ಸುದ್ದಿಮೂಲ ವಾರ್ತೆ ರಾಯಚೂರು, ಅ.12:
ನಗರದ ಬೀದಿ ನಾಯಿ ಬಂಧನ ಮತ್ತು ಸಂತಾನ ಹರಣ ಪ್ರಕರಣದ ವಿಡಿಯೋ ವೈರಲ್ ಆದ ಬೆನ್ನಲ್ಲೆೆ ರಾಷ್ಟ್ರೀಯ ಪ್ರಾಾಣಿ ದಯಾ ಸಂಘದ ಮುಖ್ಯಸ್ಥರು ಮತ್ತು ಕೇಂದ್ರ ಮಾಜಿ ಸಚಿವರಾದ ಮೇನಕಾ ಗಾಂಧಿ ಅವರು ಬೇಸರ ವ್ಯಕ್ತಪಡಿಸಿ ಮಾಜಿ ಸಂಸದ ರಾಜಾ ಅಮರೇಶ್ವರ ಮೂಲಕ ಆಯುಕ್ತರಿಗೆ ಮನವರಿಕೆ ಮಾಡಿಕೊಡಲು ಕೋರಿದ್ದಾಾರೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿಯ ಹಿನ್ನೆೆಲೆಯಲ್ಲಿ ಮಹಾನಗರ ಪಾಲಿಕೆ, ಟೆಂಡರ್ ಮೂಲಕ ಬೀದಿ ನಾಯಿಗಳ ಸೆರೆ ಹಿಡಿದು ರೇಬೀಸ್ ನಿಯಂತ್ರಣ ಚುಚ್ಚುಮದ್ದುಘಿ, ಸಂತಾನ ಹರಣ ಚಿಕಿತ್ಸೆೆ ಆಂದೋಲನ ಕಳೆದ ಮೂರು ತಿಂಗಳಿಂದ ನಡೆಯುತ್ತಿಿದೆ.
ಮೈಸೂರಿನ ಕೇರ್ ಾರ್ ವಾಯ್ಸ್ಲೆಸ್ ಎನಿಮಲ್ಸ್ ಸಂಸ್ಥೆೆಯು ಈ ಶಸ ಚಿಕಿತ್ಸೆೆ ಗಾಗಿ ನಗರದಲ್ಲಿ ಬೀದಿ ನಾಯಿ ಹಿಡಿದು ಯಕ್ಲಾಾಸಪೂರ ಎಸ್ಟಿಪಿ ಪ್ರದೇಶದಲ್ಲಿ ಜಮಾಯಿಸಿದ ವಿಡಿಯೋ ಸ್ಥಳೀಯರೊಬ್ಬರು ಮೇನಕಾ ಗಾಂಧಿ ಅವರಿಗೆ ಟ್ಯಾಾಗ್ ಮಾಡಿದ್ದು ನಿರ್ವಹಣೆಯ ಲೋಪದೋಷದ ಬಗ್ಗೆೆ ಪ್ರಶ್ನೆೆಗಳನ್ನು ಪಾಲಿಕೆ ಆಯುಕ್ತರ ಮುಂದೆ ಎತ್ತಿಿದ್ದಾಾರೆ.
ಆಯುಕ್ತರೊಂದಿಗೆ ಸಂಪರ್ಕ ಸಾಧ್ಯವಾಗದ ಹಿನ್ನೆೆಲೆಯಲ್ಲಿ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕರ ಮೂಲಕ ಈ ಸಮಸ್ಯೆೆಯ ಬಗ್ಗೆೆ ಆಯುಕ್ತರ ಗಮನ ಸೆಳೆಯಲಾಗಿತ್ತು.
ಸೂಚನೆಯ ನಂತರ ಸ್ವಯಂ ಸೇವಾ ಸಂಸ್ಥೆೆ ನಿರ್ವಹಣೆಗೆ ನೀಡಲಾದ, ನಾಯಿ ಸಂತಾನ ಹರಣ ಮತ್ತು ಚುಚ್ಚುಮದ್ದು ಪ್ರಕ್ರಿಿಯೆಯ ಕೂಲಂಕುಶ ಪರಿಶೀಲನೆ ಹಾಗೂ ಮಾಹಿತಿ ಪಡೆಯಲಾಗಿದೆ.
100 ನಾಯಿಗಳು ಪ್ರಸ್ತುತ ಸಂಗ್ರಹದಲ್ಲಿದ್ದು, ಇವುಗಳ ಚಿಕಿತ್ಸೆೆ ಪ್ರಕ್ರಿಿಯೆ ನಡೆಯುತ್ತಿಿದೆ. ಪಶು ಸಂಗೋಪನೆ ಇಲಾಖೆಯ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಮೇಲುಸ್ತುವಾರಿಯಲ್ಲಿ ಈ ಪ್ರಕ್ರಿಿಯೆ ನಡೆಸಲಾಗುತ್ತಿಿದೆ ಎನ್ನುವ ಮಾಹಿತಿ ಮೇನಕಾ ಗಾಂಧಿಯವರಿಗೆ ನೀಡಲಾಗಿದೆ.
ಈ ಪ್ರಕ್ರಿಿಯೆಯಲ್ಲಿ ಒಟ್ಟು ನಗರದ 1800 ನಾಯಿಗಳಿಗೆ ರೇಬೀಸ್ ನಿಯಂತ್ರಣ ಚುಚ್ಚುಮದ್ದು ಹಾಗೂ ಸಂತಾನ ಹರಣ ಪ್ರಕ್ರಿಿಯೆ ಪೂರ್ಣಗೊಳಿಸಲಾಗಿತ್ತು. 2ನೇ ಹಂತದಲ್ಲಿ 1500 ನಾಯಿಗಳಿಗೆ ಸಂತಾನ ಹರಣ ಮತ್ತು ಚುಚ್ಚುಮದ್ದಿನ ಪ್ರಕ್ರಿಿಯೆ ನಿರ್ವಹಣೆಗೆ ಟೆಂಡರ್ ನೀಡಲಾಗಿದೆ.
ಈ ಪ್ರಕ್ರಿಿಯೆಯನ್ನು ಅತ್ಯಂತ ಜಾಗೃತ ಮತ್ತು ನಾಯಿಗಳಿಗೆ ಯಾವುದೆ ತೊಂದರೆ ಆಗದಂತೆ ನಿರ್ವಹಿಸಬೇಕಾಗಿದ್ದರಿಂದ ಪ್ರತಿ ವಾರ್ಡಿನಿಂದ ಮೂರರಿಂದ ಐದು ನಾಯಿಗಳನ್ನು ಹಿಡಿದು ಏಕಕಾಲಕ್ಕೆೆ ಸುಮಾರು 90 ರಿಂದ 100 ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕುವ ಪ್ರಕ್ರಿಿಯೆ ನಡೆಸಲಾಗುತ್ತದೆ ಎಂದು ಆಯುಕ್ತರು ಗಮನಕ್ಕೆೆ ತಂದಿದ್ದಾಾರೆ ಎಂದು ಗೊತ್ತಾಾಗಿದೆ