ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.23:
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರದ ಭಾಗವಾಗಿ ಜನವರಿ 7ರ 2026 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಾಧ್ಯಕ್ಷರಾದ ಕೆ.ಎಂ. ಈಶ್ವರಿ, ಪದಾಧಿಕಾರಿಗಳಾದ ಪದ್ಮ, ಗಿರಿಜಾ, ಸೌಮ್ಯ, ಅಭಿಲಾಷ, ಪಾರ್ವತಮ್ಮ, ಸುಜಾತ, ವಿದ್ಯಾಾವತಿ ಅವರು ಸುದ್ದಿಗಾರರಿಗೆ ಮಂಗಳವಾರ ಈ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಶ್ರೀಮತಿ ಹೇಮಲತಾ ಮಹಿಷಿ, ಡಾ: ಶ್ರೀದೇವಿ ಕುಮಾರ್, ಡಾ: ಸುಧಾಕಾಮತ್, ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಾಲಯದ ಮಾಜಿ ಉಪಕುಲಪತಿ ಪ್ರೊೊ. ಸಬಿಹಾ ಭೂಮಿಗೌಡ, ರಂಗಕರ್ಮಿ ಪ್ರೊೊ. ರಾಮೇಶ್ವರಿ ವರ್ಮಾ ಅವರು ಈ ಸಮಾವೇಶದಲ್ಲಿ ಪಾಲ್ಗೊೊಳ್ಳಲಿದ್ದಾಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾವೇಶದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

