ಬಳ್ಳಾರಿ, ಜೂ.22:ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಗುರುವಾರ ಕರೆ ನೀಡಿದ್ದ `ಕರ್ನಾಟಕ ಬಂದ್’ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಯ ನೇತೃತ್ವದಲ್ಲಿ 45 ಅಸೋಸಿಯೇಷನ್ಗಳ 5000 ಕ್ಕೂ ಹೆಚ್ಚಿನ ಪ್ರತಿಭಟನಾಕಾರರ ಪಾಲ್ಗೊಂಡಿದ್ದರು. ಪ್ರತಿಭಟನೆಯು ಅತ್ಯಂತ ಶಾಂತಿಯುತವಾಗಿ, ಯಶಸ್ವಿಯಾಗಿ ನೆರವೇರಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಶಾಲಾ -ಕಾಲೇಜು, ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ವ್ಯವಸ್ಥೆ ಸಾಮಾನ್ಯವಾಗಿತ್ತು.
ಸೆಂಟಿನರಿ ಹಾಲ್ನಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಪ್ರತಿಭಟನೆಯನ್ನು ಉದ್ದೇಶಿಸಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮತ್ತು ಗೌರವ ಕಾರ್ಯದರ್ಶಿ ಯಶವಂತ್ರಾಜ್ ನಾಗಿರೆಡ್ಡಿ ಅವರು ಗಡಿಗೆ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್)ದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕೈಗಾರಿಕೆಗಳು, ಉದ್ಯಮಿಗಳು ಮತ್ತು ವ್ಯಾಪಾರಿಗಳು ನೆಲೆಯೂರಲು ಸರ್ಕಾರ ತಕ್ಷಣವೇ ಹೆಚ್ಚಿಸಿರುವ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಗಡಿಭಾಗವಾಗಿರುವ ಬಳ್ಳಾರಿಗೆ ಸಮೀಪದಲ್ಲಿರುವ ಆಂಧ್ರಪ್ರದೇಶ, ರಾಯಚೂರುಗೆ ಸಮೀಪದಲ್ಲಿರುವ ತೆಲಂಗಾಣ, ಬೆಂಗಳೂರಿಗೆ ಸಮೀಪದಲ್ಲಿರುವ ತಮಿಳುನಾಡು ರಾಜ್ಯಗಳಲ್ಲಿ ವಿದ್ಯುತ್ ಶುಲ್ಕ ಕಡಿಮೆ. ಮಾನವಸಂಪನ್ಮೂಲಗಳು ಕೂಡ ಸಾಕಷ್ಟು ದೊಡ್ಡಪ್ರಮಾಣದಲ್ಲಿ ಸುಲಭವಾಗಿ ಸಿಗುತ್ತಿವೆ. ಕೈಗಾರಿಕೆಗಳ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿಯ ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಿ, ಇಲ್ಲಿಯ ಉದ್ಯಮಿಗಳು ಸ್ಪರ್ಧಾತ್ಮಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯು ಬೆಂಗಳೂರು ರಸ್ತೆಯ ಮೂಲಕ ಬ್ರೂಸ್ಪೇಟೆ ಪೊಲೀಸ್ ಠಾಣೆಯ ವೃತ್ತದ ಮೂಲಕ ಎಚ್ಆರ್ಜಿ ವೃತ್ತವನ್ನು ತಲುಪಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಾರೋಪಗೊಂಡಿತು. ವ್ಯಾಪಾರಿಗಳು – ಕೈಗಾರಿಕೋದ್ಯಮಿಗಳು ಸ್ವಯಂ ಪ್ರೇರಣೆಯಿಂದ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರು ಕೂಡ ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕೋಲ್ಡ್ ಸ್ಟೊರೇಜ್ ಅಸೋಸಿಯೇಷನ್, ಎಪಿಎಂಸಿ ಮರ್ಚೆಂಟ್ಸ್ ಅಸೋಸಿಯೇಷನ್, ಬಳ್ಳಾರಿ ಜಿಲ್ಲಾ ರೈಸ್ಮಿಲ್ ಅಸೋಸಿಯೇಷನ್, ಜಿಲ್ಲಾ ಕಾಟನ್ ಅಸೋಸಿಯೇಷನ್, , ಸ್ಪಾಂಜ್ ಐರನ್ ಅಸೋಸಿಯೇಷನ್, ಕರ್ನಾಟಕ ಇಂಡಸ್ಟ್ರಿಯಲ್ ಅಸೋಸಿಯೇಷನ್, ಹೋಲ್ಸೇಲ್ ಮರ್ಚೆಂಟ್ ಅಸೋಸಿಯೇಷನ್, ಬಳ್ಳಾರಿ ಆಯಿಲ್ ಅಂಡ್ ಆಯಿಲ್ ಸೀಡ್ಸ್ ಅಸೋಷಿಯೇಷನ್, ಬಳ್ಳಾರಿ ಬ್ರಾಸ್, ಕಾಪರ್ ಮೆಟಲ್ ಅಸೋಸಿಯೇಷನ್, ಬಳ್ಳಾರಿ ಟ್ರಾನ್ಸಫೋರ್ಟ್ ಓರ್ಸ್ ಅಂಡ್ ಆಪರೇರ್ಸ್ ಅಸೋಸಿಯೇಷನ್, ಎಲೆಕ್ಟಿçಕಲ್ ಕಾಂಟ್ರಾಕ್ರ್ಸ್ ಅಂಡ್ ಮರ್ಚೆಂಟ್ಸ್ ಅಸೋಸಿಯೇಷನ್, ಸ್ಮಾಲ್ಸ್ಕೇಲ್ ಇಂಡಸ್ಟಿçÃಸ್ ಅಸೋಸಿಯೇಷನ್, ಬಳ್ಳಾರಿ ಟ್ಯಾಕ್ಸ್ ಬಾರ್ ಅಸೋಸಿಯೇಷನ್, ಬಳ್ಳಾರಿ ಕಿರಾಣಾ ಅಂಡ್ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್, , ಬಳ್ಳಾರಿ ಆಟೋಮೊಬೈಲ್ ಡೀರ್ಸ್ ಅಸೋಸಿಯೇಷನ್, ಬಳ್ಳಾರಿ ಜಿಲ್ಲಾ ಸೀಡ್ಸ್ ಅಂಡ್ ಫರ್ಟಿಲೈರ್ಸ್ ಅಂಡ್ ಪೆಸ್ಟಿಸೈಡ್ಸ್ ಡೀರ್ಸ್ ಅಸೋಸಿಯೇಷನ್, ಬಳ್ಳಾರಿ ರೆಡಿಮೇಡ್ ಅಂಡ್ ಹೊಸೈರೀಸ್ ಡೀರ್ಸ್ ಅಸೋಸಿಯೇಷನ್, ಹೋಟಲ್ ಅಂಡ್ ಬೇಕರಿ ಮಾಲೀಕರ ಸಂಘ, ಬಳ್ಳಾರಿ ಸಿಟಿ ರೈಸ್ ಮಿಲ್ರ್ಸ್ ಅಸೋಸಿಯೇಷನ್, ಬಳ್ಳಾರಿ ಹಾರ್ಡ್ವೇರ್ ಪೇಂಟ್ಸ್ ಅಂಡ್ ಅಲೈಡ್ ಮರ್ಚೆಂಟ್ಸ್ ಅಸೋಸಿಯೇಷನ್, ಟ್ಯಾಮರಿಂಡ್ ಅಂಡ್ ಚಿಲ್ಲಿ ಮರ್ಚೆಂಟ್ಸ್ ಅಸೋಸಿಯೇಷನ್, ಮೇಜ್ಹ್ ಮರ್ಚೇಂಟ್ಸ್ ಅಸೋಸಿಯೇಷನ್, ಜಿಎನ್ ಅಂಡ್ ಎಸ್ಎಫ್ ಟ್ರೇಡಿಂಗ್ ಅಸೋಸಿಯೇಷನ್ ಸೇರಿ ವಿವಿಧ ಸಂಘ – ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು.
ಶಾಲಾ ಕಾಲೇಜುಗಳು, ಸಾರ್ವಜನಿಕ ಸಾರಿಗೆ, ಆರೋಗ್ಯ ಸೇರಿ, ಸರ್ಕಾರಿ ಕಚೇರಿಗಳು, ಅಂಚೆ -ರೈಲ್ವೆ, ಆಸ್ಪತ್ರೆ – ಔಷಧಿ ಅಂಗಡಿಗಳು ತೆರೆದಿದ್ದು, ನಾಗರಿಕರ ಜನಜೀವನ ಸಾಮಾನ್ಯವಾಗಿತ್ತು.