧೀನರಾದ ನಂತರ ಅವರ ದೈವಿಕ ಶರೀರವನ್ನು ಶ್ರೀಮಠದ ಆವರಣದಲ್ಲಿಯೇ ಇರಿಸಿ, ಗುಡಿಯನ್ನು ಕಟ್ಟಲಾಗಿದೆ. ಆ ನಂತರ, ಗ್ರಾಾಮದಲ್ಲಿ ಕುರುಬರು ಮತ್ತು ಪರಿಶಿಷ್ಟರ ಮಧ್ಯೆೆ ಶ್ರೀಮಠದ ವಾರಸುದಾರಿಕೆಯ ವಿವಾದ ಸೃಷ್ಟಿಿಯಾಗಿ, ನ್ಯಾಾಯಾಲಯದ ಮೆಟ್ಟಿಿಲೇರಿತು. ಒಂದು ಹಂತದಲ್ಲಿ, ಎರ್ರೆೆಪ್ಪತಾತ ಅವರ ಶರೀರವನ್ನು ಹೊರತೆಗೆಯುವ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಯಿತು.
ಈ ವಿವಾದದ ಹಿನ್ನಲೆಯಲ್ಲಿ ಕೊಳಗಲ್ಲು ಗ್ರಾಾಮದಲ್ಲಿ ಸದಾಕಾಲ ಬಿಗುವಿನ ವಾತಾವರಣ ಇರಲಿದೆ. ಡಿಎಆರ್ ಪೊಲೀಸ್ನ ತುಕಡಿಗಳನು ದಿನದ 24 ತಾಸು ಗ್ರಾಾಮದ ಮುಖ್ಯಭಾಗದಲ್ಲಿರುವ ಶ್ರೀಮಠದಲ್ಲಿ ಬೀಡುಬಿಟ್ಟಿಿದೆ. ಈ ವಿವಾದದ ಮಧ್ಯೆೆ ಎರ್ರೆೆಪ್ಪ ತಾತ ಅವರ ಧರ್ಮಪತ್ನಿಿ ಶ್ರೀಮತಿ ರತ್ಮಮ್ಮವ್ವ ಅವರು ಕೆಲ ಕಾಲದ ಅನಾರೋಗ್ಯದ ಕಾರಣ ಡಿಸೆಂಬರ್ 25 ರ ಮಧ್ಯಾಾಹ್ನ ಖಾಸಗಿ ಆಸ್ಪತ್ರೆೆಯಲ್ಲಿ ಅಸುನೀಗಿದರು.
ಆಂಬುಲೆನ್ಸ್ನಲ್ಲಿ ದೇಹವನ್ನು ಮೆರವಣಿಗೆಯಲ್ಲಿ ಕರೆತಂದ ಶ್ರೀಮತಿ ರತ್ಮಮ್ಮವ್ವ ಅವರ ಅನುಯಾಯಿಗಳು – ಶ್ರೀಮಠದ ಆವರಣದಲ್ಲಿಯೇ ಶರೀರದ ಅಂತ್ಯಕ್ರಿಿಯೆ ನೆರವೇರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನಲೆಯಲ್ಲಿ 150 ಕ್ಕೂ ಹೆಚ್ಚಿಿನ ಪೊಲೀಸ್ ಸಿಬ್ಬಂದಿ – ಅಧಿಕಾರಿಗಳು ಶ್ರೀಮಠ ಮತ್ತು ಕೊಳಗಲ್ಲು ಗ್ರಾಾಮದಲ್ಲಿ ಬೀಡುಬಿಟ್ಟು ಬಂದೋಬಸ್ತ್ ಏರ್ಪಡಿಸಿದ್ದರು.
ಶ್ರೀ ಎರ್ರೆೆಪ್ಪ ತಾತ ಅವರ ಪಾರ್ಥಿವ ಶರೀರದ ವಿವಾದವು ನ್ಯಾಾಯಾಲಯದಲ್ಲಿ ಇರುವ ಕಾರಣ, ಶುಕ್ರವಾರ ಮಧ್ಯಾಾಹ್ನ ಗ್ರಾಾಮದಲ್ಲಿ ನಡೆದ ಸಾರ್ವಜನಿಕರ ಶಾಂತಿ ಸಭೆಯಲ್ಲಿ, ಶ್ರೀಮತಿ ರತ್ಮಮ್ಮವ್ವ ಅವರ ಅಂತ್ಯಕ್ರಿಿಯೆಯನ್ನು ಶ್ರೀಮಠದ ಆವರಣದ ಹೊರಗಡೆ ಇರುವ ಶ್ರೀಮಠದ ಖಾಲಿ ಸ್ಥಳದಲ್ಲಿ ಧರ್ಮ-ಸಂಪ್ರದಾಯಗಳ ಪ್ರಕಾರ, ಭಕ್ತಾಾಧಿಗಳ ಸಮ್ಮುಖದಲ್ಲಿ ನೆರವೇರಿಸಲು ನಿರ್ಧರಿಸಲಾಯಿತು.
ಆ ಕ್ಷಣದಿಂದಲೇ ಕ್ರಿಿಯಾ ಸಮಾಧಿ ನಿರ್ಮಾಣದ ಕೆಲಸವನ್ನು ಭಕ್ತಾಾಧಿಗಳು ಪ್ರಾಾರಂಭಿಸಿದ್ದರು. ಶ್ರೀಮತಿ ರತ್ಮಮ್ಮವ್ವಳ ಶರೀರವನ್ನು ಗ್ರಾಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಬಿಗಿ ಬಂದೋಬಸ್ತ್ನಲ್ಲಿ ನೆರವೇರಿಸಲಾಯಿತು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಅಂತ್ಯ ಸಂಸ್ಕಾಾರದ ವಿಧಿ ಸಂಪ್ರದಾಯಗಳ ನೇತೃತ್ವವಹಿಸಿದ್ದರು. ಗ್ರಾಾಮಸ್ಥರು, ಭಕ್ತಾಾಧಿಗಳು ಮತ್ತು ಪೊಲೀಸರು – ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿ : ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಸಮಾಧಿ ವಿವಾದ ಸುಖಾಂತ ; ಶ್ರೀಮಠದ ಖಾಲಿ ಸ್ಥಳದಲ್ಲಿ ಅಂತ್ಯಕ್ರಿಯೆ

