ಸುದ್ದಿಮೂಲ ವಾರ್ತೆ ಕೊಪ್ಪಳ, ಜ.03:
20ಕ್ಕೂ ಹೆಚ್ಚು ಹಳ್ಳಿಿಗಳು, ಕೊಪ್ಪಳ ಭಾಗ್ಯನಗರದ ಅರ್ಧ ಭಾಗ ಕಾರ್ಖಾನೆಗಳ ವಿಷಾನಿಲ, ಕಪ್ಪುು ಹೊಗೆ, ದೂಳುಗಳಿಂದ ಹಾಳಾಗಿದ್ದು ಮತ್ತು ನದಿಯನ್ನೇ ನುಂಗುವ ಕಾರ್ಖಾನೆಗಳ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಸಾಹಿತಿ ಎ.ಎಂ. ಮದರಿ ಹೇಳಿದರು.
ಅವರು ನಗರಸಭೆ ಮುಂದುಗಡೆ ಬಲ್ಡೋೋಟ, ಕಿರ್ಲೋಸ್ಕರ್, ಕಲ್ಯಾಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ, ವನ್ಯಾಾ, ಐಎಲ್ಸಿ ಸೇರಿ ಇತರೆ ಎಲ್ಲಾಾ ಕಾರ್ಖಾನೆಗಳ ವಿಸ್ತರಣೆ ಮತ್ತು ಆರಂಭ ವಿರೋಧಿಸಿ ಕಳೆದ 65 ದಿನಗಳಿಂದ ಜಿಲ್ಲಾಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಿಯಾ ವೇದಿಕೆ ನಡೆಸುತ್ತಿಿರುವ ಅನಿರ್ಧಿಷ್ಟ ಧರಣಿಯಲ್ಲಿ ಮಾತನಾಡಿದರು.
ಜನಸಾಮಾನ್ಯರು ಹೋರಾಟಕ್ಕೆೆ ಅಣಿಯಾದ ಕೂಡಲೇ ಹೊಸ ಬಗೆಯ ಆಯಾಮ ಸಿಗುತ್ತದೆ, ಈಗಾಗಲೇ ಹಲವು ಸಂಘಟನೆಗಳು, ರಾಜ್ಯಮಟ್ಟದ ಸಾಹಿತಿ, ಹೋರಾಟಗಾರರು, ರೈತರು ಭಾಗವಹಿಸಿದ್ದಾಾರೆ. ಜಾತ್ರೆೆಯ ನಂತರ ಇನ್ನಷ್ಟು ವೇಗ ಪಡೆಯಲಿದೆ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ವೀರಣ್ಣ ಬಣಗಾರ, ರವಿಂದ್ರಗೌಡ ಪಾಟೀಲ್, ಶಿವಪ್ಪ ಜಲ್ಲಿ, ಸಂಜೀವಮ್ಮ ಮುಂಡರಗಿ, ಗಂಗಮ್ಮ ಕೊಡೇಕಲ್, ಶಿವಪ್ಪ ಹಡಪದ, ಪುಷ್ಪಲತಾ ಏಳುಬಾವಿ, ಮೂಕಪ್ಪ ಮೇಸಿ ಬಸಾಪೂರ, ವೀರಣ್ಣ ಹುರಕಡ್ಲಿಿ, ಭೀಮಪ್ಪ ಯಲಬುರ್ಗಾ, ಮಖ್ಯುಲ್ ರಾಯಚೂರು, ಡಿ. ಎಂ. ಬಡಿಗೇರ, ಭೀಮಸೇನ ಕಲಕೇರಿ, ಮೈತ್ರಾಾ, ನೇತ್ರಾಾವತಿ, ರುಕ್ಸಾಾನಾ ಪಾಲ್ಗೊೊಂಡರು.
ಕಾರ್ಖಾನೆಗಳ ವಿರುದ್ಧ ಹೋರಾಟ ನಿರಂತರ : ಮದರಿ

