ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.09:
ಬೆಂಗಳೂರು ಗ್ರಾಾಮಾಂತರ ಜಿಲ್ಲೆ ಹೊಸಕೋಟೆಯ ಕೆ.ಪಿ.ನಾಯಕ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026ಕ್ಕೆೆ ಸ್ಪರ್ಧೆ ಮಾಡಲಿದ್ದು ನಮ್ಮ ತಾಲೂಕಿನ ಎಲ್ಲ ವಕೀಲ ಬಂಧುಗಳು ಕೆ.ಪಿ.ನಾಯಕ ಅವರನ್ನು ಬೆಂಬಲಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ ಹೇಳಿದರು.
ಪಟ್ಟಣದ ವಕೀಲರ ಸಂಘದ ಭವನದಲ್ಲಿಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಇವತ್ತು ವಕಿಲರಿಗೆ ಅನೇಕ ಸಮಸ್ಯಗಳಿದ್ದು ನಮಗೆ ಭದ್ರತೆ ಇಲ್ಲ. ಈ ಎಲ್ಲಾಾ ದೃಷ್ಟಿಿ ಕೋನ ಇಟ್ಟುಕೊಂಡು ನಮಗೆ ಸಹಕಾರ ನೀಡುವ ಕೆ.ಪಿ.ನಾಯಕರವರಿಗೆ ಮೊದಲನೇ ಪ್ರಾಾಶಸ್ತ್ಯದ ಮತವನ್ನು ನೀಡುವ ಮೂಲಕ ಅವರನ್ನು ಜಯಶೀಲರನ್ನಾಾಗಿ ಮಾಡುವ ಹೋಣೆಗಾರಿಕೆ ನಮ್ಮ ನಿಮ್ಮ ಮೇಲಿದೆ ಎಂದರು.
ಹಿರಿಯ ವಕೀಲ ವೇಣುಗೋಪಾಲ ಮಾತನಾಡಿ ಕೆ.ಪಿ.ನಾಯಕರವರು ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದವರಾಗಿದ್ದಾರೆ ಅವರು ಸರಳ ಹಾಗೂ ಉತ್ತಮ ವ್ಯಕ್ತಿಿ ಯಾಗಿದ್ದು ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ 2026 ಚುನಾವಣೆಯಲ್ಲಿ ಹಿರಿಯ ವಕೀಲರ ಮಾರ್ಗದರ್ಶನದಂತೆ ಸ್ಪರ್ಧೆಮಾಡುತ್ತಿಿದ್ದು ತಮ್ಮೆೆಲ್ಲರ ಸಹಕಾರ ಮತ್ತು ಬೆಂಬಲ ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ವಕೀಲರ ಪರಿಷತ್ತು ಚುನಾವಣೆ 2026ರ ಸ್ಪರ್ಧೆಯಲ್ಲಿರುವ ಕೆ.ಪಿ.ನಾಯಕ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ವಕೀಲರ ಸಂರಕ್ಷಣಾ ಕಾಯ್ದೆೆ ಜಾರಿಗೆ ಬಂದಿದ್ದರೂ ಸಹ ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿಿರುವ ದೌರ್ಜನ್ಯ,ಹಲ್ಲೆ,ಕೊಲೆ,ಮುಂತಾದವುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಶೀಘ್ರವಾಗಿ ವಕೀಲರ ಕಾಯ್ದೆೆಗೆ ಅಗತ್ಯ ತಿದ್ದುಪಡಿ ಮಾಡಿಸುವುದು ಸೇರಿದಂತೆ ನಾನು ವಕೀಲರ ಕಷ್ಟ ಸುಖಗಳಲ್ಲಿ ಭಾಗಯಾಗುತ್ತಾಾನೆ ಅದ್ದರಿಂದ ತಾವುಗಳು ಪ್ರಥಮ ಪ್ರಾಾಶಸ್ತ್ಯದ ನೀಡಿ ನಿಮ್ಮಗಳ ಸೇವೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ವಕೀಲರಾದ ಬಿ.ಹಾಲೇಶ, ಕೋಡಿಹಳ್ಳಿಿ ಪ್ರಕಾಶ, ಬಂಡ್ರಿಿ ಗೋಣಿಬಸಪ್ಪ, ಕೆ.ಉಚ್ಚೆೆಂಗೆಪ್ಪ,ಪ್ರಸಾದನಾಯ್ಕ,ಮೃತ್ಯುಂಜಯ, ನಾಗರಾಜನಾಯ್ಕ, ಡಿ.ಹನುಮಂತಪ್ಪ, ತಿರುಪತಿ, ಬಂಡ್ರಿಿ ಆನಂದ,ಕೆ.ದ್ರಾಾಕ್ಷಾಾಯಣಿ, ಮುತ್ತಿಿಗಿ ರೇವಣಸಿದ್ದಪ್ಪ,ಕೆಂಗಳ್ಳಿಿ ಪ್ರಕಾಶ, ಮುತ್ತಿಿಗಿ ಮಂಜುನಾಥ,ಬಸವರಾಜ ಹುಲಿಯಪ್ಪನವರ್, ಎಂ.ಸುರೇಶ, ಟಿ.ನಾಗರಾಜ, ಕೆ.ತಿರುಮಲ, ಗಿಡ್ಡಳ್ಳಿಿ ನಾಗರಾಜ, ರಾಯದುರ್ಗದ ಮಂಜುನಾಥ, ಕರಿಬಸಪ್ಪ, ಪರುಶುರಾಮ, ಹಗರಿಬೊಮ್ಮನಹಳ್ಳಿಿ ಪ್ರಹ್ಲಾಾದ, ಜಿ.ಕೆ.ಮಂಜುನಾಥ ಸೇರಿದಂತೆ ಇತರರು ಇದ್ದರು.
ರಾಜ್ಯ ವಕೀಲರ ಪರಿಷತ್ತು ಚುನಾವಣೆ ; ಕೆ.ಪಿ.ನಾಯಕರನ್ನು ಬೆಂಬಲಿಸಿ

