ಸುದ್ದಿಮೂಲ ವಾರ್ತೆ ಸಿಂಧನೂರು, ಅ.16:
ಕಲ್ಯಾಾಣ ಕರ್ನಾಟಕ ಭಾಗದಲ್ಲಿ ರೈತರು ಉತ್ಪಾಾದಿಸುವ ಆಹಾರ ಬೆಳೆಗಳಿಗೆ ಪ್ರೋೋತ್ಸಾಾಹ ನೀಡಿ ಉತ್ಪನ್ನ ಹೆಚ್ಚಿಿಸುವ ಜೊತೆಗೆ ಐಟಿಸಿ ಸಹಭಾಗಿತ್ವದಲ್ಲಿ ಮಾರುಕಟ್ಟೆೆ ಕಲ್ಪಿಿಸಿ ರೈತ ಸಬಲೀಕರಣಕ್ಕೆೆ ಕೇಂದ್ರ ಸರಕಾರ ಮಹತ್ವದ ಹೆಜ್ಜೆೆ ಇಟ್ಟಿಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಗುರುವಾರ ತಾಲೂಕಿನ ಜವಳಗೇರಾ ಗ್ರಾಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿಿ ಹಾಗೂ ನಬಾರ್ಡ್ ಸಹಭಾಗಿತ್ವದಲ್ಲಿ 2.54 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೃಷಿ ಸಂಸ್ಕರಣೆ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಾಟಿಸಿ ಅವರು ಮಾತನಾಡಿದರು. ಬೀದರ್ನಲ್ಲಿ – ಸೋಯಾ, ಕಲಬುರಗಿ- ಜೋಳದ ಹಿಟ್ಟು, ಯಾದಗಿರಿ- ಶೇಂಗಾ ಎಣ್ಣಿಿ, ಬಳ್ಳಾಾರಿ- ಮೆಣಸಿನಕಾಯಿ ಪೌಂಡರ್, ಕೊಪ್ಪಳ – ಮಾವಿನಕಾಯಿ ಉಪ್ಪಿಿನಕಾಯಿ, ವಿಜಯನಗರ- ಉಪ್ಪಿಿನಕಾಯಿ, ರಾಯಚೂರು ಜಿಲ್ಲೆೆಯಲ್ಲಿ ತೊಗರಿ ಮತ್ತು ಕಡಲೆ ಬೆಳೆ ಸಂಸ್ಕರಣ ಘಟಕ ಉದ್ಘಾಾಟನೆ ಮಾಡಿದ್ದೇವೆ. ಇಲ್ಲಿ ಉತ್ಪಾಾದನೆಗೊಳ್ಳುವ ಗುಣಮಟ್ಟದ ದೇಶ ಸೇರಿ ವಿದೇಶಕ್ಕೂ ರ್ತುಗೊಳ್ಳಲಿವೆ ಎಂದರು.
ರಾಯಚೂರು ಜಿಲ್ಲೆೆಯಾದ್ಯಂತ ಅಂದಾಜು 40 ಕೃಷಿ ಸಂಸ್ಕರಣ ಘಟಕಗಳ ಸ್ಥಾಾಪನೆ ಮಾಡಿ ಸಂಸ್ಕರಣೆಗೊಳಪಡಿಸುವಷ್ಟು ರಾಯಚೂರು ಜಿಲ್ಲೆೆಯೊಂದರಲ್ಲಿಯೇ ಪ್ರತಿ ವರ್ಷ ಅಂದಾಜು ಸಾವಿರಾರು ಮೆಟ್ರಿಿಕ್ ಟನ್ ದಷ್ಟು ತೊಗರಿ ಉತ್ಪನ್ನ ಬರುತ್ತದೆ ಎನ್ನುವ ಮಾಹಿತಿ ಇದೆ. ತುಂಗಭದ್ರಾಾ ಮತ್ತು ಕೃಷ್ಣಾಾ ನದಿಗಳ ಮಧ್ಯೆೆದ ಈ ಭೂಮಿಯು ಅತ್ಯಂತ ಸಂಪದ್ಭರಿತವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಅಂದಾಜು 80,000 ಮೆಟ್ರಿಿಕ್ ಟನ್ ತೊಗರಿ ಉತ್ಪನ್ನ ಹಾಗೂ ಅಂದಾಜು 34,000 ಮೆಟ್ರಿಿಕ್ ಟನ್ ಕಡಲೆ ಉತ್ಪನ್ನ ಬರುತ್ತಿಿದ್ದು, ಯಾವುದೇ ಉತ್ಪನ್ನ ಇರಲಿ ರೈತರು ಆಯಾ ಉತ್ಪನ್ನ ನೇರವಾಗಿ ಮಾರುಕಟ್ಟೆೆಗೆ ಸಾಗಿಸದೇ ಸಂಸ್ಕರಣೆಗೊಳಪಡಿಸಿ ಪ್ಯಾಾಕೇಟ್ ಅಥವಾ ಬೇರೆ ಬೇರೆ ರೂಪದಲ್ಲಿ ಮಾರಾಟ ಮಾಡಿದಲ್ಲಿ ಉತ್ತಮ ಬೆಲೆ ಸಿಗಲಿದೆ. ಈ ದಿಶೆಯಲ್ಲಿ ಯೋಚಿಸಿ ಕೇಂದ್ರ ಸರ್ಕಾರವು ಕೃಷಿ ಸಂಸ್ಕರಣಾ ಘಟಕಗಳ ಸ್ಥಾಾಪನೆಗೆ ಹೆಚ್ಚಿಿನ ಒತ್ತು ನೀಡುತ್ತಿಿದೆ. ಇದರ ಭಾಗವಾಗಿ ಕಲ್ಯಾಾಣ ಕರ್ನಾಟಕ ಭಾಗದ ಎಲ್ಲಾಾ ಜಿಲ್ಲೆೆಗಳಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆೆ ಹಸಿರುನಿಶಾನೆ ತೋರಲಾಗಿದೆ. ರೈತರು ಈ ಕೃಷಿ ಸಂಸ್ಕರಣಾ ಘಟಕಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ಮಾಡಿದರು.
ಕೃಷಿ ಸಂಸ್ಕರಣಾ ಘಟಕಗಳ ಸ್ಥಾಾಪನೆಗೆ ಕೃಷಿ ಮತ್ತು ಗ್ರಾಾಮೀಣಾಭಿವೃದ್ಧಿಿ ಬ್ಯಾಾಂಕ್ (ನಬಾರ್ಡ್) ನಮ್ಮೊೊಂದಿಗೆ ಕೈಜೋಡಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ. ರಾಜ್ಯ ಕೇಂದ್ರದಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾಾ ಕೇಂದ್ರದಲ್ಲಿನ ಜಿಲ್ಲಾಾಧಿಕಾರಿಗಳು, ಜಿಲ್ಲಾಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ ಅಧಿಕಾರಿಗಳು ಇಂತಹ ಕೃಷಿ ಸಂಸ್ಕರಣಾ ಘಟಕಗಳ ಬಲವರ್ಧನೆಯ ಬಗ್ಗೆೆ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.
ನೀತಿ ಆಯೋಗದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆೆಗಳಲ್ಲಿ ಮಹತ್ವಾಾಕಾಂಕ್ಷಿ ಜಿಲ್ಲಾಾ ಕಾರ್ಯಕ್ರಮಗಳು ಜಾರಿಯಲ್ಲಿವೆ. ಈ ಭಾಗದಲ್ಲಿನ ಮಹತ್ವಾಾಕಾಂಕ್ಷಿ ಯೋಜನೆಗಳು ಮತ್ತು ಇತರೆ ವಿಷಯಗಳ ಬಗ್ಗೆೆ ಪರಿಶೀಲನೆ ನಡೆಯುತ್ತಿಿದೆ. ಕಲ್ಯಾಾಣ ಕರ್ನಾಟಕ ಭಾಗದ ಜಿಲ್ಲೆೆಗಳಲ್ಲಿ ರಸ್ತೆೆ, ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಿಸುವ ಕಾರ್ಯವು ಅಚ್ಚುಕಟ್ಟಾಾಗಿ ಆಗಬೇಕಿದೆ. ನೀತಿ ಆಯೋಗ ನಡೆಸಿದ ಮಹತ್ವಾಾಕಾಂಕ್ಷಿ ಜಿಲ್ಲಾಾ ರ್ಯಾಾಂಕಿಂಗ್ನಲ್ಲಿ 2020-23ನೇ ಸಾಲಿನಲ್ಲಿ ರಾಯಚೂರು ಜಿಲ್ಲೆೆಗೆ ಟಾಪ್ ಒನ್ ಸ್ಥಾಾನ ಮತ್ತು ದಕ್ಷಿಣ ಭಾರತದಲ್ಲಿ ಮಸ್ಕಿಿ ತಾಲೂಕಿಗೆ ಟಾಪ್ 8ನೇ ಸ್ಥಾಾನ ಲಭಿಸಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರೈತರಿಗೆ ಮಣ್ಣಿಿನ ಆರೋಗ್ಯ ಕಾರ್ಡ ನೀಡುವುದಕ್ಕೆೆ ಆದ್ಯತೆ ನೀಡಿದ್ದೇವೆ. 24.74 ಕೋಟಿ ರೈತರಿಗೆ ಕಿಸಾನ್ ಕಾರ್ಡ್ ನೀಡಿದ್ದೇವೆ. 8000 ಕೋಟಿಯಷ್ಟು ಮಣ್ಣಿಿನ ಪರೀಕ್ಷೆ ನಡೆಸಿದ್ದೇವೆ. ಕೃಷಿ ಸಿಂಚಾಯಿ ಯೋಜನೆಯಡಿ 93,000 ಕೋಟಿ ರೂ.ನಷ್ಟು ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡಿದ್ದೇವೆ. ಪ್ರಧಾನಮಂತ್ರಿಿ ಸಲ ಭಿಮಾ ಯೋಜನೆಯಡಿ 1.74 ಲಕ್ಷ ಕೋಟಿ ರೂ. ಪರಿಹಾರ ಅನ್ನದಾತರಿಗೆ ನೀಡಿದ್ದೇವೆ. ಕಿಸಾನ್ ಸಮ್ಮಾಾನ್ ನಿಧಿ ಯೋಜನೆಯಡಿ ತಲಾ ಒಬ್ಬ ರೈತರಿಗೆ ವಾರ್ಷಿಕ 6 ಸಾವಿರ ರೂ.ನಂತೆ ಇದುವರೆಗೆ 3.69 ಲಕ್ಷ ಕೋಟಿ ರೂ.ನಷ್ಟು ಮೊತ್ತವನ್ನು ಕಿಸಾನ್ ಸಮ್ಮಾಾನ್ ನಿಧಿಗೆ ಬಳಸಿದ್ದೇವೆ ಎಂದು ಅವರು ತಿಳಿಸಿದರು.
ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ಮಾತನಾಡಿ, ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕವು ಈ ಭಾಗದ ರೈತರ ಅಭ್ಯುದಯಕ್ಕೆೆ ಕಾರಣವಾಗಲಿದೆ. ಸಂಸ್ಕರಣಾ ಉತ್ಪನ್ನಗಳಿಗೆ ಐಟಿಸಿ ಸಹಯೋಗದಲ್ಲಿ ಮಾರುಕಟ್ಟೆೆ ಒದಗಿಸಲಾಗುತ್ತಿಿದೆ. ಇದರಿಂದ ರೈತರ ಆದಾಯವೂ ಹೆಚ್ಚಳವಾಗಲಿದೆ. ಈ ಕೇಂದ್ರಗಳ ಲಾಭ ರೈತರು ಪಡೆದುಕೊಳ್ಳಬೇಕು ಎಂದರು.
ನಬಾರ್ಡ ಅಧ್ಯಕ್ಷ ಶಾಜಿ ಕೆ.ವಿ., ಐಟಿಸಿ ಅಧ್ಯಕ್ಷ ಸಂಜೀವ ಪುರಿ ವೇದಿಕೆಯಲ್ಲಿದ್ದರು.
ಸನ್ಮಾಾನ:
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಬಿಜೆಪಿ ಮುಖಂಡ ತ್ರಿಿವಿಕ್ರಮ ಜೋಷಿ, ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ ಹಾಗೂ ಇತರರು ಸನ್ಮಾಾನಿಸಿ ಗೌರವಿಸಿದರು.
ಕೃಷಿ ಸಂಸ್ಕರಣೆ ಮತ್ತು ರೈತರ ತರಬೇತಿ ಘಟಕಗಳ ಆರಂಭ : ಕಲ್ಯಾಾಣ ಕರ್ನಾಟಕದಲ್ಲಿ ರೈತರ ಅಭಿವೃದ್ದಿ ಪರ್ವ ಆರಂಭ ರೈತ ಸಬಲೀಕರಣಕ್ಕೆೆ ಕೇಂದ್ರ ಸರಕಾರ ಮಹತ್ವದ ಹೆಜ್ಜೆೆ – ನಿರ್ಮಲಾ ಸೀತರಾಮನ್
