ಸುದ್ದಿಮೂಲ
ಬಳ್ಳಾರಿ, ಏ. ೦೩: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಹಾಗೂ ಕಾರ್ಪೋರೇಟ್ ಮಾಲೀಕರ ಪರನೀತಿಗಳ ವಿರುದ್ಧ ನಿರಂತರ ಹೋರಾಟ ಬೆಳೆಸುತ್ತಿರುವ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ೧೩ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷ ತಿಳಿಸಿದೆ.
ಎಸ್ಯುಸಿಐ(ಸಿ)ನ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಕೆ. ಸೋಮಶೇಖರ್ ಅವರು ಈ ಮಾಹಿತಿ ನೀಡಿದ್ದು, ಬಳ್ಳಾರಿ ನಗರ (ಸಾಮಾನ್ಯ) ಕ್ಷೇತ್ರದಿಂದ ಆರ್. ಸೋಮಶೇಖರಗೌಡ, ಕಂಪ್ಲಿ ಎಸ್ಟಿ ಮೀಸಲು ಕ್ಷೇತ್ರದಿಂದ ಎ.ದೇವದಾಸ್, ಬೆಂಗಳೂರಿನ ರಾಜಾಜಿನಗರದಿಂದ ರಮಾ.ಟಿ.ಸಿ, ರಾಜಾರಾಜೇಶ್ವರಿ ನಗರದಿಂದ ವೇಣುಗೋಪಾಲ್ ಭಟ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಭಾರತಿ, ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಮಧುಲತಾ ಗೌಡರ್, ಕಲ್ಬುರ್ಗಿ ದಕ್ಷಿಣದಿಂದ ಮಹೇಶ್.ಎಸ್.ಬಿ ಹಾಗೂ ಕಲ್ಬುರ್ಗಿ ಗ್ರಾಮೀಣದಿಂದ ಗಣಪತ್ ರಾವ್ ಮಾನೆ, ಮೈಸೂರಿನ ಕೃಷ್ಣರಾಜದಿಂದ ಸಂಧ್ಯಾ.ಪಿ.ಎಸ್, ರಾಯಚೂರು ನಗರದಿಂದ ಎನ್.ಎಸ್ ವೀರೇಶ್, ತುಮಕೂರು ನಗರದಿಂದ ಎಸ್.ಎನ್. ಸ್ವಾಮಿ, ವಿಜಯಪುರ ನಗರದಿಂದ ಮಲ್ಲಿಕಾರ್ಜುನ್ ತಳವಾರ್, ಯಾದಗಿರಿಯಿಂದ ಕೆ.ಸೋಮಶೇಖರ್ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು.
ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಮಂಜುಳಾ, ನಾಗಲಕ್ಷಿö್ಮ, ಡಾ. ಎನ್. ಪ್ರಮೋದ್, ಶಾಂತಾ, ಗೋವಿಂದ್ ಈ ಸಂದರ್ಭದಲ್ಲಿದ್ದರು.