ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಬೆಂಗಳೂರು ಮೂಲದ ಎಚ್ಐಎಸ್ ಎನ್ನುವ ಹೆಸರಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾಾರ್ಥಿಗಳಿಗೆ ಹೆಚ್ಚಿಿನ ಅಂಕ ಪಡೆಯಲು ಸಾಮಾಗ್ರಿಿ, ಶಿಷ್ಯ ವೇತನ ನೀಡುವುದಾಗಿ ಹಣ ವಸೂಲಿಗೆ ವ್ಯಕ್ತಿಿಯೊಬ್ಬ ಮುಂದಾಗಿದ್ದು ಪಾಲಕರು ಎಚ್ಚರದಿಂದ ಇರುವಂತೆ ಬಿಎಸ್ಪಿ ಜಿಲ್ಲಾಾಧ್ಯಕ್ಷ ಜೈಭೀಮ್ ಮನವಿ ಮಾಡಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸಂಸ್ಥೆೆಯ ಮುಖ್ಯಸ್ಥನೆಂದು ಮಂಜುನಾಥ ತಂದೆ ನಾಗರಾಜ ಎಂಬ ವ್ಯಕ್ತಿಿ ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆಯುವಂತೆ ತರಬೇತಿ ನೀಡಲು ನಾಲ್ಕೈದು ಜನರ ನೇಮಿಸಿಕೊಂಡು ಪಾಲಕರ, ವಿದ್ಯಾಾರ್ಥಿಗಳ ಮಾಹಿತಿ ಪಡೆದು ಮೊಬೈಲ್ ಮೂಲಕ ಸಂಪರ್ಕ ಮಾಡುತ್ತಿಿರುವುದಾಗಿ ಗೊತ್ತಾಾಗಿದೆ. ಆ ಮೂಲಕ ಹಣದ ಬೇಡಿಕೆ ಇಟ್ಟು ಹೆಚ್ಚಿಿನ ಅಂಕ ಬರುವಂತೆ ನೋಡಿಕೊಳ್ಳುವ ಜೊತೆಗೆ ಅಂಕ ಹೆಚ್ಚಿಿಗೆ ಪಡೆದ ಮಕ್ಕಳಿಗೆ ಶಿಷ್ಯ ವೇತನ ಸಿಗುವುದಾಗಿ ಸುಳ್ಳು ಹೇಳಿ ಪಾಲಕರಿಂದ ಹಣ ವಸೂಲಿ ಮಾಡಿದ ಆರೋಪ ಮಂಡ್ಯ, ಬೆಂಗಳೂರು ಹಾಗೂ ರಾಯಚೂರು ಜಿಲ್ಲೆೆಗಳಲ್ಲಿದೆ ಎಂದರು.
ಬೆಂಗಳೂರಿನ ಎರಡು ಠಾಣೆಗಳಲ್ಲಿ ಈ ಬಗ್ಗೆೆ ದೂರು ದಾಖಲಾಗಿದ್ದು ಸಂಸ್ಥೆೆಯ ವಿಳಾಸದಲ್ಲಿ ಕಚೇರಿಯೇ ಇಲ್ಲಘಿ. ವ್ಯಕ್ತಿಿಯೂ ಕಾಣುತ್ತಿಿಲ್ಲಘಿ. ಹೀಗಾಗಿ, ರಾಯಚೂರು ಜಿಲ್ಲೆೆಯ ಎಸ್ಎಸ್ಎಲ್ಸಿ ವಿದ್ಯಾಾರ್ಥಿಗಳು ಮತ್ತವರ ಪಾಲಕರು ಇಂತಹ ಸುಳ್ಳು ಆಸೆ, ಆಮಿಷೆಗೆ ಬಲಿಯಾಗಿ ಮೋಸ ಹೋಗದಂತೆ ಕೋರಿದರು.
ಹಾಗೇನಾದರೂ ಕರೆ ಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಯಾವುದೇ ವಿವರ ಕೊಡಬಾರದು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ವಿಶ್ವನಾಥ, ಗೋಪಾಲಕೃಷ್ಣಘಿ, ಶಿವಪ್ರಕಾಶ ಇದ್ದರು.

