ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.30:ಲಿಂಗಾಯತ್ ಸಮಾಜದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದಾವಣಗೆರೆಯ ಶಾಮನೂರ ಶಿವಶಂಕರಪ್ಪರ ಹೇಳಿಕೆಯನ್ನು ಪಂಚಮಸಾಲಿ ಸಮಾಜದ ಸ್ವಾಮೀಜಿ ಬೆಂಬಲಿಸಿದರು.
ಇಂದು ಹಿರೇವಂಕಲಕುಂಟಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಆಗ್ರಹಿಸಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲಿಂಗಾಯತರ ಧ್ವನಿಯಾಗಿ ಶಾಮನೂರು ಮಾತನಾಡಿದ್ದಾರೆ. ಪಂಚಮಸಾಲಿಯ ಮೂರು ಎಐಎಸ್ ಹಾಗು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.ಇದನ್ನು ಸರಕಾರ ಸರಿಪಡಿಸಬೇಕು ಎಂದರು
2024 ರ ಚುನಾವಣೆಯ ಘೋಷಣೆಯ ಮುನ್ನ ಮೀಸಲಾತಿ ನೀಡಬೇಕು. ಎರಡು ಪಕ್ಷಗಳು ಚುನಾವಣೆ 22-24 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ ಆದರೆ ಬಲಾಡ್ಯವಾಗಿರುವ ಪಂಚಮಸಾಲಿ ಸಮಾಜವನ್ನು ನಿರ್ಲಕ್ಷಿಸಬಾರದು ಎಂದರು.
ಮೀಸಲಾತಿ ನೀಡದಿದ್ದರೆ ಮತ್ತೆ ಉಗ್ರ ಹೋರಾಟ ಮಾಡಲಾಗುವುದು.ಸಿದ್ದರಾಮಯ್ಯ ಕುರಬ ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ಶಿಫಾರಸ್ಸು ಮಾಡಿದ್ದಾರೆ. ಇದೇ ವೇಳೆ ಕುಂಚಟಿಗ ಸಮಾಜಕ್ಕೆ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿದ್ದಾರೆ.ಇದೇ ರೀತಿ ಪಂಚಮಸಾಲಿ ಗಳಿಗೆ 2A ಮೀಸಲಾತಿ.ಲಿಂಗಾಯತ ರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪಂಚಮಸಾಲಿ ಸಮಾಜವು ಕಾರಣ.ಈ ಸಮಾಜದ ಋಣ ತೀರಿಸಬೇಕು.ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಈಗಾಗಲೇ ಮೂರು ಕಡೆ ಮಾಡಲಾಗಿದೆ
ಮೂರು ಕಡೆ ಉಸ್ತುವಾರಿ ಸಚಿವರು ಆಗಮಿಸಿದ್ದರು
ಆದರೆ ಕೊಪ್ಪಳದಲ್ಲಿ ಶಿವರಾಜ ತಂಗಡಗಿ ಬಾರದ ಹಿನ್ನೆಲೆ
ಸಮಾಜದವರಿಗೆ ಅಸಮಾದಾನವಿದೆ
ಆದರೆ ಅವರು ಸಮಾಜದ ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು
ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇದೇ ವೇಳೆ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾಗಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಗೊಂಡು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿದರು.
ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ. ಈ ಮೊದಲು ಚಿಕ್ಕವಂಕಲಕುಂಟಾ ಗ್ರಾಮದಿಂದ NH 50ರವರಿಗೆ ಪಾದಯಾತ್ರೆ ಮಾಡಿದಾರಿಯ ಉದ್ದಕ್ಕೂ ಬೇಕೇ ಬೇಕು ಮೀಸಲಾತಿ ಬೇಕೆಂದು ಆಗ್ರಹಿಸಿದರು.ಸ್ವಾಮೀಜಿಯ ಇಷ್ಟ ಲಿಂಗ ಪೂಜೆಗೆ ಸಂಸದರು ಮಾಜಿ ಹಾಲಿ ಶಾಸಕರು ಗೈರು ಆಗಿದ್ದರು.ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಸಮುದಾಯ ಮುಖಂಡರ ಅಸಮಾಧಾನ ಗೊಂಡು ಜನಪ್ರತಿನಿಧಿಗಳ ವಿರುದ್ದ ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಸಮಾಜದ ಬಸವಲಿಂಗಪ್ಪ ಬೂತೆ, ಶಿವರಾಮಗೌಡ, ಬಸನಗೌಡ ತೊಂಡಿಹಾಳ. ರುದ್ರಗೌಡ, ಮಂಜುಳಾ ಕರಡಿ ಸೇರಿ ಹಲವರು ಇದ್ದರು.