ಸುದ್ದಿಮೂಲ ವಾರ್ತೆ,
ಗಬ್ಬೂರು :ಏ,12, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಯಲ್ಲಿ ದೇವದುರ್ಗ ತಾಲ್ಲೂಕಿನ ವಿಧಾನ ಸಭೆಯ ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾದ ಕರೆಮ್ಮ ಜಿ ನಾಯಕ ಅವರು ಏಪ್ರಿಲ್ 19 ರಂದು ನಾಮಪತ್ರ ಉಮೇದುವಾರಿಕೆ ಸಲ್ಲಿಸುವ ನಿಮಿತ್ಯ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಬೇಟಿ ನೀಡುವ ಸಂದರ್ಭದಲ್ಲಿ ಅಭೂತಪೂರ್ವ ಸ್ವಾಗತದ ಜನಸಾಗರ ನೆರೆದಿತ್ತು.
ಇಂದು ದೇವದುರ್ಗ ತಾಲ್ಲೂಕಿನ ಗುಂಟ್ರಾಳ,ಹಿರೇಬೂದುರು,ಮಸಿಹಾಳ ರಾಯಕುಂಪಿ,ಶಾವಂತಗೇರಾ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಡೊಳ್ಳು,ಭಾಜಿ ಮೂಲಕ ತಮ್ಮ ಊರಿಗೆ ಸ್ವಾಗತ ಕೋರಿ ಅಭೂತಪೂರ್ವ ಬೆಂಬಲ ನೀಡಿದರು ಅಲ್ಲದೆ ನೆರೆದಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ದೇವದುರ್ಗ ತಾಲ್ಲೂಕ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕರೆಮ್ಮ ಜಿ ನಾಯಕ ಅವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿಶೇಷ ಕಾಳಜಿ ವಹಿಸಿ ಈ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ನೀಡಿದ ಪಕ್ಷವಾಗಿದೆ ದೇವದುರ್ಗದ ಸರ್ವೋತೋಮುಖ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಸಿದ್ದವಾಗಿದೆ ಅಲ್ಲದೆ ಈ ಹಿಂದೆ ನಾನು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ ಜೊತೆಗೆ ನಾನು ಎರಡು ಭಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದು ಕೆಲ ಕಾಣದ ಕೈಗಳ ಕೈವಾಡವಾಗಿದೆ ಆದರೂ ವಿರೋಧ ಪಕ್ಷಗಳು ಏನೆ ತಂತ್ರ ಮಾಡಿದರು ನಾನು ಎದೆಗುಂದುವುದಿಲ್ಲ ಯಾಕೆಂದರೆ ನನ್ನ ನಿಷ್ಠೆ ಪರಿಶ್ರಮ ಹಾಗೂ ತಾಲ್ಲೂಕಿನ ಎಲ್ಲಾ ಮತದಾರರು ಇಂದು ಗೆಲ್ಲಿಸುವ ನಿರ್ಧಾರ ಮಾಡಿ ನನಗೆ ಹಾಗೂ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಹಣ ಹಾಗೂ ಅಧಿಕಾರದ ಬಲವನ್ನು ಕಡೆಗಣಿಸಿ ಒಬ್ಬ ಬಡ ಮಹಿಳೆಯನ್ನು ಗೆಲ್ಲಿಸಲು ನೀವೆಲ್ಲರೂ ತೀರ್ಮಾನ ಮಾಡಿದ್ದು ಪ್ರಜಾಪ್ರಭುತ್ವದ ಜಯವಾಗಿದೆ ಜೊತೆಗೆ ಏಪ್ರೀಲ್ 19 ರಂದು 2023 ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತುದ್ದು ತಾಲ್ಲೂಕಿನ ಎಲ್ಲಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುರೇಶ ಯಲಿ ಗಬ್ಬೂರು,ಸಂಗಯ್ಯ ತಾತ ಖಾನಾಪುರ ಮಠ,ಬೂದೆಪ್ಪಗೌಡ,ಶಂಕರಗೌಡ ಮಾ.ಪಾ,ಮಂಜುನಾಥ ಮಾತ್ಪಳ್ಳಿ,ಬಸನಗೌಡ ರಾಮನೊರ್,ಸೋಮಣ್ಣ ಯಾದವ ಬಾಗ್ಲಿ,ಶಿವರಾಜ ಜಗ್ಲಿ,ಆಲಂಘನಿ,ಮಲ್ಲಿಕಾರ್ಜುನ ಕುಂಬಾರ,ಶರೀಫ ಬೇಗ್,ಮಧು ಯಾದವ,ಅನ್ವರ,ಮಲ್ಲಪ್ಪಗೌಡ,ಬಂದಯ್ಯ ತಾತ,ಚನ್ನಪ್ಪ ಕಾತರಕಿ ಹಾಗೂ ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು.