ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ 29: ಇಂದಿನಿಂದ ಏಪ್ರಿಲ್ 06ರ ವರೆಗೆ ಬೆಂಗಳೂರು ಕರಗಕ್ಕೆ ಅದ್ದೂರಿ ತಯಾರಿ ನಡೆದಿದೆ. ಇಂದು ರಾತ್ರಿ 10 ಗಂಟೆಗೆ ರಥೋತ್ಸವ ಮತ್ತು ಮುಂಜಾನೆ 3 ಗಂಟೆಗೆ ಧ್ವಜರೋಹಣ ನಡೆಸುವುದರ ಮೂಲಕ ಕರಗಕ್ಕೆ ಚಾಲನೆ ನೀಡಲಾಗುವುದು.
ಇಂದಿನಿಂದ ಏಪ್ರಿಲ್ 06ರ ವೆರೆಗೆ 11 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 12.30 ಕ್ಕೆ ದ್ರೌಪದಮ್ಮನ ಕರಗ ಕುಂಬಾರಪೇಟೆ, ನಗರ್ತಪೇಟೆ, ಗೊಲ್ಲರಪೇಟೆಗಳಲ್ಲಿ ಸಂಚರಿಸಲಿದೆ.
ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೆ ಕೂಡ ಕರಗ ಭೇಟಿ ನೀಡಲಿದೆ. ಏಪ್ರಿಲ್ 7 ರ ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಲಿದೆ. ಏಪ್ರಿಲ್ 8 ರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜರೋಹಣ ಮೂಲಕ ನೆರವೇರಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ, ಚುನಾವಣೆಯ ಹಿನ್ನೆಲೆ ವೇದಿಕೆ ಕಾರ್ಯಕ್ರಮವಿರುವುದಿಲ್ಲ, ಅಹ್ವಾನಿತ ಗಣ್ಯರಿರು ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಯಾವುದೇ ರೀತಿ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ . ಸಾಮಾನ್ಯ ಜನರಂತೆ ದೇವಲಾಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು ಎಂದರು.
ಪ್ರತಿ ವರ್ಷವು ಚೈತ್ರ ಮಾಸದಂದು ನೆರವೇರುವ ಈ ಹಬ್ಬ ಕರಗವು ಹೂವಿನಿಂದ ಅಲಂಕರಿಸಿದ ಮಣ್ಣಿನ ಮಡಕೆ ಆಗಿದೆ. ಇದನ್ನು ಮಹಿಳೆಯಂತೆ ಅಲಂಕರಿಸುವ ತಿಗಳರ ಪುರುಷರು ತಲೆ ಮೇಲೆ ಹೊತ್ತುಕೊಳ್ಳುವುದು ಇದರ ಪದ್ದತಿಯಾಗಿದೆ. ಇದನ್ನು ತಮಿಳುನಾಡಿನಲ್ಲಿ ತಿಗಳರ ಹಬ್ಬ ಎಂದು ಆಚರಿಸಲ್ಪಡುತ್ತದೆ.