ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.22:
ಸುಕೋ ಬ್ಯಾಾಂಕ್ ಕೃಷಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸೃಜನಶೀಲವಾಗಿ – ಕ್ರಿಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಿದೆ ಎಂದು ಸಾವಯುವ ಕೃಷಿಕರಾದ ಚಿಂದಾನಂದಪ್ಪ ಅಂಗಡಿ ಅವರು ತಿಳಿಸಿದ್ದಾಾರೆ.
ಸುಕೋ ಬ್ಯಾಾಂಕ್ನ ಸಿಂಧನೂರು ಶಾಖೆಯಲ್ಲಿ ನೂತನ ವರ್ಷ 2026ರ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಕೋ ಬ್ಯಾಾಂಕ್ ಆರಂಭದಿಂದಲೂ ಕೃಷಿ, ಕೃಷಿಕರು ಮತ್ತು ನೀರು ಸಂರಕ್ಷಣೆ ಹೀಗೇ ಅನೇಕ ಕ್ಷೇತ್ರಗಳಲ್ಲಿ ವಿಭಿನ್ನವಾಗಿ – ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿಿದೆ. ಪ್ರಸ್ತುತ ಪರ್ಯಾಯ ಬೆಳೆ, ಪರ್ಯಾಯ ಕೃಷಿ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳತ್ತ ಬ್ಯಾಾಂಕ್ ಗಮನ ನೀಡಬೇಕಿದೆ ಎಂದರು.
‘ಸುಕೃತ’ ಕೃಷಿ ಪ್ರಶಸ್ತಿಿಯನ್ನು ನೀಡುತ್ತಿಿದ್ದ ಸುಕೋ ಬ್ಯಾಾಂಕ್ ಪುನರಾರಂಭಿಸಬೇಕು. ಈ ಮೂಲಕ ಕೃಷಿಯಲ್ಲಿ ಪ್ರಯೋಗಗಳನ್ನು ಪ್ರೋೋತ್ಸಾಾಹಿಸಬೇಕು. ಇಲ್ಲವಾದಲ್ಲಿ ಕೃಷಿಯಲ್ಲಿ ಪ್ರಯೋಗಗಳು ನಿಧಾನಗತಿಯಲ್ಲಿ ನಡೆಯುತ್ತವೆ ಎಂದು ಅವರು ಅಭಿಪ್ರಾಾಯ ವ್ಯಕ್ತಪಡಿಸಿದರು.
ಕಿರಣ ಪತ್ತಿಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ
ಶ್ರೀಮತಿ ಮಂಜುಳಾ ಪಾಟೀಲ್ ಅವರು, ಅತಿಥಿಗಳಾಗಿ,
ಸುಕೋ ಬ್ಯಾಾಂಕ್ 1995 ರಲ್ಲಿ ಜನತಾ ಸಹಕಾರಿಯೊಂದಿಗೆ ಸಿಂಧನೂರಲ್ಲಿ ಪ್ರಾಾರಂಭವಾಗಿ ಆಲದಮರದ ರೀತಿಯಲ್ಲಿ ಬೆಳೆದಿದೆ. ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಾಸಾರ್ಹ ಸೇವೆ ಸಲ್ಲಿಸುವ ಮೂಲಕ ಗ್ರಾಾಹಕರಲ್ಲಿ ಸಹಕಾರ ಕ್ಷೇತ್ರದ ಪುನಶ್ಚೇತನಕ್ಕೆೆ ಅವಕಾಶ ನೀಡಿದೆ ಎಂದರು.
ಸುಕೋ ಬ್ಯಾಾಂಕಿನ ಜನರಲ್ ಮ್ಯಾಾನೇಜರ್ ಆಶಾ ಅವರು, ಸುಕೋ ಬ್ಯಾಾಂಕ್ ಶೀಘ್ರದಲ್ಲೇ ಶೆಡ್ಯೂಲ್ ಬ್ಯಾಾಂಕ್ ಆಗಿ ಉನ್ನತೀಕರಣಗೊಳ್ಳಲಿದೆ. ಗ್ರಾಾಹಕರು ಮತ್ತು ಷೇರುದಾರರ ಸಹಕಾರ ಬ್ಯಾಾಂಕ್ನ ಅಭಿವೃದ್ಧಿಿಯಲ್ಲಿ ವಿಶ್ವಾಾಸಾರ್ಹವಾಗಿದೆ ಎಂದರು.
ಶಾಖಾ ವ್ಯವಸ್ಥಾಾಪಕಿ ಲಕ್ಷ್ಮೀದೇವಿ ದಂಡಿನ್ ಅವರು ಸ್ವಾಾಗತ ಕೋರಿದರು. ಸುಕೋ ಬ್ಯಾಾಂಕ್ನ ಕ್ಲಸ್ಟರ್ ಮ್ಯಾಾನೇಜರ್
ಶ್ರೀನಿವಾಸ ಶಾಖಾಪುರ ಅವರು ವಂದಿಸಿದರು.
ಸುಕೋಬ್ಯಾಾಂಕ್ ಕ್ರಿಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗಳ ಕೇಂದ್ರ

