ಸುದ್ದಿಮೂಲ ವಾರ್ತೆ ಬೆಂಗಳೂರು, ಜ.14:
ಕರ್ನಾಟಕ ಕಾರಾಗೃಹ ಸುಧಾರಣೆಗಳ ಕುರಿತಂತೆ ಕಾನೂನು ಸುವ್ಯವಸ್ಥೆೆ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರಿಗೆ ಇಂದು ವರದಿ ಸಲ್ಲಿಸಿತು.
ರಾಜ್ಯದ ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಭದ್ರತಾ ಕ್ರಮಗಳು ಮತ್ತು ಕಾರಾಗೃಹ ಸುಧಾರಣಾ ಕ್ರಮಗಳ ಕುರಿತಂತೆ ಸಮಿತಿಯು ಸಲ್ಲಿಸಿರುವ ಶಿಾರಸ್ಸುಗಳ ಕುರಿತು ಮುಖ್ಯಮಂತ್ರಿಿಯವರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಈ ವೇಳೆ ತಿಳಿಸಿದರು.
ಸಮಿತಿಯ ಮುಖ್ಯಸ್ಥರಾದ ಕಾನೂನು ಸುವ್ಯವಸ್ಥೆೆ ಎಡಿಜಿಪಿ ಆರ್.ಹಿತೇಂದ್ರ, ಐಜಿಪಿ ಸಂದೀಪ್ ಪಾಟೀಲ್, ಎಸ್ಪಿಿಗಳಾದ ಸಿ.ಬಿ.ರಿಷ್ಯಂತ್, ಅಮರನಾಥ್ ರೆಡ್ಡಿಿ ಅವರು ಇದ್ದರು.

