ದಯಾಶಂಕರ ಮೈಲಿ ಮೈಸೂರು, ನ.28:
ಈಗಿನ ರಾಜ್ಯ ರಾಜಕಾರಣದ ಪರಿಸ್ಥಿಿತಿಯಲ್ಲಿ ಅಧಿಕಾರ ಹಂಚಿಕೆ ವಿಚಾರ ಬಾಳೆಹಣ್ಣನ್ನು ಸುಲಿದು ತಿನ್ನುವಷ್ಟು ಸುಲಭವಾಗಿಲ್ಲ. ರಾಜಕಾರಣಕ್ಕೆೆ ಸೀಮಿತಗೊಂಡಿದ್ದ ಈ ಸಂಗತಿ ಈಗ ಜಾತಿಯ ಲೇಪನ ಪಡೆದುಕೊಳ್ಳುತ್ತಿಿದೆ. ತಮ್ಮ ನಾಯಕರನ್ನು ಮುಂದಿನ ಮುಖ್ಯಮಂತ್ರಿಿ ಮಾಡಬೇಕೆಂತಲೂ, ಮತ್ತೊೊಬ್ಬರು ತಮ್ಮವರನ್ನೇ ಮುಂದುವರಿಸಬೇಕೆಂದು ಬಹಿರಂಗವಾಗಿಯೇ ವಾದಕ್ಕೆೆ ಇಳಿದಿದ್ದಾರೆ.
ಈ ಮಧ್ಯೆೆ ಎರಡು ವರ್ಗಗಳ ಸ್ವಾಾಮೀಜಿಗಳು ಇದೇ ವಿಷಯವನ್ನು ಪ್ರಸ್ತಾಾಪಿಸುತ್ತಿಿದ್ದಾರೆ. ಜಾತಿ ಸಂಘಟನೆಗಳು ಮಧ್ಯ ಪ್ರವೇಶ ಮಾಡಿವೆ. ಇಳಿಸುವ- ಉಳಿಸುವ ವಿಚಾರದಲ್ಲಿ ಪ್ರತಿಭಟನೆ, ಪೂಜೆ , ಪುನಸ್ಕಾಾರಗಳು ಆರಂಭಗೊಂಡಿವೆ.
ಹೀಗೆ ಅಧಿಕಾರ ಹಸ್ತಾಾಂತರ ವಿಚಾರ ಜಾತಿಯ ಸ್ವರೂಪವನ್ನು ಪಡೆದುಕೊಳ್ಳಲಾಂಭಿಸಿದೆ. ಇದು ಜಾತಿ, ಜಾತಿಗಳ ನಡುವಿನ ಸಂಘರ್ಷಕ್ಕೆೆ ಎಡೆ ಮಾಡಿಕೊಡಬಹುದು. ಇದು ಉತ್ತಮ ಬೆಳವಣಿಗೆಯೇ ಅಲ್ಲಎಂಬುದಂತೂ ಸತ್ಯ.
ಈ ಹಿನ್ನೆೆಲೆಯಲ್ಲಿ ಕಾಂಗ್ರೆೆಸ್ ಹೈಕಮಾಂಡ್ ತ್ವರಿತವಾಗಿ ಸಮಸ್ಯೆೆಯ ರೂಪ ಪಡೆದುಕೊಳ್ಳುತ್ತಿಿರುವ ಅಧಿಕಾರ ಹಸ್ತಾಾಂತರ ವಿಚಾರ ಬಗೆಹರಿಸಿಕೊಳ್ಳಬೇಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ಗಾಂಧಿ ಅವರು ವಿವೇಕ ಮತ್ತು ಪ್ರಬುದ್ಧತೆಯಿಂದ ಅಧಿಕಾರ ಹಂಚಿಕೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಸುಖಾಂತ್ಯ ಕಾಣುವುದಿಲ್ಲ. ಆಗ ಆನೇಕ ಕಷ್ಟ, ನಷ್ಟಗಳನ್ನು ಒಟ್ಟಿಿಗೆ ಎದುರಿಸಬೇಕಾಗುತ್ತದೆ.
ಸಿದ್ದರಾಮಯ್ಯ ಅವರ ಮನವೊಲಿಸಿದರೆ ಮಾತ್ರ :
ರಾಜಕೀಯ ವಲಯದಲ್ಲಿ ಹೇಳುವಂತೆ ಎರಡೂವರೆ- ಎರಡೂವರೆ ವರ್ಷಗಳು ಅಧಿಕಾರ ಹಂಚಿಕೆ ಆಗಬೇಕು ಎಂಬ ಒಪ್ಪಂದ ನಾಲ್ಕು ಗೋಡೆಗಳ ಮಧ್ಯೆೆ ನಾಲ್ವರು ಮುಖಂಡರ ನಡುವೆ ಒಂದು ವೇಳೆ ಆಗಿದ್ದಲ್ಲಿ, ಮುಖಂಡರು, ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಮನವೊಲಿಸಿದ ಮೇಲೆಯೇ ನಿರ್ಧಾರ ಪ್ರಕಟಿಸಬೇಕಾಗುತ್ತದೆ.
ಇಲ್ಲದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆೆಸ್ ತೀವ್ರ ಬಿಕ್ಕಟ್ಟು, ಇಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬುದು ಸುಳ್ಳಲ್ಲ. ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ಅಧಿಕಾರ ಪಡೆದರೆ ಆಡಳಿತ ನಡೆಸುವುದು ಸುಲಭವಾಗದು ಎಂದು ವಾಸ್ತವ ಸಂಗತಿ ಗೊತ್ತಿಿರುವ ಕಾರಣದಿಂದಲೆ ಸಾಮಾನ್ಯವಾಗಿ ಕೋಪ, ಆವೇಶದಿಂದ ಮಾತನಾಡುವ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರ ಈಗ ಹಿಮಾಲಯದೆತ್ತರದ ತಾಳ್ಮೆೆ ಮತ್ತು ಸಂಯಮದಿಂದ ವರ್ತಿಸುತ್ತಿಿದ್ದಾರೆ ಎಂದು ಹೇಳುತ್ತಿಿರುವುದು ಉಂಟು.
ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂಬುದನ್ನು ಪರೋಕ್ಷವಾಗಿ ಡಿಕೆಶಿ ಹೇಳುತ್ತಿಿದ್ದಾರೆ ಹೊರತು, ಅದರ ಸತ್ಯಾಾಸತ್ಯತೆ ಬಗ್ಗೆೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಅವರು ಏಕೆ, ಯಾತಕ್ಕಾಾಗಿ ಮಾತನಾಡುತ್ತಿಿಲ್ಲ ಎಂಬುದು ಯಕ್ಷಪ್ರಶ್ತೆೆಯಾಗಿ ರಾಜಕೀಯ ವಲಯವನ್ನು ಕಾಡುತ್ತಿಿದೆ.
ಅಧಿಕಾರ ಹಸ್ತಾಾಂತರ ಎಂಬುದು ಸಹಜ ಆಗಮನ ಮತ್ತು ಸಹಜ ನಿರ್ಗಮನ ಆಗಿರಬೇಕು. ಇದಕ್ಕಾಾಗಿಯೆ ಕಾಂಗ್ರೆೆಸ್ ಇನ್ನಿಿಲ್ಲದ ಶ್ರಮ ಹಾಕುತ್ತಿಿದೆ ನಿಜ. ಇಲ್ಲಿ ಬಹಳಷ್ಷು ಅನುಭವ ಮತ್ತು ಪ್ರಬುದ್ಧತೆ ಬೇಕು ಎಂಬುದರಲ್ಲಿ ಮರು ಮಾತಿಲ್ಲ. ರಾಹುಲ್ಗಾಂಧಿ ಅವರು ಈ ನೆಲದ ನೆಟಿವಿಟಿ (ಸ್ಥಳೀಯ ನಡೆ, ನುಡಿ ಸಂಸ್ಕೃತಿ) ಯನ್ನು ಒಗ್ಗಿಿಸಿಕೊಳ್ಳುತ್ತಿಿಲ್ಲ.
ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದೊಳಗೆ ಮತ್ತು ಹೊರಗೆ ಇಂತಹ ಇಕ್ಕಟ್ಟು, ಬಿಕ್ಕಟ್ಟುಗಳನ್ನು ಬಹಳಷ್ಷು ನೋಡಿದ್ದಾರೆ. ಎದುರಿಸಿದ್ದಾರೆ ಅವರು ಪರಿಸ್ಥಿಿತಿಯ ಒಳ-ಹೊರನೋಟವನ್ನು ಚೆನ್ನಾಾಗಿ ಅರಿಯಬಲ್ಲವರಾಗಿದ್ದಾರೆ. ಈ ಹಿನ್ನೆೆಲೆ ಖರ್ಗೆ ಅವರು ರಾಹುಲ್ ಅವರನ್ನು ತಮ್ಮ ನಡೆಗೆ ಸ್ಪಂದಿಸುವ ರೀತಿಯಲ್ಲಿ ಕರೆದೊಯ್ಯಬೇಕಿದೆ.
ಅವರವರ ಭಾವಕ್ಕೆೆ ಭಕುತಿಗೆ
ಅವರವರ ಭಾವಕ್ಕೆೆ ಭಕುತಿಗೆ ಎಂಬಂತೆ ಅಧಿಕಾರದಲ್ಲಿ ಮುಂಡುವರಿಯಬೇಕು ಮತ್ತು ಅಧಿಕಾರ ಪಡೆಯಬೇಕು ಎಂಬ ಬೇಗುದಿಯಲ್ಲಿ ಇರುವ ನಾಯಕರ ಬೆಂಬಲಿಗರು, ತಮ್ಮದೇ ಧಾಟಿಯಲ್ಲಿ ತಮ್ಮ ನಾಯಕರ ನಡೆ-ನುಡಿಯನ್ನು ಸಮರ್ಥನೆ ಮಾಡಿಕೊಳ್ಳುವುದು ನಿಂತಿಲ್ಲ. ಬದಲಿಗೆ ಹೆಚ್ಚಾಾಗುತ್ತಿಿದೆ. ಈ ಕಾರಣದಿಂದಲೇ ಅಧಿಕಾರ ಹಂಚಿಕೆ ವಿಚಾರ ಎಲ್ಲಡೆ ಚರ್ಚೆಗೆ, ಟೀಕೆ, ಟಿಪ್ಪಣೆಗೆ ಅನಾವಶ್ಕಕವಾಗಿ ದಾರಿ ಮಾಡಿಕೊಡುತ್ತಿಿವೆ ಎಂಬುದು ನಿಜವೇ.
ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರತು :
ಬಹಳ ಹಿಂದಿನಿಂದಲೂ ರಾಜಕಾರಣದಲ್ಲಿ ಧರ್ಮ ಇದ್ದರೆ ಒಳಿತು. ಆದರೆ ಧರ್ಮದಲ್ಲಿ ರಾಜಕಾರಣ ಬೆರೆಯಬಾರದು, ಬೆರಸಲೂ ಬಾರದು ಎಂದು ಹೇಳುವುದು ಉಂಟು. ಆದರೆ, ಈ ಮೇರು ತತ್ವ ಹೇಳಿಕೆ, ಭಾಷಣಗಳಲ್ಲಿ ಇದೇ ಹೊರತು ಕೃತಿಯಲ್ಲಿ ಇಲ್ಲವೇ ಇಲ್ಲ ಎಂಬುದಕ್ಕೆೆ ಅಧಿಕಾರ ಹಂಚಿಕೆ ವಿಷಯದಲ್ಲಿ ಈಗ ಕೆಲ ಮಠಾಧೀಶರು ಪ್ರವೇಶ ಮಾಡಿರುವುದನ್ನು ಉಲ್ಲೇಖ ಮಾಡಲಾಗುತ್ತಿಿದೆ.
ಶುಭ ಸೋಮವಾರ ಯಾರ ಪಾಲಿಗೆ ಶುಭವಾಗಲಿದೆ?
ಪಕ್ಷದ ಮುಖಂಡರು ದೆಹಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿಕೊಂಡು ಒಂದು ಸುತ್ತು ಮಾತಕತೆ ನಡೆಸುವರು. ತದನಂತರ ಡಿಸೆಂಬರ್ 1 (ಸೋಮವಾರ) ರಂದು ಅಂತಿಮವಾಗಿ ತಮ್ಮ ನಿರ್ಧಾರ ಘೋಷಣೆ ಮಾಡಲಿದ್ದಾರೆ ಎಂದು ತಿಳಿದಿದೆ. ಈ ಘೋಷಣೆ ಯಾರಿಗೆ ಶುಭ ಸೋಮವಾರ ಆಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.

