ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.20: ಕೊಪ್ಪಳ ನಗರಸಭೆ ಮಾಜಿ ಸದಸ್ಯ. ಪ್ರಶಾಂತ ರಾಯ್ಕರ್ ಅವರ ಸೊಸೆ ಸ್ವಪ್ನಾ ಅಕ್ಷಯ್ ರಾಯ್ಕರ್(31) ನಿನ್ನೆ ಜೂನ್ 19 ರಂದು ಕಾರವಾರದ ಗೋಪಶಿಟ್ಟಾದಲ್ಲಿ ನಿಧನಹೊಂದಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಪದವೀಧರೆಯಾಗಿರುವ ಸ್ವಪ್ನಾ ಅವರು ತಮ್ಮ ತಂದೆ ಹಾಗೂ ಕುಟುಂಬದೊಂದಿಗೆ ಕಾರವಾರ ಬಳಿಯ ಕಾಮಾಕ್ಷಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು,ತಂದೆಯವರಿಗೆ ಪಾರ್ಶ್ವವಾಯು ಚುಚ್ಚುಮದ್ದು ಕೊಡಿಸಲು ಗೋಪಶಿಟ್ಟಾಕ್ಕೆ ತೆರಳಿದ್ದರು.ಆರೋಗ್ಯವಾಗಿದ್ದ ಸ್ವಪ್ನಾ ಕೂಡ ಬೆನ್ನುನೋವಿಗೆಂದು ಚುಚ್ಚುಮದ್ದು ಪಡೆದ ಕೆಲವೇ ಕ್ಷಣದಲ್ಲಿ ಕೊನೆಯುಸಿರೆಳೆದರು.
ಮೂರು ವರ್ಷದ ಪುತ್ರ,ಪತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಸ್ವಪ್ನಾ ಅಗಲಿದ್ದಾರೆ.
ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಇಂದು ಜೂನ್ 20 ರಂದು ಸಂಜೆ ಕೊಪ್ಪಳದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.