ಸುದ್ದಿಮೂಲ ವಾರ್ತೆ
ಬೇತಮಂಗಲ, ಆ. 9 : ಕೆಜಿಎಫ್ ತಾಲ್ಲೂಕಿನ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸ್ವಣ್ಣಮ್ಮ ರಮೇಶ್ ಅದ್ಯಕ್ಷ ಸ್ಥನಕ್ಕೆ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಸುಧಾರಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಸಕಿ ರೂಪಕಲಾ, ಪಟ್ಟಣದ ಸಮೀಪದ ಹುಲ್ಕೂರು ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ. ಮುಂದಿನ ದಿನಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರಾಜಕೀಯ ರಹಿತ ಆಡಳಿತ ಕೊಟ್ಟು ಗ್ರಾಮಾಭಿವೃದ್ದಿ ಕಡೆ ಗಮನ ಹರಿಸಬೇಕು ಮತ್ತು ರೈತರ ಪರ ನಿಂತು ಯಾವುದೇ ತೊಂದರೆಯಾಗದಂತೆ ಕೆಲಸ ಮಾಡಿ ಗ್ರಾಮ ಪಂಚಾಯಿತಿಗೆ ಉತ್ತಮ ಹೆಸರು ತರಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸೊಸೈಟಿ ಅದ್ಯಕ್ಷ ಕಾರಿ ಪ್ರಸನ್ನ , ನಂಜುಂಡಗೌಡ, ಪಾಪಣ್ಣ, ಕೃಷ್ಣರೆಡ್ಡಿ, ವೆಂಕಟ್ರಾಮ, ಸೇರಿದಂತೆ ಗ್ರಾಪಂ.ಯ ಸದಸ್ಯರು ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.