ಸುದ್ದಿಮೂಲ ವಾರ್ತೆ ಯಲಬುರ್ಗಾ, ೆ.11:
ಕ್ಷೇತ್ರದ ಎರಡು ಸಾವಿರ ವಿದ್ಯಾಾರ್ಥಿಗಳಿಗೆ ವಸತಿ ನಿಲಯಗಳನ್ನು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಿ ಮಂಜೂರು ಮಾಡಿಸಿದ್ದಾರೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ ಉನ್ನತ ಶಿಕ್ಷಣ ಅಭಿವೃದ್ದಿಗೆ ರಾಯರೆಡ್ಡಿಿ ಅವರು ಅಪಾರ ಕೊಡಿಗೆ ನೀಡಿದ್ದಾರೆ. ಗ್ರಾಾಮೀಣ ಪ್ರದೇಶದ ವಿದ್ಯಾಾರ್ಥಿಗಳು ಶಿಕ್ಷಣದಿಂದ ಉಚಿತವಾಗಬಾರದೆಂದು. ವಸತಿ ನಿಲಯಗಳ ಮಂಜೂರಾತಿ ವರದಾನವಾಗಿದೆ ಎಂದು ಗ್ಯಾಾರೆಂಟಿ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಹಳ್ಳಿಿ ಹೇಳಿದರು.
ಪಟ್ಟಣದ ಬಯಲುರಂಗ ಮಂದಿರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಿ ಉದ್ದೇಶಿಸಿ ಅವರು ಮಾತನಾಡಿದರು.ಒಂದೇ ವರ್ಷದಲ್ಲಿ 18 ಹಾಸ್ಟೆೆಲ್ ಗಳನ್ನು ಮಂಜೂರು ಮಾಡಿದ್ದಾರೆ. ಸಿಎಂ ಹಾಗೂ ಸಚಿವರಿಗೆ ಕ್ಷೇತ್ರದ ಜನತೆಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಸಮಾಜ ಕಲ್ಯಾಾಣ ಇಲಾಖೆ 6 ಹಾಸ್ಟೆೆಲ್ 650 ವಿದ್ಯಾಾರ್ಥಿಗಳು, ಬಿಸಿಎಂ ಹಾಸ್ಟೆೆಲ್ 12 ಮಂಜೂರಾಗಿದ್ದು 1200 ವಿದ್ಯಾಾರ್ಥಿಗಳು ಅಭ್ಯಾಾಸ ಮಾಡಲಿದ್ದಾರೆ. ಇದೊಂದು ಐತಿಹಾಸಿಕ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ವರ್ಷವಾಗಿದೆ. ತಾಲೂಕಿನ ಎಲ್ಲಾ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳ ಜತೆಗೆ ಮೂಲಭೂತ ಸೌಕರ್ಯ ಕಲ್ಪಿಿಸಲಾಗಿದೆ. ಗ್ರಾಾಮೀಣ ಪ್ರದೇಶದ ವಿದ್ಯಾಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ತಿಳಿಸಿದರು.
ಕುಕನೂರು ಗ್ಯಾಾರೆಂಟಿ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿಿ ಮಾತನಾಡಿ, ಕ್ಷೇತ್ರದ ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶಾಸಕ ರಾಯರಡ್ಡಿಿ ಅವರ ಸತತ ಪ್ರಯತ್ನದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಜೂರಾಗಿವೆ ಎಂದರು. ಬಸ್ ಸೇರಿದಂತೆ ಇತರೆ ಸಮಸ್ಯೆೆಗಳನ್ನು ತಪ್ಪಿಿಸಲು ಹಾಸ್ಟೆೆಲ್ ವರದಾನವಾಗಲಿದೆ, ವಿಶೇಷವಾಗಿ ಮಹಿಳಾ ಹಾಸ್ಟೆೆಲ್ ವಿದ್ಯಾಾರ್ಥಿಗಳ ಸುರಕ್ಷತೆ ದೃಷ್ಟಿಿಯಿಂದ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಹಸೀಲ್ದಾಾರ ಪ್ರಕಾಶ ನಾಶಿ ಹಾಗೂ ಕೊಪ್ಪಳ ವಿವಿ ಕುಲಪತಿ ಎಸ್.ವಿ.ಢಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಾಚಾರ್ಯ ವಿರುಪಾಕ್ಷಪ್ಪ, ತಹಸೀಲ್ದಾಾರ ಪ್ರಕಾಶ ನಾಶಿ, ಬಸವರಾಜ ಬೆಣ್ಣೆೆ ಶಿರೂರು, ತಾಪಂ ಇಒ ಸಂತೋಷ ಪಾಟೀಲ ಬಿರಾದರ, ಎಡಿ ಹನುಮಂತಗೌಡ ಪಾಟೀಲ, ಅರ್ಕೆಡಿಸಿಸಿ ಬ್ಯಾಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಾಗಡ್ಡಿಿ, ಹನುಮಂತಗೌಡ ಪಾಟೀಲ, ಬಿಸಿಎಂ ಅಧಿಕಾರಿ ಡಾ.ಶಿವಶಂಕರ ಕರಡಕಲ್, ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿಿ, ವೀರನಗೌಡ ಪೋಲಿಸಪಾಟೀಲ, ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿಿ, ಮಲ್ಲು ಜಕ್ಕಲಿ, ಹಂಪಯ್ಯಸ್ವಾಾಮಿ ಹಿರೇಮಠ, ಹುಲಗಪ್ಪ ಬಂಡಿವಡ್ಡರ, ಬಿಸಿಎಂ ಅಧಿಕಾರಿ ಡಾ.ಶಿವಶಂಕರ ಕರಡಕಲ್, ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿಿ ಇತರರು ಇದ್ದರು.
ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನ: ಸುಧೀರ್

