ಸುದ್ದಿಮೂಲ ವಾರ್ತೆ ಕಲಬುರಗಿ, ಜ.05:
ಕರ್ನಾಟಕ ಲೋಕಾಯುಕ್ತ ನ್ಯಾಾಯಮೂರ್ತಿ ಬಿ.ಎಸ.ಪಾಟೀಲ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿ ವಿವಿಧ ಶಾಖೆಗಳ ಪರಿಶೀಲಿಸಿದರು. ಜಿಲ್ಲೆಯಲ್ಲಿ ಜಮೀನು ಮಂಜೂರಾತಿಗೆ ಮಾಜಿ ಸೈನಿಕರಿಂದ ಸಲ್ಲಿಕೆಯಾದ 55 ಪ್ರಸ್ತಾಾವನೆಯಲ್ಲಿ ಇದೂವರಗೆ 7 ಪ್ರಕರಣಗಳಲ್ಲಿ ಮಾತ್ರ ಮಂಜೂರಾತಿ ದೊರೆತಿದೆ. ಎಲ್ಲಾ ಪ್ರಸ್ತಾಾವನೆಗಳನ್ನು ಕೂಡಲೆ ವಿಲೇವಾರಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ನಿರ್ದೇಶನ ನೀಡಿದರು.
ಇದಲ್ಲದೆ ಕೆರೆ, ಸಿಂಧುತ್ವ ಶಾಖೆ, ಕಂದಾಯ ಕೋರ್ಟ್ ಕೇಸ್, ಭೂ ಪರಿವರ್ತನೆ ಶಾಖೆಗೂ ಭೇಟಿ ನೀಡಿದ ನ್ಯಾಾಯಮೂರ್ತಿಗಳು ಕಳೆದ 2025ರ ಕ್ಯಾಾಲೆಂಡರ್ ವರ್ಷದಲ್ಲಿ ಜನವರಿ ದಿಂದ ಡಿಸೆಂಬರ್ ವರೆಗೆ ಸ್ವೀಕೃತ ಅರ್ಜಿ, ವಿಲೇವಾರಿ, ಬಾಕಿ ವಿವರ ಸಲ್ಲಿಸುವಂತೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿಿನ ಸೂಚನೆ ನೀಡಿದರು. ಇದೇವೇಳೆ ಕೆ.ಕೆ.ರ್.ಡಿ.ಬಿ. ಕಾಮಗಾರಿ ವರ್ಷದ ಮಾಹಿತಿ ನೀಡಲು ಎ.ಡಿ.ಸಿ. ಅವರಿಗೆ ಸೂಚಿಸಿದರು.
ಚಿತ್ತಾಾಪುರ ತಾಲೂಕಿನ ವಾಡಿ ಗ್ರಾಾಮದ ಸರ್ವೇ ನಂ.180/1 ರಲ್ಲಿ 2.18 ಎಕರೆ ಜಮೀನು ಭೂಸ್ವಾಾಧೀನ ಮಾಡಿಕೊಂಡಿದ್ದು ಈ ಸಮಸ್ಯೆೆ, ಒಂದು ವಾರದೊಳಗೆ ಸಮಸ್ಯೆೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನ್ಯಾಾ. ಬಿ.ಎಸ್.ಪಾಟೀಲ ಸೂಚಿಸಿದರು.
ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಖಬಿರ್ಕರ್, ಎಸ್.ಪಿ. ಸಿದ್ದರಾಜು, ಲೋಕಾಯುಕ್ತ ಸಂಸ್ಥೆೆಯ ನ್ಯಾಾಯಾಧೀಶ ಶ್ರೀನಾಥ್ ಕೆ., ವಿಜಯಾನಂದ., ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿಿ, ತಹಶೀಲ್ದಾಾರ ಆನಂದಶೀಲ ಕೆ. ಇದ್ದರು.
ಡಿಸಿ ಕಚೇರಿಗೆ ಲೋಕಾಯುಕ್ತರ ದಿಢೀರ್ ಭೇಟಿ

