ಸುದ್ದಿಮೂಲ ವಾರ್ತೆ
ಮೈಸೂರು, ಜು.17:ಪದವಿ ಕಾಲೇಜುಗಳ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ನಗರದ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಬಳಿ ಅಖಿಲ ಭಾರತ ಪ್ರಜಾಸತ್ಮಾಕ ವಿದ್ಯಾರ್ಥಿಸಂಘಟನೆ ಆಶ್ರಯದಲ್ಲಿ ಪ್ರತಿಭಟನೆ ನಡೆಸಿದರು.
ಈ ಸೆಮಿಸ್ಟರ್ ನಲ್ಲಿ ಪದವಿ ಕಾಲೇಜುಗಳು ಕೇವಲ 2 ತಿಂಗಳು ನಡೆದಿವೆ. ಚುನಾವಣೆ ಕರ್ತವ್ಯಕ್ಕೆ ಕೆಲ ಕಾಲೇಜುಗಳ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು. ಹಾಗಾಗಿ ಪಾಠಗಳು ಸರಿಯಾಗಿ ನಡೆದಿಲ್ಲ. ಪಠ್ಯಕ್ರಮವು ಲಭ್ಯವಾಗಿಲ್ಲ. ಭಾನುವಾರವು ಕೂಡ ಪರೀಕ್ಷೆಗಳನ್ನ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು
ಕೇವಲ ಒಂದು ದಿನದಲ್ಲಿ ಎಲ್ಲಾ ಪರೀಕ್ಷೆಗಳನ್ನ ಬರೆಯಲು ಸಾಧ್ಯವಾಗಲ್ಲ. ಹೀಗಾಗಿ ಪರೀಕ್ಷೆಯನ್ನು 15ದಿನಗಳಾದರೂ ಮುಂದೂಡಬೇಕು ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.