ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಶ್ರೀ ಸತ್ಯಸಾಯಿಬಾಬಾರ 100ನೇ ಜಯಂತಿ ಅಂಗವಾಗಿ ದೇಶದಾದ್ಯಂತ ಪ್ರೇಮವಾಹಿನಿ ರಥಯಾತ್ರೆೆ ಸಾಗಿದ್ದು ೆ.11 ರಂದು ತೆಲಂಗಾಣದಿಂದ ಶಕ್ತಿಿನಗರದ ಮೂಲಕ ರಾಯಚೂರಿಗೆ ಆಗಮಿಸಲಿದೆ ಎಂದು ಸತ್ಯಸಾಯಿ ಸೇವಾ ಸಂಸ್ಥೆೆ ಮಾಜಿ ಅಧ್ಯಕ್ಷ ಸುಬ್ರಮಣ್ಯಂ, ಸಂಯೋಜಕ ಡಾ.ಬಸವರಾಜ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ 50 ವರ್ಷಗಳಿಂದ ಸತ್ಯಸಾಯಿ ಸೇವಾ ಸಂಸ್ಥೆೆ ಅನೇಕ ಸಮಾಜ ಮುಖಿ, ಆರೋಗ್ಯ ಸೇವೆ ಮಾಡುತ್ತ ಬಂದಿದೆ.2015 ರಲ್ಲಿ ಪುಟ್ಟಪರ್ತಿ ಸಾಯಿಬಾಬಾರ ಕಾಲವಾದ ನಂತರವೇ ಸೇವಾ ಕಾರ್ಯಗಳು ಮುಂದುವರೆದಿವೆ. ಜನರಲ್ಲಿ ಭ್ರಾಾತೃತ್ವದೊಂದಿಗೆ ಸೇವಾ ಮನೋಭಾವ ಬೆಳೆಸಲು ಪ್ರೇಮವಾಹಿನಿ ರಥಯಾತ್ರೆೆ ನಡೆಯುತ್ತಿಿದೆ ಎಂದರು.
ಶಕ್ತಿಿನಗರದಿಂದ ಆಗಮಿಸುವ ರಥಯಾತ್ರೆೆ ನಗರದ ವಿವಿಧ ರಸ್ತೆೆಗಳಲ್ಲಿ ಸಂಚರಿಸಲಿದೆ. ಭಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಶಕ್ತಿಿನಗರದಿಂದ ರಥಯಾತ್ರೆೆಗೆ ಸ್ವಾಾಗತಿಸಿ ನಂತರ ಮೆರವಣಿಗೆಯಲ್ಲಿ ಸಿಯಾತಲಾಬ್ನ ಮಾ ಶಾ ಸಭಾಂಗಣಕ್ಕೆೆ ಬರಲಿದೆ. ಅಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಗಿದೆ. ನಂತರ ಮಾನ್ವಿಿಘಿ, ಸಿಂಧನೂರು, ಮಸ್ಕಿಿ ತಾಲೂಕಿನ ಭಾಗದಲ್ಲಿ ಎರಡು ದಿನ ಸಂಚರಿಸಲಿದ್ದು ಗೋರೆಬಾಳ ಕ್ಯಾಾಂಪಿನ ಮೂಲಕ ಕೊಪ್ಪಳಕ್ಕೆೆ ಪ್ರಯಾಣಿಸಲಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಮಿತಿಯ ಯುವ ಘಟಕದ ಅಧ್ಯಕ್ಷ ಶ್ರೀಧರರೆಡ್ಡಿಿ ಇದ್ದರು.

