ಸುದ್ದಿಮೂಲ ವಾರ್ತೆ
ಆನೇಕಲ್, ಆ. 12 : ಸರ್ಜಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುನೀತ ಶಶಿಧರ್, ಉಪಾಧ್ಯಕ್ಷರಾಗಿ ಎ.ಸತೀಶ್ ಕುಮಾರ್ ಆಯ್ಕೆಯಾದರು.
ಪಂಚಾಯಿತಿಯ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸುನೀತ ಶಶಿಧರ್, ಬಿಜೆಪಿ ಬೆಂಬಲಿತ ಚಿನ್ನು ರಾಮಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಎ.ಸತೀಶ್ ಕುಮಾರ್, ಬಿಜೆಪಿಯಿಂದ ಎಸ್.ಎಸ್ ವಿಜಯ್ ಶೇಖರ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಗಾಧಿಗಾಗಿ ಸ್ಪರ್ಧಿಸಿದ ಸುನೀತ ಶಶಿಧರ್ ಪರವಾಗಿ 22 ಮತಗಳು ಪಡೆದು ವಿಜೇತರಾದರೆ, ಚಿನ್ನು ರಾಮಸ್ವಾಮಿ ರವರು 7 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎಸ್ ವಿಜಯ್ ಶೇಖರ್ ರವರಿಗೆ 07 ಮತ ಪಡೆದು ಪರಾಭವಗೊಂಡರು. ಇನ್ನೂ ಎ.ಸತೀಶ್ ಕುಮಾರ್ ರವರು 22 ಮತ ಪಡೆದು ಗೆಲುವು ಸಾಧಿಸಿದರು.
ನೂತನ ಅಧ್ಯಕ್ಷರಾದ ಸುನೀತ ಶಶಿಧರ್ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಪಕ್ಷಭೇದಭಾವವನ್ನು ಮಾಡದೆ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಟ್ಟು ಸರ್ಜಾಪುರ ಗ್ರಾಮ ಪಂಚಾಯಿತಿಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಾಬು ರೆಡ್ಡಿ ಎಸ್.ವೈ ಶಂಭಯ್ಯ, ಜಯ ಶಂಕರ್, ಮಂಜೇಗೌಡ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್, ಎಸ್.ಎಂ ಶ್ರೀನಿವಾಸ್, ಎಸ್.ವಿ ಶ್ರೀನಿವಾಸ್ ಬುಡಗಪ್ಪ, ವೆಂಕಟೇಶ್, ಮಂಜು ಸರ್ಜಾ, ಭರತ್, ಗಣೇಶ್, ಕಿಟಿಕಿ ಶ್ರೀನಿವಾಸ್, ಶಹಜನ್ ಹುನ್ನೀಸಾ, ರೇಣುಕಮ್ಮ, ಶ್ವೇತಾ ಕುಮಾರಿ, ನಸೀಬ್ ಹುನ್ನೀಸಾ, ಓಂ ಶಕ್ತಿ ಮಂಜುನಾಥ, ಮಮತಾ, ಲಲಿತಾ, ವೀಣಾ, ಲಲಿತಮ್ಮ, ಚಂದ್ರ ಕಲಾ, ಶಿವಕುಮಾರ್, ಕಲಾವತಿ ಮೂರ್ತಿ ಕುಮಾರ್, ಹಾಗೂ ಮತ್ತಿತರರು ಹಾಜರಿದ್ದರು.