ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯ ರಸ್ತೆೆಯಲ್ಲಿ ಆಕಳು ಕರುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಸಾಯಿಸಿರುವ ಘಟನೆ ಜನ ಗಾಬರಿಗೊಳ್ಳುವಂತಾಗಿದೆ.
ಪ್ರತಿಷ್ಠಿಿತರು ವಾಸ ಮಾಡುವ ನಿಜಲಿಂಗಪ್ಪ ಕಾಲೋನಿ ವೃತ್ತದಲ್ಲಿ ಬೀದಿ ನಾಯಿಗಳು ಆಕಳು ಕರುವನ್ನ ಕಚ್ಚಿಿ ಸಾಯಿಸಿರುವ ಘಟನೆ ನಡೆದಿದೆ.ಅಪರಿಚಿತ ವಾಹನ ಡಿಕ್ಕಿಿ ಹೊಡೆದು ಗಾಯಗೊಂಡಿದ್ದ ಕರುವಿನ ಮೇಲೆ ನಾಯಿಗಳು ದಾಳಿ ಮಾಡಿ ಕೊಂದಿವೆ ಎಂದು ಸಾರ್ವಜನಿಕರು ತಿಳಿಸಿದ್ದಾಾರೆ.
ಗಾಯಗೊಂಡು ನೆಲಕ್ಕೆೆ ಬಿದ್ದಿದ್ದ ಕರುವನ್ನು ಹತ್ತಾಾರು ಬೀದಿ ನಾಯಿಗಳು ಸಿಕ್ಕ ಸಿಕ್ಕಲ್ಲಿ ಕಚ್ಚಿಿ ಕರುವನ್ನ ಕೊಂದು ಹಾಕಿವೆ. ಬೀದಿ ನಾಯಿಗಳ ಆಕ್ರಮಣ ಕಂಡು ಆತಂಕಗೊಂಡಿರುವ ಸಾರ್ವಜನಿಕರು ರಸ್ತೆೆಯಲ್ಲಿ ಓಡಾಡಲು ಹೆದರುವಂತಾಗಿದೆ. ನಿಯಂತ್ರಣಕ್ಕೆೆ ಬಾರದ ಬೀದಿ ನಾಯಿಗಳ, ಬೀಡಾಡಿ ದನಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ.
ಮಹಾನಗರ ಪಾಲಿಕೆಯವರು ಈ ಬಗ್ಗೆೆ ಸೂಕ್ತ ಕ್ರಮ ವಹಿಸಿ ಆತಂಕ ದೂರ ಮಾಡಬೇಕು ಇಲ್ಲವಾದರೆ ಮಕ್ಕಳು, ವೃದ್ದರ ಮೇಲೂ ಎರಗಿ ನಾಯಿಗಳು ಕೊಂದರೂ ಅಚ್ಚರಿ ಇಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾಾರೆ.
ಒಂದೇ ವಾರದಲ್ಲಿ ಕೇವಲ ಎರಡು ದಿನದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿಗಳು ಕಚ್ಚಿಿ ಗಾಯಗೊಳಿಸಿರುವ ಘಟನೆ ಬೆನ್ನಲ್ಲೆ ಕರುವಿನ ಮೇಲೆ ದಾಳಿ ಮಾಡಿವೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿಿದ್ದಾಾರೆ.
ಹಗಲಲ್ಲೇ ಬೀದಿಗೆ ಮಕ್ಕಳು, ವೃದ್ದರ ಬರಲು ಹೆದರಿಕೆಯಾಗುತ್ತಿಿದ್ದು ಕತ್ತಲಾದರೆ ಯಾವ ನಾಯಿ ಯಾರ ಮೇಲೆ ಎರಗುತ್ತದೊ ಎಂಬ ಭಯದಲ್ಲೆೆ ನಡೆದುಕೊಂಡು ಹೋಗುವಂತಾಗಿದೆ ಎಂದು ಮಹಿಳೆ ಸುಲೋಚನಮ್ಮ ದುಗುಢ ವ್ಯಕ್ತಪಡಿಸಿದ್ದಾಾರೆ.