ಸುದ್ದಿಮೂಲ ವಾರ್ತೆ ಗಂಗಾವತಿ, ಜ.21:
ಈಡಿಗ ಸ್ವಾಾಮೀಜಿಗಳ ಋಣ ಸಚಿವ ಶಿವರಾಜ ತಂಗಡಗಿ ಮೇಲಿದೆ ಆದರೆ ಅವರ ಕೊಡುಗೆ ಸಮಾಜಕ್ಕೇನು ಇಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ ಹೇಳಿದ್ದಾಾರೆ.
ಅವರು ಇಂದು ಈಡಿಗ ಸ್ವಾಾಮೀಜಿಯವರಿಂದ ನಡೆದ ಪಾದಯಾತ್ರೆೆಯು ಶ್ರೀರಾಮನಗರಕ್ಕೆೆ ಆಗಮಿಸಿದ್ದು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶಿವರಾಜ ತಂಗಡಗಿ ಈಡಿಗ ಸಮುದಾಯದಿಂದ ಮತ ಪಡೆದು ಸಮುದಾಯಕ್ಕೆೆ ಅನ್ಯಾಾಯ ಮಾಡಿದ್ದಾಾನೆ. ಅವರು ಶ್ರೀಗಳನ್ನು ನಿರ್ಲಕ್ಷಿಸಿದರೆ ಹುಷಾರ್! ತಂಗಡಿಗೆಗ ಸಚಿವ ಸ್ಥಾಾನ ಸಿಗುವಲ್ಲಿ ಶ್ರೀಗಳ ಪಾತ್ರ ದೊಡ್ಡದಿದೆ.ಮಂತ್ರಿಿ ಆದ್ಮೇಲೆ ಈಡಿಗ ಸಮಾಜವನ್ನು ತಂಗಡಗಿ ಮರೆತಿದ್ದಾಾನೆ. ತಂಗಡಗಿಗೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸ್ತಿಿವಿ ಎಂದು ಶ್ರೀನಾಥ ಎಚ್ಚರಿಸಿದ್ದಾಾರೆ.
ಈಡಿಗ ಸಮಾಜದ ನಾರಾಯಣಗುರು ಅಭಿವೃದ್ದಿ ನಿಗಮಕ್ಕೆೆ ಅನುದಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀಪ್ರಣವಾನಂದ ಸ್ವಾಾಮಿಗಳ ನೇತೃತ್ವದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ 700 ಕಿ.ಮೀ ಐತಿಹಾಸಿಕ ಪಾದಯಾತ್ರೆೆ ನಡೆಯುತ್ತಿಿದೆ. ಈ ಸಂದರ್ಭದಲ್ಲಿ ನಾರಾಯಣ ಗುರು ನಿಗಮಕ್ಕೆೆ 500 ಕೋಟಿ ಅನುದಾನ ನೀಡಬೇಕು. ಈಡಿಗ, ಬಿಲ್ಲವ ಮತ್ತು ನಾಮಧಾರಿ ಸೇರಿದಂತೆ ಸಮಸ್ತ ಹಿಂದುಳಿದ ವರ್ಗಗಳ ಹಿತರಕ್ಷಣೆಗಾಗಿ ಶ್ರೀ ಪ್ರಣವಾನಂದ ಸ್ವಾಾಮಿಗಳ ನೇತೃತ್ವದಲ್ಲಿ ಪಾದಯಾತ್ರೆೆ.700 ಕಿ.ಮೀ ಪಾದಯಾತ್ರೆೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ ಎಂದರು.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭವ್ಯ ಪ್ರತಿಮೆ ಸ್ಥಾಾಪನೆಯಾಗಬೇಕು. ಆಂಧ್ರ-ತೆಲಂಗಾಣ ಮಾದರಿಯಲ್ಲಿ ಈಚಲ ಮತ್ತು ತಾಳೆ ಮರಗಳಿಂದ ಶುದ್ಧ ಸೇಂದಿ ಇಳಿಸಲು ಹಾಗೂ ಮಾರಾಟ ಮಾಡಲು ಅಧಿಕೃತ ಅನುಮತಿ ನೀಡಬೇಕು. ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕು.. ಈಗ ಶ್ರೀಗಳು ನಿಮ್ಮ ಕ್ಷೇತ್ರಕ್ಕೆೆ ಬಂದಾಗ ಅವರನ್ನು ಗೌರವಿಸಿ, ಪಾದಯಾತ್ರೆೆಗೆ ಬೆಂಬಲ ನೀಡಬೇಕು. ಮುಖ್ಯಮಂತ್ರಿಿಗಳ ಮೇಲೆ ಒತ್ತಡ ಹೇರಿ ಬೇಡಿಕೆ ಈಡೇರಿಸದಿದ್ದರೆ ಸಮುದಾಯದ ವಿಶ್ವಾಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈಡಿಗ ಸಮಾಜಕ್ಕೆ ತಂಗಡಗಿ ಕೊಡುಗೆ ಏನು ಇಲ್ಲ- ಶ್ರೀನಾಥ

