ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೊಲೀಸರ “ಒನ್ ನೇಷನ್ ಒನ್ ಯೂನಿಫಾರ್ಮ್” ಪ್ರಸ್ತಾವನೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ದೇಶದ ಎಲ್ಲಾ ರಾಜ್ಯಗಳ ಪೊಲೀಸರು ಒಂದೇ ರೀತಿಯ ಸಮವಸ್ತ್ರ ಧರಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
ದೇಶದ ಎಲ್ಲಾ ರಾಜ್ಯಗಳ, ಪೊಲೀಸರಿಗೆ ಅನ್ವಯಾಗುವಂತಹ ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ಕರ್ನಾಟಕ ರಾಜ್ಯ ಸರಕಾರ ” ಒನ್ ನೇಷನ್ ಒನ್ ಯೂನಿಫಾರ್ಮ್” ವ್ಯವಸ್ಥೆ ಜಾರಿಗೆ, ತಾತ್ವಿಕ ಒಪ್ಪಿಗೆ ನೀಡಿದೆ.
ಈ ಕುರಿತ ರಾಜ್ಯ ಒಳಾಡಳಿತ ಇಲಾಖೆಯ ಪ್ರಸ್ತಾವನೆಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ಇಂದು, ಸಮ್ಮತಿ ಸೂಚಿಸಿದ್ದಾರೆ.