ಹರಿಹರ, ೆ.09:
ತೋಟಗಾರಿಕೆ ಮತ್ತು ಗಣಿ ಹಾಗೂ ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಸಚಿವ ಸ್ಥಾಾನಕ್ಕೆೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಸತ್ಯಕ್ಕೆೆ ದೂರವಾದ ಸಂಗತಿ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆ ಜಿಲ್ಲೆ ಹರಿಹರ ತಾ
ಲೂಕಿನ ಮಹರ್ಷಿ ವಾಲ್ಮೀಕಿ ಗುರುಪೀಠ ಆವರಣದ ಹೆಲಿ ಪ್ಯಾಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಎಸ್ಎಸ್ ಮಲ್ಲಿಕಾರ್ಜುನ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂಬ ಪ್ರಶ್ನೆೆಗೆ ಪ್ರತಿಕ್ರಿಿಯೆ ನೀಡಿದರು. ಅವರು ನನ್ನ ಹತ್ತಿಿರ ಬಂದೂ ಇಲ್ಲ, ರಾಜೀನಾಮೆ ಕೊಟ್ಟೂ ಇಲ್ಲ. ಎಲ್ಲಾ ಸತ್ಯಕ್ಕೆೆ ದೂರವಾದ ಸಂಗತಿ ಎಂದು ಹೇಳಿದರು.
ವಾಲ್ಮೀಕಿ ಜನಾಂಗದವರಿಗೆ ಸಚಿವ ಸ್ಥಾಾನ ಕೊಡಬೇಕೆಂದು ಬೇಡಿಕೆ ಇರುವ ಬಗ್ಗೆೆ ಪ್ರತಿಕ್ರಿಿಯೆ ನೀಡಿದ ಸಿಎಂ, ನಾವು ಸಚಿವರನ್ನು ತೆಗೆದುಹಾಕಿಲ್ಲ. ಕಾರಣಾಂತರದಿಂದ ರಾಜೀನಾಮೆ ಕೊಡುವ ಪರಿಸ್ಥಿಿತಿ ಬಂತು. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಿಗಣಿಸಲಾಗುವುದು ಎಂದರು.
ಬಜೆಟ್ ಬಗ್ಗೆೆ ಶೀಘ್ರವೇ ದಿನಾಂಕ:
ಮಾರ್ಚ್ನಲ್ಲಿ ರಾಜ್ಯದ ಬಜೆಟ್ ಮಂಡನೆ ಮಾಡಲಾಗುವುದು. ಈ ಸಂಬಂಧ ಇನ್ನು ಒಂದೆರಡು ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆೆಯೊಂದಕ್ಕೆೆ ಉತ್ತರಿಸಿದರು.
ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆ ಸತ್ಯಕ್ಕೆ ದೂರ: ಸಿಎಂ

