ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಕೈಗೊಂಡಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಗಣತಿಗೆ ಅವಧಿ ವಿಸ್ತರಿಸಿರುವ ಬೆನ್ನಲ್ಲೆೆ ಕಲ್ಯಾಾಣ ಕರ್ನಾಟಕದಲ್ಲಿ ಮೂರು ಜಿಲ್ಲೆೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು ಉಳಿದ ಮೂರು ಜಿಲ್ಲೆೆಗಳಲ್ಲಿ ನೀರಸ ಪ್ರತಿಕ್ರಿಿಯೆ ವ್ಯಕ್ತವಾಗಿರುವುದು ರಾಜ್ಯದ ಅಂಕಿ ಅಂಶಗಳು ಬಹಿರಂಗ ಪಡಿಸಿವೆ.
ಸರ್ವರ್ ಸಮಸ್ಯೆೆ, ವಿಳಾಸದ ಮಧ್ಯೆೆಯೂ ಗಣತಿದಾರ ಶಿಕ್ಷಕರು ಹಾಗೂ ಇತರ ಇಲಾಖೆ ಸಿಬ್ಬಂದಿಗಳು ಕಲ್ಯಾಾಣ ಕರ್ನಾಟಕದ ಅಖಂಡ ಬಳ್ಳಾಾರಿ ವಿಜಯನಗರ, ರಾಯಚೂರು ಮತ್ತು ಕೊಪ್ಪಳದಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಕರ್ನಾಟಕದ ರ್ಯಾಾಂಕಿಂಗ್ನಲ್ಲಿ ಅಖಂಡ ಬಳ್ಳಾಾರಿ ಜಿಲ್ಲೆೆ 2ನೇ ಸ್ಥಾಾನದಲ್ಲಿದೆ. ಕಲ್ಯಾಾಣ ಕರ್ನಾಟಕ ಭಾಗದ ಜಿಲ್ಲೆೆಗಳಿಗೆ ಹೋಲಿಸಿದರೆ ಬೀದರ್ ಜಿಲ್ಲೆೆ ಹಾಗೂ ಯಾದಗಿರಿ ಜಿಲ್ಲೆೆಗಳು ಕೊನೆಯ ಎರಡು ಸ್ಥಾಾನ ಹಂಚಿಕೊಂಡಿವೆ.
ಕಲ್ಯಾಾಣ ಕರ್ನಾಟಕದ ಜಿಲ್ಲೆೆಗಳಾದ ಬಳ್ಳಾಾರಿ-ವಿಜಯ ನಗರ ಜಿಲ್ಲೆೆಗಳಲ್ಲಿ ಸಮೀಕ್ಷೆೆಗೆ ಗುರುತಿಸಿದ 35 ಲ 57 ಸಾ 930 ಜನಸಂಖ್ಯೆೆಯ ಪೈಕಿ 29 ಲ 27 ಸಾ 739 ಜನ ಸಮೀಕ್ಷೆೆಗೊಳಪಟ್ಟಿಿದ್ದರೆ, ರಾಯಚೂರು ಜಿಲ್ಲೆೆಯಲ್ಲಿ 23 ಲ 60 ಸಾ 365 ಜನಸಂಖ್ಯೆೆಯ ಪೈಕಿ 21 ಲ 35 ಸಾ 49 ಜನರ ಗಣತಿ ಮಾಡಲಾಗಿದೆ.
ಅಲ್ಲದೆ, ಕೊಪ್ಪಳ ಜಿಲ್ಲೆೆಯಲ್ಲಿ 17 ಲ 72 ಸಾ 879 ಜನರ ಪೈಕಿ 14 ಲ 73 ಸಾ 830 ಜನರ ಮಾಹಿತಿ ಸಂಗ್ರಹಿಸಿದ್ದರೆ, ಕಲಬುರ್ಗಿ ಜಿಲ್ಲೆೆಯ 29 ಲ 71 ಸಾ 325 ಜನರ ಪೈಕಿ 25 ಲ 86 ಸಾ 589 ಜನರ ಗಣತಿ ಪೂರ್ಣಗೊಳಿಸಲಾಗಿದೆ.
ಬೀದರ್ ಜಿಲ್ಲೆೆಯಲ್ಲಿ 20 ಲ 30 ಸಾ 532 ಜನರ ಗಣತಿ ಮಾಡಬೇಕಿತ್ತು ಈ ಪೈಕಿ 16 ಲ 33 ಸಾ 577 ಜನರ ಮಾಹಿತಿ ಸಂಗ್ರಹಿಸಿದ್ದರೆ, ಯಾದಗಿರಿ ಜಿಲ್ಲೆೆಯ 15 ಲ 65 ಸಾ 628 ಜನರ ಪೈಕಿ 12 ಲ 15 ಸಾ 507 ಜನರ ಸಂಪೂರ್ಣ ಮಾಹಿತಿಯನ್ನು ಶಿಕ್ಷಕರು, ಸಿಬ್ಬಂದಿಗಳು ಗಣತಿ ಪೂರ್ಣಗೊಳಿಸಿದ್ದಾಾರೆ.
ಈಗ ಪುನಃ ಗಣತಿಗೆ ರಾಜ್ಯದಾದ್ಯಂತ ಸರ್ಕಾರ ಅವಧಿ ಅಕ್ಟೋೋಬರ್ 30ರವರೆಗೆ ಬೀದರ್ ಜಿಲ್ಲೆೆಯಲ್ಲಿ ಅ.31ರ ಅಂತಿಮ ದಿನದವರೆಗೂ ವಿಸ್ತರಿಸಲಾಗಿದ್ದು ಶಿಕ್ಷಕರ ಕೈ ಬಿಟ್ಟು ಇತರ ಇಲಾಖೆಗಳ ಸಿಬ್ಬಂದಿಗಳ ಗಣತಿಗೆ ನಿಯೋಜಿಸುವ ಇಂಗಿತ ವ್ಯಕ್ತಪಡಿಸಿದೆ.
ರಾಯಚೂರು ಜಿಲ್ಲೆೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಗಣತಿಯ ಸಮಗ್ರ ವಿವರ ಗಮನಿಸುವುದಾದರೆ 4 ಲ 16 ಸಾ 856 ಕುಟುಂಬಗಳ ಸಮೀಕ್ಷೆೆಯ ಗುರಿ ಇದ್ದು ಪ್ರತಿ ದಿನ 29 ಸಾ 750 ಕುಟುಂಬಗಳ ಸಮೀಕ್ಷೆೆ ಮಾಡಬೇಕಿತ್ತುಘಿ. ಅ.18ರ ವರೆಗೆ 5 ಲ 18 ಸಾ 972 ಕುಟುಂಬಗಳ ಸಮೀಕ್ಷೆೆ ಮುಗಿಸಲಾಗಿದೆ ಆದರೆ, ಸುಮಾರು 1 ಲಕ್ಷಕ್ಕೂ ಅಧಿಕ ಕುಟುಂಬಗಳು ಹೆಚ್ಚಾಾಗಿದ್ದು ಎಲ್ಲಿ ಸಮಸ್ಯೆೆಯಾಗಿದೆ ಎಂಬುದರ ಬಗ್ಗೆೆ ಸದ್ಯ ಜಿಲ್ಲೆೆಯಲ್ಲಿ ಮೇಲ್ವಿಿಚಾರಣೆಯ ಹೊಣೆ ಹೊತ್ತ ಸಿಆರ್ಪಿ, ಬಿಆರ್ಪಿ ಮತ್ತು ಇತರ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಿದ್ದಾಾರೆ. ಆದರೆ, ಮನೆಗಳ ಸಂಖ್ಯೆೆ ಹೆಚ್ಚಿಿದೆ. ಜನಸಂಖ್ಯೆೆಯ ಗಣತಿಯಲ್ಲಿ ಇನ್ನೂ ಸುಮಾರು ಮೂರುವರೇ ಲಕ್ಷ ಜನರ ಗಣತಿ ಮಾಡುವುದು ಬಾಕಿ ಇದೆ ಎಂದು ಲೆಕ್ಕ ತೋರಿಸುತ್ತಿಿದೆ.
ಗಣತಿದಾರರು ಮನೆಗೆ ತೆರಳಿದಾಗ ಪಡಿತರ ಚೀಟಿಯಲ್ಲಿರುವ ಸದಸ್ಯರನ್ನು ಮಾತ್ರ ಪರಿಗಣಿಸಿದ್ದು ಉಳಿದವರ ಪಟ್ಟಿಿಯಲ್ಲಿ ಸೇರಿಸದೆ ಇರುವುದು ಜನಸಂಖ್ಯೆೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಕುಟುಂಬಗಳ ಸಂಖ್ಯೆೆಯಲ್ಲೂ ಹೆಚ್ಚಳವಾಗಲು ಮನೆಗಳ ಸಂಖ್ಯೆೆಯೂ ಕಾರಣ ಎನ್ನಲಾಗಿದೆ. ಹೀಗಾಗಿ, ಮುಂದಿನ ಒಂದು ವಾರ ಇದರ ತಾಳೆ ಮಾಡಿ ಲೆಕ್ಕ ಸರಿದೂಗಿಸುವ ಕೆಲಸ ಮಾತ್ರ ಬಾಕಿ ಇರುವುದರಿಂದ ಶಾಲೆ, ಅಂಗನವಾಡಿಗಳಿಗೆ ಗಣತಿದಾರರು ತೆರಳಿ ಪರಿಶೀಲಿಸುವ ಕೆಲಸ ಪ್ರಗತಿಯಲ್ಲಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.