ಸುದ್ದಿಮೂಲ ವಾರ್ತೆ ಸಿಂಧನೂರು, ಜ.05:
ಗ್ರಾಮೀಣ ಭಾಗಕ್ಕೆ ಬಸ್ ಕೊರತೆಯಿಂದ ವಿದ್ಯಾಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆೆ ಮನಗಂಡು ವಿದ್ಯಾಾರ್ಥಿಗಳಿಗಾಗಿಯೇ 14 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.100 ಹಾಜರಾತಿ ಇರಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಾಣದಲ್ಲಿ ಸೋಮವಾರ ಕಲ್ಯಾಾಣ-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಶಾಸಕರ ಅನುದಾನದಡಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ-ಕ ರಸ್ತೆ ಸಾರಿಗೆ ನಿಗಮದಿಂದ ವಿದ್ಯಾರ್ಥಿ ರಥ ವಿಶೇಷ ಬಸ್ ಸೌಕರ್ಯ ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲು 1 ಕೋಟಿ ರೂ. ನೀಡಿದೇನೆ. ತಾ.ಪಂ.ನಿಂದ ಎಲ್ಲಾ ಪ್ರೌಢಶಾಲೆಗಳಿಗೆ ಸ್ಮಾರ್ಟ್ಕ್ಲಾಸ್ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಮೆಡಿಕಲ್, ಡಿಪ್ಲೊಮಾ, ಐಟಿಐ, ಕಾನೂನು ಕಾಲೇಜುಗಳನ್ನು ತರಲು ಪ್ರಯತ್ನಿಸುವೆ. ಜೊತೆಗೆ 2 ಕೋಟಿ ವೆಚ್ಚದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿತೆ ತರಬೇತಿ ನೀಡಲು ಕೋಚಿಂಗ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದರು.
ಬಸ್ಗಳ ಕೊರತೆಯಿಂದ ಶೇ.50% ಮಕ್ಕಳ ಹಾಜರಾತಿ ಕೊರತೆಯಿದೆ ಎನ್ನುವ ದೂರುಗಳು ಬಂದಿದ್ದವು. ಸಮಸ್ಯೆೆಗೆ ಸ್ಪಂದಿಸಿ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವಿದ್ಯಾಾರ್ಥಿಗಳಿಗಾಗಿ ಪ್ರತ್ಯೇಕ ಬಸ್ಗಳ ವ್ಯವಸ್ಥೆೆ ಮಾಡಲಾಗಿದೆ. ವಿದ್ಯಾಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆೆಗೇರುವಂತೆ ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವದನ್ನು ಗಮನಿಸಬಹುದು. ತಂದೆ-ತಾಯಿಗಳು ಕಷ್ಟಪಟ್ಟು ನಿಮ್ಮನ್ನು ಶಾಲಾ-ಕಾಲೇಜಿಗೆ ಕಳುಹಿಸುತ್ತಿಿದ್ದಾರೆ. ಅವರ ನಿರೀಕ್ಷೆಗಳನ್ನು ಹುಸಿ ಮಾಡಬೇಡಿ. ಪಾಲಕರಿಗೆ ಭಾರ ಆಗಬೇಡಿ ಎಂದು ಕಿವಿ ಮಾತು ಹೇಳಿದರು.
ಹಳ್ಳಿಿಗಳಿಂದ ಬರುವ ವಿದ್ಯಾಾರ್ಥಿಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆೆ ಮಾಡಿರುವದನ್ನು ವಿದ್ಯಾಾರ್ಥಿಗಳು ಶಾಸಕರಿಗೆ ಅಭಿನಂದಿಸಿದರೂ, ನಗರದಲ್ಲಿರುವ ಕೆಲವು ವಸತಿ ನಿಲಯಗಳು ಮೂರು-ನಾಲ್ಕು ಕಿ.ಮೀ ದೂರವಿದ್ದು, ಅಲ್ಲಿಂದ ಶಾಲಾ-ಕಾಲೇಜುಗಳಿಗೆ ಬರಲು ಬಸ್ಗಳ ವ್ಯವಸ್ಥೆೆ ಮಾಡಬೇಕು ಎಂದು ಶಾಸಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ, ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಪಿಎಲ್ಡಿ ಬ್ಯಾಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ತಹಶೀಲ್ದಾರ ಅರುಣ ಹೆಚ್.ದೇಸಾಯಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ಅಧ್ಯಕ್ಷ ಅನಿಲಕುಮಾರ ವೈ, ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವೈ.ನರೇಂದ್ರನಾಥ, ಸತ್ಯನಾರಾಯಣ, ಅನಿಲ್ಕುಮಾರ, ಪರಶುರಾಮ ಮಲ್ಲಾಾಪುರ, ಘಟಕ ವ್ಯವಸ್ಥಾಾಪಕ ಹೊನ್ನಪ್ಪ ಹಾಗೂ ಇತರರು ಇದ್ದರು.
ವಿದ್ಯಾರ್ಥಿ ರಥ ಬಸ್ಗಳ ಉದ್ಘಾಟನೆ ಕಾರ್ಯಕ್ರಮ : ಶಾಸಕರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಬಸ್ ವ್ಯವಸ್ಥೆಯಿಂದ ತರಗತಿಗೆ ಹಾಜರಾತಿ ಹೆಚ್ಚಲಿ – ಬಾದರ್ಲಿ

