ಸುದ್ದಿಮೂಲ ವಾರ್ತೆ ಅರಕೇರಾ, ನ.26:
ಭಕ್ತರ ಆರಾಧ್ಯ ದೈವ ಪಟ್ಟಣದ
ಶ್ರೀ ಸೂಗೂರೇಶ್ವರಜಾತ್ರಾಾಮಹೋತ್ಸವದ ಅಂಗವಾಗಿ ಬುಧವಾರ ಸಹಸ್ರಾಾರು ಭಕ್ತರಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾ ರಥೋತ್ಸವವ ಜರುಗಿತು.
ಜಾತ್ರೆೆ ನಿಮಿತ್ಯ ದೇವಸ್ಥಾಾನದಲ್ಲಿ ಬೆಳಗ್ಗೆೆಯಿಂದ ವಿಶೇಷ ಪೂಜೆ, ಅಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ರಥೋತ್ಸವವು ಹಸಿರು ತೋರಣ, ತೆಂಗಿನ ಗರಿ, ಬಾಳೆಗೊನೆ, ಗುಲಾಬಿ, ಸೇವಂತಿಗೆ, ಚೆಂಡು ಹೂ,ನಾಗಸಂಪಿಗೆ, ಡೇರೆ ಹೂಗಳಿಂದ ಸೇರಿದಂತೆ ಬಣ್ಣ ಬಣ್ಣದ ವಿದ್ಯುತ್ ದೀಪ, ಸೇರಿದಂತೆ ಬೃಹತ್ ಆಕಾರದ ಗಂಟಪರುದ್ರಾಾಕ್ಷಿ ಹಾರಗಳಿಂದ ಶೃಂಗಾರ ಮಾಡಲಾಗಿತ್ತು.ಸಂಜೆ ರಥಕ್ಕೆೆ ದೇವಸ್ಥಾಾನದಿಂದ ಪಲ್ಲಕ್ಕಿಿಯಲ್ಲಿ ಸೂಗೂರೇಶ್ವರ ಉತ್ಸವ ಮೂರ್ತಿಯನ್ನು ಸಕಲ ವಾದ್ಯ ಮೇಳಗಳೊಂದಿಗೆ ಸುಮಂಗಲಿಯರು ಕಳಸ ಹಿಡಿದು ರಥದ ಸನ್ನಿಿಧಿಗೆ ಕರೆ ತಂದರು. ಸುತ್ತ ಮುತ್ತಲಿನ ಹಳ್ಳಿಿಗಳಿಂದ ಅಪಾರ ಭಕ್ತರು ಭಾಗವಹಿಸಿದ್ದರು. ಉತ್ತುತ್ತಿಿ, ಬಾಳೆಹಣ್ಣು ಎಸೆದು ಭಕ್ತರು ಸಂಭ್ರಮಿಸಿದರು. ಶ್ರೀ ಸೂಗೂರೇಶ್ವರ ಜಯ ಘೋಷಗಳನ್ನು ಕೂಗುವ ಮೂಲಕ ರಥವನ್ನು ಶ್ರೀ ಬಸವಣ್ಣನ ಪಾದದ ಕಟ್ಟೆೆಯವರೆಗೆ ಎಳೆದರು.
ರಂಗು ರಂಗಿನ ಆಕಾಶ ಪಟಾಕಿಗಳನ್ನು ಸಿಡಿಸುವ ಮೂಲಕ ನೆರೆದಿದ್ದ ಭಕ್ತರ ಗಮನಸೆಳೆದವು. ಜಾತ್ರೆೆ ನಿಮಿತ್ತ ಅನ್ನಪ್ರಸಾದ ವ್ಯವಸ್ಥೆೆ ಕಲ್ಪಿಿಸಲಾಗಿತ್ತು.ದೇವದುರ್ಗ ಪೊಲೀಸ್ ಠಾಣೆ ಅಧಿಕಾರಿಗಳು ಬಿಗಿ ಬಂದೋಬಸ್ತ್ ವ್ಯವಸ್ಥೆೆ ಕಲ್ಪಿಿಸಿದ್ದರು. ಹಿರೇಮಠದ ಚಂದ್ರಶೇಖರಯ್ಯ ಸ್ವಾಾಮಿ ಸಾನಿಧ್ಯವಹಿಸಿದ್ದರು. ರಾಚಯ್ಯ ಸ್ವಾಾಮಿ ಮಠಪತಿ, ಗೋಪಿ ಕೃಷ್ಣ ಗುರುವಿನ, ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ಪಾಟೀಲ್, ಕೆ.ಅನಂತರಾಜ ನಾಯಕ, ಆರ್ಕೆಡಿಸಿಸಿ ಬ್ಯಾಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಪ್ರಮುಖರಾದ ತಿಮ್ಮಪ್ಪ ನಾಯಕ ಪೋಲಿಸ್ಪಾಟೀಲ್, ಚಂದ್ರಶೇಖರ ಶೆಟ್ಟಿಿ, ಸೀತಣ್ಣ ನಾಯಕ ಗುರಿಕಾರ, ವೆಂಕಟೇಶ ನಾಯಕ ದೊರೆ, ಬಸವರಾಜ ಪೂಜಾರಿ, ಹನ್ಮಂತ್ರಾಾಯಪೂಜಾರಿ, ಬಸವರಾಜ ಕ್ವಾಾಟೆ ದೊರೆ, ಶೇಖರಪ್ಪ ಗೌಡ ಮಾಲಿ ಪಾಟೀಲ್, ಸಿದ್ದಾರ್ಥಹವಲ್ದಾಾರ್, ವರದರಾಜ ನಾಯಕ ತರಗ್ಗಿಿಹಾಳ ದೊರೆ ಇದ್ದರು.
ಅದ್ಧೂರಿಯಾಗಿ ಜರುಗಿದ ಸೂಗೂರೇಶ್ವರ ಮಹಾ ರಥೋತ್ಸವ

