ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ವನೆಜುವೆಲಾ ಮೇಲಿನ ಅಮೆರಿಕನ್ ಸಾಮ್ರಾಾಜ್ಯ ಶಾಹಿಗಳ ಮಿಲಿಟರಿ ದಾಳಿ ಖಂಡಿಸಿ ರಾಯಚೂರಿನಲ್ಲಿ ಎಸ್ಯುಸಿಐ ಪಕ್ಷ ಪ್ರತಿಭಟನೆ ನಡೆಸಿತು.
ಇಂದು ನಗರದ ಡಾ ಬಿಆರ್ ಅಂಬೇಡ್ಕರ್ ವೃತ್ತದ ಬಳಿ ಮಿಲಿಟರಿ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಮುಖಂಡರಾದ ಡಾ ಚಂದ್ರಗಿರೀಶ, ವೀರೇಶ್ ಎನ್ ಎಸ್., ಚನ್ನಬಸವ ಜಾನೇಕಲ್ ಮಾತನಾಡಿ, ಈ ದಾಳಿಯು ಕೇವಲ ವೆನೆಜುವೆಲಾದ ಮೇಲಷ್ಟೆೆ ಅಲ್ಲ. ಬದಲಾಗಿ ಇಡಿ ಲ್ಯಾಾಟಿನ್ ಅಮೆರಿಕದ ಮೇಲೆ ನಡೆದ ದಾಳಿಯಾಗಿದ್ದು ಅಲ್ಲಿನ ಎಲ್ಲ ದೇಶಗಳನ್ನು ಬಂದೂಕಿನ ನಳಿಕೆಯ ಅಡಿಯಲ್ಲಿ ತಮ್ಮ ಹಿಡಿತಕ್ಕೆೆ ತೆಗೆದುಕೊಳ್ಳುವುದು ಈ ದಾಳಿಯ ಹಿಂದಿನ ಉದ್ದೇಶವಾಗಿದೆ ಎಂದು ಟೀಕಿಸಿದರು.
ಒಂದು ಸಾರ್ವಭೌಮ ರಾಷ್ಟ್ರದ ಒಳಗೆ ನುಗ್ಗುವುದು, ಸಂವಿಧಾನಿಕವಾಗಿ ಆಯ್ಕೆೆಯಾದ ನಾಯಕರನ್ನು ಅಪಹರಣ ಮಾಡುವುದು ಸಾಮಾನ್ಯವಾಗಿ ಬಿಟ್ಟರೆ ಜಗತ್ತಿಿನ ಯಾವುದೇ ಸಾರ್ವಭೌಮ ರಾಷ್ಟ್ರಗಳಿಗೂ ಭದ್ರತೆ ಇಲ್ಲದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವದ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಾಪಿಸುವ, ಮಿಲಿಟರಿ ಆಡಳಿತ ಅಡಿಯಲ್ಲಿ ತನ್ನ ಕೈ ಗೊಂಬೆ ಅಮೆರಿಕನ್ ಸಾಮ್ರಾಾಜ್ಯಶಾಹಿಗಳ ಹಿತಾಸಕ್ತಿಿಗೆ ಅನುಕೂಲವಾದ ಸರ್ಕಾರ ಸ್ಥಾಾಪಿಸಲು, ಹೊರಟಿರುವುದೇ ಇದರ ಹಿಂದಿರುವ ನೈಜ ಕಾರಣವಾಗಿದೆ. ಭಾರತ ಸರ್ಕಾರವು ಸಹ ಈ ದಾಳಿಯನ್ನ ಖಂಡಿಸಬೇಕೆಂದು ಒತ್ತಾಾಯಿಸಿದರು.
ಈ ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಅಣ್ಣಪ್ಪ, ಪ್ರಮೋದ, ಮಲ್ಲನಗೌಡ, ಹಯ್ಯಾಾಳಪ್ಪ, ಬಸವರಾಜ್, ವೀರೇಶ, ರೆಹಾನ್ ಬೆಂಬಲಿಗರಾದ ವೆಂಕಯ್ಯ, ವೀರಭದ್ರಯ್ಯ ಸ್ವಾಾಮಿ, ನರಸಪ್ಪ, ಮಹೇಂದ್ರ ಸಿಂಗ್ ವೀರಪ್ಪ ಪಾಟೀಲ್, ಮಹಾಂತೇಶ, ಗೌಸ್ ಮುಂತಾದವರು ಭಾಗವಹಿಸಿದ್ದರು.
ವೆನೆಜುವೆಲಾ ಅಮೇರಿಕಾ ಮಿಲಟರಿ ದಾಳಿ ಖಂಡಿಸಿ ಎಸ್ಯುಸಿಐ ಪ್ರತಿಭಟನೆ

