ಸುದ್ದಿಮೂಲ ವಾರ್ತೆ
ಬೆಂಗಳೂರು, ನ.10: ಗುಜರಾತ್ ಸರ್ಕಾರದ ಕೈಗಾರಿಕೆಗಳು, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುಡಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳು, ನಾಗರಿಕ ವಿಮಾನಯಾನ, ಕಾನೂನು ಮತ್ತು ಉದ್ಯೋಗ ಸಚಿವ ಬಲವಂತ್ ಸಿನ್ಹ್ ರಜ್ ಪೂತ್ ನೇತೃತ್ವದ ವೈಬ್ರೆಂಟ್ ಗುಜರಾತ್ ಯಶಸ್ವಿಯಾಗಿ ಸಮಾರೋಪಗೊಂಡಿತು. ಉದ್ಯಮದ ಪ್ರಮುಖ ನಾಯಕರು, ಗುಜರಾತ್ ಸರ್ಕಾರದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನವದೆಹಲಿಯಲ್ಲಿ ಈ ಕಾರ್ಯಕ್ರಮದ ಕರ್ಟೈನ್ ರೈಸರ್ ಕಾರ್ಯಕ್ರಮ ಯಶಸ್ವಿಯಾದ ನಂತರ ಸರ್ಕಾರವು ಮುಂಬೈ, ಚಂಡೀಗಢ, ಕೊಲ್ಕತಾ, ಚೆನ್ನೈ ಮತ್ತು ಲಖನೌಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಿತ್ತು. ಜಪಾನ್, ಜರ್ಮನಿ, ಇಟಲಿ, ಡೆನ್ಮಾರ್ಕ್, ಸಿಂಗಪೂರ್, ಆಸ್ಟ್ರೇಲಿಯಾ, ಫ್ರಾನ್ಸ್, ಯುಎಇ, ವಿಯೆಟ್ನಾಂ, ದಕ್ಷಿಣ ಕೊರಿಯಾ ಮತ್ತು ಯು.ಎಸ್.ಎ.ಗಳಲ್ಲೀಯೂ ಪ್ರದರ್ಶನ ನೀಡಿತು. ಬೆಂಗಳೂರು ರೋಡ ಶೋವನ್ನು ಗುಜರಾತ್ ರಾಜ್ಯದ ನೀತಿಗಳು ಮತ್ತು ಆಡಳಿತದ ಅಪಾರ ಸಾಮರ್ಥ್ಯ ಪ್ರದರ್ಶಿಸಲು ಆಯೋಜಿಸಲಾಗಿದ್ದು ಗುಜರಾತ್ ಅನ್ನು ಭವಿಷ್ಯದ ಹೆಬ್ಬಾಗಿಲಾಗಿಸುವ ಉದ್ದೇಶ ಹೊಂದಿದ್ದು ಹಲವಾರು ವಲಯಗಳ 19 ಉದ್ಯಮ ನಾಯಕರೊಂದಿಗೆ ಸಚಿವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಈ ರೋಡ್ ಶೋದಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಬಲವಂತ್ ಸಿನ್ಹ್ ರಜ್ ಪೂತ್ ಗುಜರಾತ್ ಕಳೆದ ಎರಡು ದಶಕಗಳಿಂದ ಅಭಿವೃದ್ಧಿಗೆ ಮಾದರಿಯಾಗಿದೆ ಮತ್ತು ಆದ್ಯತೆಯ ಹೂಡಿಕೆಯ ತಾಣವಾಗಿದೆ. ಗುಜರಾತ್ ರಾಜ್ಯದ ಕೆಲ ಸಾಧನೆಗಳನ್ನು ವಿವರಿಸಿದ್ದು ಭಾರತದ ಒಟ್ಟು ಉತ್ಪಾದನೆಯ ಶೇ.18ರಷ್ಟು ಉತ್ಪಾದನೆ ಮತ್ತು ದೇಶದ ಅತ್ಯಂತ ಹೆಚ್ಚು ಸ್ಟಾರ್ಟಪ್ ಗಳನ್ನು ಹೊಂದಿದೆ ಎಂದರು.
ಈ ರಾಜ್ಯದಲ್ಲಿ ಭಾರತದ ಒಟ್ಟು ಫ್ಯಾಕ್ಟರಿಗಳ ಶೇ.11ರಷ್ಟು ಹೊಂದಿದೆ. ಲಾಜಿಸ್ಟಿಕ್ಸ್ ಪಟ್ಟಿಯಲ್ಲೂ ಗುಜರಾತ್ ಮುಂಚೂಣಿಯಲ್ಲಿದ್ದು ರಫ್ತಿನಲ್ಲಿ ಶೇ.33ರಷ್ಟು ಪಾಲು ಹೊಂದಿದೆ. ರಾಜ್ಯವು ರಾಷ್ಟ್ರೀಯ ಜಿಡಿಪಿಗೆ ಶೇ.8.4 ಕೊಡುಗೆ ನೀಡುತ್ತಿದೆ. ಕಳೆದ ಎರಡು ದಶಕಗಳಿಂದ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ ನಲ್ಲಿ ಶೇ.15ರಷ್ಟು ಹಚ್ಚಳ ಕಂಡಿದ್ದು ರಾಷ್ಟ್ರೀಯ ಸರಾಸರಿ ಮೀರಿದೆ” ಎಂದರು.
ಕರ್ನಾಟಕ ಸ್ಟೇಟ್ ಕೌನ್ಸಿಲ್ ಎಫ್.ಐ.ಸಿ.ಸಿ.ಐ ಅಧ್ಯಕ್ಷ ಹಾಗೂ ಜ್ಯೋತಿ ಲ್ಯಾಬೊರೇಟರೀಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಉಲ್ಲಾಸ್ ಕಾರಂತ್, ಐಬಿಎಂ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್ ವೇರ್ ಉಪಾಧ್ಯಕ್ಷ ಶ್ರೀ ಗೌರವ್ ಶರ್ಮಾ, ಕ್ರಾಫ್ಟ್-ಹೀಂಜ್ ಕಂಪನಿಯ ಗ್ಲೋಬಲ್ ಕೇಪಬಿಲಿಟಿ ಸೆಂಟರ್ ನನ ನಿರ್ದೇಶಕ ವಿರಾಜ್ ಮೆಹ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ಗುಜರಾತ್ ಸ್ಟೇಟ್ ಎಲೆಕ್ಟ್ರಾನಿಕ್ಸ್ ಮಿಷನ್ ನ ಮಿಷನ್ ಡೈರೆಕ್ಟರ್ ವಿದೇಹ್ ಖರೆ,ಇನ್-ಸ್ಪೇಸ್ ಪ್ರೊಮೋಷನ್ ಡೈರೆಕ್ಟೊರೇಟ್ ನಿರ್ದೇಶಕ ಡಾ. ವಿನೋದ್ ಕುಮಾರ್ ವಿಷಯ ಮಂಡನೆ ಮಾಡಿದರು.