ಸುದ್ದಿಮೂಲ ವಾರ್ತೆ ಬೀದರ್, ನ.20:
ಕಬ್ಬು ದರ ನಿಗದಿ ಬೇಡಿಕೆ ಹಿನ್ನೆೆಲೆಯಲ್ಲಿ ಕಳೆದೊಂದು ವಾರದಿಂದ ಹೋರಾಟ ನಡೆಸುತ್ತಿಿದ್ದ ರೈತ ಮುಖಂಡರು ಗುರುವಾರ ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ ಗುಂಟಿ ಹಾಗೂ ರೈತ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರು ರೈತರೊಂದಿಗೆ ಮೊಬೈಲ್ ಸ್ಪೀಕರ್ನಲ್ಲಿ ಮಾತನಾಡಿ ಕಾರ್ಖಾನೆ ಮಾಲೀಕರನ್ನು ಮನವೊಲಿಸಿ ಪ್ರತಿ ಟನ್ ಕಬ್ಬಿಿಗೆ ರೂ. 2850 ಕ್ಕೆೆ ಹೆಚ್ಚುವರಿಯಾಗಿ ರೂ. 50 ಸೇರಿಸಿ ರೂ. 2900 ನೀಡಲು ಒಪ್ಪಿಿಗೆ ಪಡೆಯಲಾಗಿದೆ. ಇದಕ್ಕೆೆ ಮುಖ್ಯಮಂತ್ರಿಿಗಳು ಅವರು ಈಗಾಗಲೇ ಘೋಷಿಸಿರುವ ಸರ್ಕಾರದ ರೂ. 50 ಸಹಾಯ ಸೇರಿ ಒಟ್ಟಾಾರೆ ಪ್ರತಿ ಟನ್ಗೆ ರೂ. 2950 ರೈತರಿಗೆ ಲಭ್ಯವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಚಿವರು ರೈತರೊಂದಿಗೆ ಮೊಬೈಲ್ನಲ್ಲಿ ಮಾತನಾಡಿದರು. ಇದಕ್ಕೆೆ ರೈತ ಮುಖಂಡರು ಒಪ್ಪಿಿಗೆ ಸೂಚಿಸಿ ಪ್ರತಿಭಟನೆ ಕೈಬಿಡುವುದಾಗಿ ತಿಳಿಸಿದ್ದಾರೆ. ಈ ರಾಜಿಗೆ ಒಪ್ಪಿಿ ಪ್ರತಿಭಟನೆ ಕೈ ಬಿಟ್ಟ ರೈತರಿಗೆ ಸಚಿವ ಈಶ್ವರ ಖಂಡ್ರೆೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಮಾತನಾಡಿ, ಕಳೆದ ಎಂಟು ದಿನಗಳಿಂದ ನಡೆಸುತ್ತಿಿದ್ದು ಪ್ರತಿಭಟನೆಯನ್ನು ರೈತ ಮುಖಂಡರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ರೈತ ಮುಖಂಡರು ಕೆಲ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಬೀದರನಲ್ಲಿ ಸಕ್ಕರೆ ಸಂಶೋಧನಾ ಕೇಂದ್ರ ಸ್ಥಾಾಪಿಸುವಂತೆ ಮನವಿ ಸಲ್ಲಿಸಿದ್ದು, ಸರಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗವುದು. ಸಕ್ಕರೆ ರಿಕವರಿ ದರ ನಿಗದಿ ಪರಿಶೀಲನೆಗೆ ಪ್ರತಿ ಕಾರ್ಖಾನೆಗೆ ಪದವಿ ಕಾಲೇಜಿನ ರಸಾಯನಶಾಸ್ತ ಪ್ರಾಾಧ್ಯಾಾಪಕರ ತಂಡವೊಂದನ್ನು ನೇಮಿಸಲಾಗುವುದು. ಅಲ್ಲದೇ ರೈತರು ಸಹ 15 ದಿನಕ್ಕೊೊಮ್ಮೆೆ ಕಾರ್ಖಾನೆಗೆ ಭೇಟಿ ನೀಡಿ ರಿಕವರಿಯನ್ನು ಪರಿಶೀಲಿಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾದ ಪ್ರವೀಣ ಬರಗಲ್ ಸೇರಿದಂತೆ ರೈತ ಮುಖಂಡರು ಉಪಸ್ಥಿಿತರಿದ್ದರು.
ಕಲಿಕಾ ದರ್ಶನಕ್ಕೆೆ ಚಾಲನೆ :
ಮಕ್ಕಳಲ್ಲಿ ಕಲಿಕಾ ಆಸಕ್ತಿಿ ಹುಟ್ಟಿಿಸಿ : ಡಾ.ಶಶಿಕಾಂತ ಉಡಿಕೇರಿ
ಭಾಲ್ಕಿಿ, ಶಿಕ್ಷಕರಾದವರೂ ವಿನೂತನ ಪ್ರಯೋಗಗಳನ್ನು ಅನುಸರಿಸಿ ಮಕ್ಕಳಲ್ಲಿ ಕಲಿಕಾ ಆಸಕ್ತಿಿ ಹುಟ್ಟಿಿಸುವ ಪ್ರಯತ್ನ ಮಾಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಾಲಯದ ಉಪಕುಲಪತಿ ಡಾ.ಶಶಿಕಾಂತ ಉಡಿಕೇರಿ ಹೇಳಿದರು.
ತಾಲೂಕಿನ ಕರಡ್ಯಾಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾಾನ ವಿದ್ಯಾಾಪೀಠ ಟ್ರಸ್ಟ್ನ ವತಿಯಿಂದ ಗುರುವಾರ ಆಯೋಜಿಸಿದ್ದ ಕಲಿಕಾ ದರ್ಶನ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಮಕ್ಕಳ ಮನಸ್ಸು ಹಸಿ ಮಣ್ಣು ಇದ್ದಂತೆ ಬೇಕಾದ ಮೂರ್ತಿ ತೆಗೆಯಬಹುದು. ಅಂತಹ ಮುಗ್ಧ ಮನಸ್ಸು ಹೊಂದಿರುವ ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯಾಾಧಾರಿತ ಶಿಕ್ಷಣ ಕಲ್ಪಿಿಸಿದರೇ ಮುಂದೆ ಅವರು ದೇಶದ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಇಂದಿನ ಒತ್ತಡದ ವಿವಿಧ ಚಟುವಟಿಕೆಗಳ ಮಧ್ಯೆೆ ಶಿಕ್ಷಣದ ಮೌಲ್ಯ ಕುಸಿಯುತ್ತಿಿದೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು, ಪ್ರಾಾಥಮಿಕ ಹಂತದ ಶಿಕ್ಷಣ ಮಕ್ಕಳ ಭವಿಷ್ಯ ನಿರ್ಧರಿಸುತ್ತದೆ.
ಹಾಗಾಗಿ ಶಿಕ್ಷಕರು ಹೊಸತನ್ನು ತಿಳಿದುಕೊಂಡು ಮಕ್ಕಳ ಬುದ್ಧಿಿಮಟ್ಟಕ್ಕೆೆ ತಕ್ಕಂತೆ ಬೋಧಿಸುವ ಕೆಲಸವಾದರೇ ಮಾತ್ರ ಮಕ್ಕಳಲ್ಲಿ ಕಲಿಯುವ ಆಸಕ್ತಿಿ ಹೆಚ್ಚುತ್ತದೆ. ರಾಷ್ಟ್ರೀಯ ಹಬ್ಬಗಳ ಮಹತ್ವ, ಮಹಾತ್ಮರ ಜೀವನ ಚರಿತ್ರೆೆ ಹೇಳಿಕೊಡುವುದರ ಜತೆಗೆ ಕ್ರೀೆಡೆಗೆ ಹೆಚ್ಚಿಿನ ಆಸಕ್ತಿಿ ನೀಡಿದರೆ ಮಕ್ಕಳು ಶಿಕ್ಷಣ ಕಲಿಕೆಗೆ ಹೆಚ್ಚು ಉತ್ಸಾಾಹ ತೋರುತ್ತಾಾರೆ ಎಂದು ತಿಳಿಸಿದರು.
ಸಾನ್ನಿಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿಿದೋಷ ಹೆಚ್ಚುತ್ತಿಿದೆ. ಹಾಗಾಗಿ ಮಕ್ಕಳನ್ನು ಮೊಬೈಲ್ನಿಂದ ಆದಷ್ಟು ದೂರ ಇಡುವ ಕೆಲಸ ನಮ್ಮೆೆಲ್ಲರ ಮೇಲಿದೆ ಎಂದು ತಿಳಿಸಿದರು.
ಚಿಂತಕ ಸಿದ್ದಪ್ಪ ಮೂಲಗೆ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.ಕಲಬುರಗಿ ಕೇಂದ್ರಿಿಯ ವಿಶ್ವವಿದ್ಯಾಾಲಯದ ಪ್ರಾಾಧ್ಯಾಾಪಕ ಡಾ.ಕಿರಣ ಗಾಜನೂರು ಅವರು ದಿಕ್ಸುಚಿ ಮಾತುಗಳನ್ನು ಹೇಳಿದರು. ಕಲಬುರಗಿ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಾಲಯದ ಅರುಣ ಜೋಳದ ಕೂಡ್ಲಗಿ, ಡಾ.ಜ್ಯೋೋತಿ, ಡಾ.ದೇವಿಕಾ ವಿಷಯವಾರು ಸಂವಾದ ನಡೆಸಿ ಕೊಟ್ಟರು. ಜ್ಯೋೋತ್ನಾಾ ಅಂಬೇಡ್ಕರ್ ಯೋಗ ಶಿಕ್ಷಣ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಾಲಯದ ಸಿಂಡಿಕೆಟ್ ಸದಸ್ಯ ರಾಘವೇಂದ್ರ ಭೈರಪ್ಪ, ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್, ಆಡಳಿತಾಧಿಕಾರಿ ಮೋಹನ ರೆಡ್ಡಿಿ ಸೇರಿದಂತೆ ಹಲವರು ಇದ್ದರು. ಸವಿತಾ ಭೂರೆ, ಸುಧಾ ನಾಯಕ ವಚನ ಗಾಯನ ನಡೆಸಿ ಕೊಟ್ಟರು.
ಪ್ರಾಾಚಾರ್ಯ ಬಸವರಾಜ ಮೊಳಕೀರೆ ಸ್ವಾಾಗತಿಸಿದರು. ಮಧುಕರ ಗಾಂವರ್ಕ ನಿರೂಪಿಸಿದರು. ಬಾಲಾಜಿ ವಲ್ಲೂರೆ ವಂದಿಸಿದರು.
ಕೋಟ್
ಇಅದಿನ ಮಕ್ಕಳು ಸಾಕಷ್ಟು ಬುದ್ಧಿಿವಂತರಿದ್ದಾರೆ. ಆದರೆ ಹೃದಯ ವೈಶ್ಯಾಾಲತೆ ಕಡಿಮೆ ಆಗುತ್ತಿಿದೆ. ಶಿಕ್ಷಕರು ಕಾಲಕ್ಕೆೆ ತಕ್ಕಂತೆ ಬೋಧನಾ ಪದ್ಧತಿ ಅನುಸರಿಸಿ ಮಕ್ಕಳಿಗೆ ಜೀವನದ ಪಾಠ ಹೇಳಿಕೊಡುವ ಕೆಲಸ ಮಾಡಬೇಕು.
-ಗುರುಬಸವ ಪಟ್ಟದ್ದೇವರು ಹಿರೇಮಠ ,ಸಂಸ್ಥಾಾನ ಭಾಲ್ಕಿಿ

