ಸುದ್ದಿಮೂಲ ವಾರ್ತೆ ಮಸ್ಕಿ, ಜ.12:
ಆಧ್ಯಾಾತ್ಮಿಿಕ ಚೇತನ, ವೀರ ಸನ್ಯಾಾಸಿ ವಿವೇಕಾನಂದರ ತತ್ವಾಾದರ್ಶ ಮೈಗೂಡಿಸಿಕೊಂಡು, ವಿವೇಕದ ನಡೆಯಲ್ಲಿ ನಡೆಯುವ ಮೂಲಕ ವಿದ್ಯಾಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವೀರೇಶ ಹಿರೇಮಠ ಹೇಳಿದರು.
ಲಯನ್ಸ್ ಕ್ಲಬ್ ಮಸ್ಕಿಿ ಮತ್ತು ಹೆಡ್ ಹೆಲ್ಡ್ ಹೈ ೌಂಡೇಶನ್ ಮಸ್ಕಿಿ ಮತ್ತು ಹೈಟೆಕ್ ಕಂಪ್ಯೂೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿಿ ಸಹಯೋಗದಲ್ಲಿ ಗಚ್ಚಿಿನಮಠದ ಸಭಾಭವನದಲ್ಲಿ ಸೋಮವಾರ ಸ್ವಾಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಮನಸ್ಸುಗಳನ್ನು ಬಡಿದೆಚ್ಚರಿಸಿ ಜಾಗೃತಿಗೊಳಿಸಿದ ವಿವೇಕಾನಂದರು ಅಗಾಧವಾದ ಸಾಧನೆ ಮಾಡಿ ವಿವೇಕ ಪ್ರಭೆಯಾಗಿ ದೇಶಕ್ಕೆೆ ಮುಂಬೆಳಕು ನೀಡಿದವರು ಎಂದರು. ಯುವ ಶಕ್ತಿಿಯ ಬಗ್ಗೆೆ ಅಪಾರ ನಂಬಿಕೆ ಇದ್ದ ವಿವೇಕಾನಂದರು ಯುವ ಜನರನ್ನು ಅನಗತ್ಯವಾಗಿ ಟೀಕಿಸದೆ ಅವರನ್ನು ಪ್ರೋೋತ್ಸಾಾಹಿಸಿದರು. ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜತೆಗೆ ನಿರ್ಭೀತ ನಡೆ ಬೆಳೆಸಿಕೊಂಡರೆ ನೀವು ಏನನ್ನಾಾದರೂ ಸಾಧಿಸಬಲ್ಲಿರಿ ಎಂದು ಯುವಜನರನ್ನು ಹುರಿದುಂಬಿಸುತ್ತಿಿದ್ದರು ಎಂದು ತಿಳಿಸಿದರು. ’ಏಳಿ, ಎದ್ದೇಳಿ, ಎಚ್ಚರಗೊಳ್ಳಿಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸ್ವಾಾಮಿ ವಿವೇಕಾನಂದರ ಕರೆ ಇಂದಿಗೂ ಅನುರಣಿಸುತ್ತಿಿದೆ. ದೇಶ ನಿಷ್ಠೆೆಯ, ದೇಶ ಭಕ್ತಿಿ ವಿವೇಕಾನಂದರಿಗೆ ಕೇವಲ ಸಿದ್ಧಾಾಂತವಾಗಿರಲಿಲ್ಲ. ಮಾನವ ಧರ್ಮದ ಸನ್ಮಾಾರ್ಗವಾಗಿತ್ತು. ಆಧ್ಯಾಾತ್ಮಿಿಕ ಹಾದಿಯಲ್ಲಿ ಉದಾತ್ತ ಚಿಂತನೆ, ಸರಳ ಬದುಕಿಗೆ ವಿವೇಕಾನಂದರು ಬಹುದೊಡ್ಡ ನಿದರ್ಶನವಾಗಿದ್ದರು. ಹೀಗಾಗಿ ಅವರನ್ನು ರಾಷ್ಟ್ರೀಯ ಸಂತ ಎಂದೇ ಗುರುತಿಸಲಾಗುತ್ತದೆ ಎಂದರು.
ಷ. ಬ್ರ. ಪರಮಪೂಜ್ಯ ಶ್ರೀ ವರ ರುದ್ರಮುನಿ ಶಿವಾಚಾರ್ಯ ಸ್ವಾಾಮಿಗಳು ಗಚ್ಚಿಿನ ಹಿರೇಮಠ, ವೀರೇಶ ಹಿರೇಮಠ, ಅಧ್ಯಕ್ಷರು ಲಯನ್ಸ್ ಕ್ಲಬ್, ಗಂಗಾಧರ ಶಕ್ತಿಿನಗರ, ಹೆಡ್ ಹೆಲ್ಡ್ ಹೈ ೌಂಡೇಶನ್ ತರಬೇತುದಾರರು ಮತ್ತು ಯಮನೂರ ಕನ್ನಾಾರಿ ವ್ಯವಸ್ಥಾಾಪಕರು, ಹೈಟೆಕ್ ಕಂಪ್ಯೂೂಟರ್ ಶಿಕ್ಷಣ ತರಬೇತಿ ಕೇಂದ್ರ, ಸಹನಾ ಮಾನ್ವಿಿ ತರಬೇತಿದಾರರು ಮತ್ತು ರಂಗಯ್ಯ ಸೃಷ್ಟಿಿ. ಬಿ. ಎಲ್. ಶೆಟ್ಟಿಿ. ಸಿದ್ದಲಿಂಗಯ್ಯ ಸೊಪ್ಪಿಿಮಠ. ನಾಗರಾಜ ಕಂಬಾರ. ಡಾ.ಬಿ.ಎಚ್ ದಿವಟರ್. ಶಿವರಾಜ್ ಇತ್ಲಿಿ. ಸೋಮಶೇಖರ್. ವಿಜಯಲಕ್ಷ್ಮಿಿ ಹಿರೇಮಠ. ನಿವೇದಿತ ಬುಳ್ಳ. ವಿನೋದ ಸಿಂಧನೂರ, ಚಂದ್ರಶೇಖರ್ ಹಾಗೂ ವಿದ್ಯಾಾರ್ಥಿಗಳು ಪಾಲ್ಗೊೊಂಡಿದ್ದರು.
ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

