ಸುದ್ದಿಮೂಲ ವಾರ್ತೆ
ಹೊಸಕೋಟೆ ಆ. 16 : ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ಸೇರಿದಂತೆ ಹಲವು ನಾಯಕರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ನಗರದಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಬಳಿಕ ಮಾತನಾಡಿದ ಅವರು, ತ್ಯಾಗ ಬಲಿದಾನದಿಂದ 200 ವರ್ಷಗಳ ಬ್ರಿಟೀಷ್ ಆಡಳಿತದಿಂದ ಮುಕ್ತಿ ದೊರೆಯುವಂತಾಗಿದೆ. ಇದರಿಂದಲೇ ಇಂದು ದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗಕ್ಕೆ ಮುಕ್ತ ಅವಕಾಶ ದೊರೆತಿದೆ. ಎಲ್ಲರಿಗೂ ಸಮಾನತೆ ಜೊತೆಗೆ ಬಡತನ ನಿರ್ಮೂಲನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಪಂಚ ಯೋಜನೆಗಳನ್ನೂ ಜಾರಿಮಾಡಿದೆ ಎಂದರು.
ತಹಸೀಲ್ದಾರ್ ವಿಜಯ್ಕುಮಾರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪುರುಷರು, ಮಹಿಳೆಯರು ಭಾಗಿಯಾಗಿ ಹೋರಾಟ ಮತ್ತು ತ್ಯಾಗ ಬಲಿದಾನಗಳನ್ನು ನೆನೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮಾದರಿ ಕೃಷಿಕರಿಗೆ, ಹೈನೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಹಾಗೂ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಇಒ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಬ್, ಡಿವೈಎಸ್ಪಿ ಪಾಟೀಲ್, ನಗರಸಭೆ ಆಯುಕ್ತ ಪ್ರಸಾದ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ, ಕಸಾಪ
ತಾಲೂಕು ಅಧ್ಯಕ್ಷ ಎಚ್ ಎಂ ಮುನಿರಾಜ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಮಣಪ್ಪ, ನಗರಸಭೆ ಸದಸ್ಯರಾದ ಗೌತಮ್, ರೂಪಾ, ಕೇಶವ್, ಜಮುನಾ, ಮುಖಂಡರುಗಳಾದ ಬಿವಿ ಬೈರೇಗೌಡ, ಡಾ. ಎಚ್.ಎಂ ಮುನಿರಾಜ್, ವಿಜಯ್ ಕುಮಾರ್, ರಾಖೇಶ್, ಆರ್ಟಿಸಿ ಗೋವಿಂದ್ ರಾಜ್ ಮೊದಲಾದವರು ಹಾಜರಿದ್ದರು.
ನಗರದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಮೂಹಿಕ ಕವಾಯತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.