ಸುದ್ದಿಮೂಲ ವಾರ್ತೆ ರಾಯಚೂರು , ಡಿ.07:
ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳ ನೀತಿ ವಿರೋಧಿಸಿ ರಾಯಚೂರು ತಾಲೂಕಿನ ಅನ್ವರ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ ಉಳಿಸಲು ವಿದ್ಯಾಾರ್ಥಿಗಳು ಮತ್ತು ಪೋಷಕರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರೆೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅನ್ವರ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮುಂಭಾಗದಲ್ಲಿ ವಿದ್ಯಾಾರ್ಥಿಗಳು ಮತ್ತು ಪೋಷಕರು ವಿರೋಧ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಾಣ್ ಕುಮಾರ ಮಾತನಾಡಿ, ಅನ್ವರ ಗ್ರಾಾಮದ ರೈತರು ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದು ಶಾಲೆ ಮುಚ್ಚಿಿ, ಮೂರು ಕಿಲೋಮೀಟರ್ ದೂರದಲ್ಲಿರುವ ಮಂಜರ್ಲಾ ಗ್ರಾಾಮಕ್ಕೆೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ. 150ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಇರುವ ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು 40 ಸಾವಿರಕ್ಕೂ ಅಧಿಕ ಶಾಲೆಗಳ ಮುಚ್ಚಲು ಮುಂದಾಗಿದ್ದರೂ, ಶಿಕ್ಷಣ ಸಚಿವರು ಶಾಲೆ ಮುಚ್ಚಲ್ಲ ಎಂದು ಸುಳ್ಳು ಹೇಳುತ್ತಿಿದ್ದಾರೆ. ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಿಗಳನ್ನು ಬಿಡುಗಡೆ ಮಾಡುತ್ತಿಿರುವುದು ಸರ್ಕಾರದ ಬಡವರಿಂದ ಶಿಕ್ಷಣ ಕಸಿಯುವ ಖಾಸಗೀಕರಣದ ಹುನ್ನಾಾರ ಎಂದು ದೂರಿದರು.
ಶಿಕ್ಷಣವನ್ನು ಉಳಿಸಲು ಎಲ್ಲಾಾ ಪೋಷಕರು, ವಿದ್ಯಾಾರ್ಥಿಗಳು ಒಗ್ಗಟ್ಟಾಾಗಿ ಚಳುವಳಿಯನ್ನು ಕಟ್ಟಲು ಮುಂದಾಗಬೇಕು ಎಂದು ಕೋರಿದರು.
ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಸದಸ್ಯರಾದ ನಂದಗೋಪಾಲ್, ಪ್ರೀತಿ, ಎಸ್ಡಿಎಂಸಿ ಅಧ್ಯಕ್ಷ ಭೀಮಯ್ಯ, ಹಿರಿಯರಾದ ಈರಣ್ಣ, ವಿರುಪಣ್ಣ, ಭೀಮಣ್ಣ ಸೇರಿದಂತೆ ನೂರಾರು ವಿದ್ಯಾಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅನ್ವರದಲ್ಲಿ ವಿದ್ಯಾರ್ಥಿ, ಪಾಲಕರ ಪ್ರತಿಭಟನೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ವಿಲೀನ ನೀತಿಗೆ ಖಂಡನೆ

