ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ನಗರದ ಟ್ಯಾಾಗೋರ ಸ್ಮಾಾರಕ ಶಿಕ್ಷಣ ಸಂಸ್ಥೆೆಯ ಹಳೆಯ ವಿದ್ಯಾಾರ್ಥಿಗಳಿಂದ ಡಿ.14ರಂದು ಮಹಾತ್ಮಗಾಂಧಿ ಜಿಲ್ಲಾಾ ಕ್ರೀಡಾಂಗಣದಲ್ಲಿ ಟ್ಯಾಾಗೋರ ಉತ್ಸವ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾಾರ್ಥಿಗಳಾದ ಸಾಯಿಕಿರಣ್ ಆದೋನಿ, ವೀರೇಂದ್ರ ಜಲ್ದಾಾರ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, 1975ರಿಂದ 2025ರವರೆಗೆ ಟ್ಯಾಾಗೋರ ಶಿಕ್ಷಣ ಸಂಸ್ಥೆೆಯ ಶಾಲೆ, ಕಾಲೇಜುಗಳಲ್ಲಿ ವಿದ್ಯಾಾಭ್ಯಾಾಸ ಮಾಡಿದ ಸಾವಿರಾರು ಸಂಖ್ಯೆೆಯ ಹಳೆಯ ವಿದ್ಯಾಾರ್ಥಿಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಧನೆ ತೋರಿದ ಹಳೆಯ ವಿದ್ಯಾಾರ್ಥಿಗಳ ಸನ್ಮಾಾನಿಸಲಾಗುವುದು ಎಂದರು.
ಈ ಕಾರ್ಯಕ್ರಮ ಸಂಜೆ 4ಕ್ಕೆೆ ಆರಂಭವಾಗಲಿದ್ದು ಗಾಯಕಿ ಶಿವಾನಿ, ಸ್ಯಾಾಕೋ್ಸೆನ್ನ್ನು ದುಬೈ ಮೂಲದ ಸಂಗೀತಗಾರ ಅಲ್ಫೆೆನ್ಸಿಿಸ್ ಸೇರಿದಂತೆ ಅನೇಕ ಸಂಗೀತಗಾರರು, ವಿದ್ಯಾಾರ್ಥಿಗಳು ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾಾರೆ. ರಾತ್ರಿಿ 8ರಿಂದ 10ರವರೆಗೆ ವಿಜೆ ಇಂಟರ್ನ್ಯಾಾಶನಲ್ ವತಿಯಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರು ನೃತ್ಯಘಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿಸಲಿದ್ದಾಾರೆ ಎಂದು ವಿವರಿಸಿದರು.
ಮುಂಬರುವ ದಿನಗಳಲ್ಲಿ ಟ್ಯಾಾಗೋರ ಶಿಕ್ಷಣ ಸಂಸ್ಥೆೆಯ ಹಳೆಯ ವಿದ್ಯಾಾರ್ಥಿಗಳು ಒಂದು ಟ್ರಸ್ಟ್ ರಚಿಸಿಕೊಂಡು ಸಂಸ್ಥೆೆಯ ಏಳ್ಗೆೆಯ ಜೊತೆ ಬಡ ಮಕ್ಕಳ ವಿದ್ಯಾಾಭ್ಯಾಾಸ ಮತ್ತಿಿತರ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವಾಗಲು ಆಲೋಚಿಸುತ್ತಿಿದ್ದೇವೆ. ಹಳೆಯ ವಿದ್ಯಾಾರ್ಥಿಗಳ ಸಂಘ ಕಟ್ಟಲು ಸಭೆ ಸೇರಿ ನಿರ್ಧರಿಸುತ್ತೇವೆ. ಟ್ಯಾಾಗೋರ ಶಿಕ್ಷಣ ಸಂಸ್ಥೆೆಯಲ್ಲಿ ಅಭ್ಯಾಾಸ ಮಾಡಿದ ಎಲ್ಲರೂ ಈ ಕಾರ್ಯಕ್ರಮಕ್ಕೆೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಿಯಲ್ಲಿ ನಿವೃತ್ತ ಪ್ರಾಾಧ್ಯಾಾಪಕ ಎಚ್.ಎಸ್.ನಾಗೇಂದ್ರನಾಥ್, ಶಿವನಗೌಡ,ಪದ್ಮರಾಜ್, ವಸಂತರಾವ್ ಪತಂಗೆ, ಅಮರೇಶ ಹೂಗಾರ, ನರೇಂದ್ರಘಿ, ಸಲೀಂ ಸೇರಿ ಇತರರಿದ್ದರು.

