ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಯಾವುದೇ ಪಠ್ಯಕ್ರಮ ಪರಿಷ್ಕರಣೆಗೆ ಒಳಪಡಿಸಬೇಕಾದರೆ ಸಂಪೂರ್ಣವಾಗಿ ಚರ್ಚಿಸಬೇಕಾಗುತ್ತದೆ ಎಂದು ಇಲ್ಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯ ಕುಲಸಚಿವ (ಆಡಳಿತ) ಡಾ. ಎ ಚೆನ್ನಪ್ಪ ಅವರು ಅಭಿಪ್ರಾಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯ ರಾಯಚೂರು ಹಾಗೂ ಶಿಕ್ಷಣ ಮಂಡಳಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಇವರುಗಳ ಸಂಯುಕ್ತಶ್ರಯದಲ್ಲಿ ಬಿ. ಇಡಿ ಪಠ್ಯಕ್ರಮ ಪರಿಷ್ಕರಣೆಯ 2 ದಿನದ ಕಾರ್ಯಾಗಾರ ಉದ್ಘಾಾಟಿಸಿ ಅವರು ಮಾತನಾಡಿದರು.
ಯಾವುದೇ ಪಠ್ಯಕ್ರಮ ಪರಿಷ್ಕರಣೆಗೆ ಒಳಪಡಿಸಬೇಕಾದರೆ, ಅದನ್ನು ಸಂಪೂರ್ಣವಾಗಿ ಚರ್ಚಿಸಬೇಕಾಗುತ್ತದೆ. ಎಷ್ಟೇ ಕೆಡವಿದರೂ ನಾವು ಮರು ಕಟ್ಟುತ್ತೇವೆ ಎಂಬ ಮನೋ ಭಾವನೆ ಶಿಕ್ಷಕರಲ್ಲಿದೆ. ಈ ಹಿಂದೆ ಶಿಕ್ಷಣ ವ್ಯವಸ್ಥೆೆಯಲ್ಲಿ ಶಿಕ್ಷಕರಿಗೆ ತರಬೇತಿ ಇರಲಿಲ್ಲ. ಯಾವುದೇ ರೀತಿಯ ಲಾಪೇಕ್ಷ ಇಲ್ಲದೆ ಕಡಿಮೆ ಸಂಬಳದಲ್ಲಿ ಉತ್ತಮ ಶಿಕ್ಷಣ ನೀಡಿದ ಶಿಕ್ಷಕರು ಇದ್ದಾರೆ. ಎಲ್ಲಾ ವಿಷಯಗಳನ್ನು ಒಬ್ಬ ಶಿಕ್ಷಕರು ಬೋಧಿಸುತ್ತಿಿದ್ದರು. ನಂತರ ಇಂಟರ್ನ್ನಿಪ್, ಟಿ.ಸಿಎಚ್, ಬಿ.ಇಡಿ, ಹೀಗೆ ಅಗತ್ಯತೆಗೆ ತಕ್ಕಂತೆ ಶಿಕ್ಷಕರು ವಿದ್ಯಾಾರ್ಹತೆಯು ಬದಲಾವಣೆಯಾಗುತ್ತಾಾ ಬಂತು ಎಂದರು.
ಸಮಾಜದ ಅಗತ್ಯತೆ, ಬದಲಾವಣೆಗೆ ತಕ್ಕಂತೆ ಪಠ್ಯಕ್ರಮ ಬದಲಾವಣೆ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕುಲ ಸಚಿವ (ಮೌಲ್ಯಮಾಪನ) ಪ್ರೊೊ. ಜ್ಯೋೋತಿ ದಮ್ಮ ಪ್ರಕಾಶ್ ಮಾತನಾಡಿ, ಪಠ್ಯಕ್ರಮ ಪರಿಷ್ಕರಣೆ ಉತ್ತಮ ಕಾರ್ಯವಾಗಿದೆ. ಶಿಕ್ಷಕರು ವೃತ್ತಿಿಯನ್ನು ಪ್ರೀೀತಿಸಿ ಕ್ರಿಿಯಾತ್ಮಕವಾಗಿ ಮನೋಜ್ಞವಾಗಿ, ಹೃದಯವಂತಕೆಯಿಂದ, ಬೋಧಿಸಬೇಕೆಂದ ಅವರು ವಿದ್ಯಾಾರ್ಥಿಗಳ ಕನಸು ಈಡೇರುವುದೇ ಶಿಕ್ಷಕರ ನಿಜವಾದ ಕನಸು ನನಸಾದಂತೆ ಎಂದು ಹೇಳಿದರು.
ಸಿಂಡಿಕೇಟ್ ಮಾಜಿ ಸದಸ್ಯ ಡಾ. ಇಕ್ಬಾಾಲ್ ಶೇಕ್ ಮಾತನಾಡಿ, ನೀನು ಕೇಳುತ್ತಾಾ, ಹೋಗು ಮತ್ತು ಭವಿಷ್ಯದಲ್ಲಿ ನೀನು ಜಾಣನಾಗುವೆ ಎಂಬ ಅಬ್ರಹಾಮ್ ಲಿಂಕನ್ ಅವರ ಮಾತನ್ನು ನೆನಪಿಸಿದರು.
ಸಮಾರಂಭದ ಅಧ್ಯಕ್ಷತೆ ನವೋದಯ ಶಿಕ್ಷಣ ಸಂಸ್ಥೆೆ ಪ್ರಾಾಚಾರ್ಯ ಡಾ.ಉಮಾಕಾಂತ. ಜಿ. ದೇವರಮನಿ ವಹಿಸಿ ಮಾತನಾಡಿ, ಕ್ವಾಾಲಿಟಿ ಕಾಲೇಜುಗಳಿಗೆ ವಿದ್ಯಾಾರ್ಥಿಗಳ ಸಂಖ್ಯೆೆ ಕಡಿಮೆ ಇದೆ. ವಿದ್ಯಾಾರ್ಥಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಾಲೇಜುಗಳಲ್ಲಿ ವಿದ್ಯಾಾರ್ಥಿಗಳ ಸಂಖ್ಯೆೆ ಹೆಚ್ಚಾಾಗಿದೆ. ಎಂದು ಖೇದ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ವಿದ್ಯಾಾ ವಿಷಯತ್ ಪರಿಷತ್ ನ ಡಾ. ಸಿದ್ದಪ್ಪಾಾ ಜೇರ್ಗಾ ಉಪಸ್ಥಿಿತರಿದ್ದರು. ನಂದಿನಿ ಶಿಕ್ಷಣ ಮಹಾವಿದ್ಯಾಾಲಯದ ಸಹಾಯಕ ಪ್ರಾಾಧ್ಯಾಾಪಕರಾದ ನರಸಿಂಹ ಹೊಸೂರು ಪ್ರಾಾರ್ಥಿಸಿದರು. ಏಇಖಓ ಚಿ.ಛಿ ಕಾಲೇಜಿನ ಡಾ. ಸಿದ್ದರಾಮಯ್ಯ ಹಿರೇಮಠ್ ವಂದನಾರ್ಪಣೆ ಮಾಡಿದರು.
ಸಮಾರಂಭವನ್ನು ನಂದಿನಿ ಉಪಪ್ರಾಾಚಾರ್ಯ ಡಾ. ಬಿ. ವಿಜಯ ರಾಜೇಂದ್ರ ನಡೆಸಿಕೊಟ್ಟರು.
ಸಮಾರಂಭದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಬಿ.ಎಡ್ ಕಾಲೇಜಿನ ಪ್ರಾಾಚಾರ್ಯರು ಹಾಗೂ ಸಹಾಯಕ ಪ್ರಾಾಧ್ಯಾಾಪಕರು ಪಾಲ್ಗೊೊಂಡಿದ್ದರು.
‘ಬದಲಾದ ಕಾಲಘಟ್ಟಕ್ಕನುಗುಣವಾಗಿ ಪಠ್ಯಕ್ರಮವೂ ಪರಿಷ್ಕರಣೆ ಆಗಬೇಕು’

