ಸುದ್ದಿಮೂಲ ವಾರ್ತೆ ಬೀದರ್, ಡಿ.09:
ಗ್ರಾಾಮೀಣ ಜನರಿಗೆ ಆಸ್ತಿಿಯ ಹಕ್ಕು ಕಲ್ಪಿಿಸುವ ಕೇಂದ್ರ ಸರ್ಕಾರದ ಮಹತ್ವಾಾಕಾಂಕ್ಷೆಯ ಸ್ವಾಾಮಿತ್ವ ಯೋಜನೆ ಸದುಪಯೋಗ ಪಡೆದುಕೊಳ್ಳಿಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ರೇಕುಳಗಿ ಗ್ರಾಾಮದಲ್ಲಿ ಕೇಂದ್ರ ಸರ್ಕಾರದ ಗ್ರಾಾಮೀಣಾಭಿವೃದ್ಧಿಿ ಸಚಿವಾಲಯದ ಒಂದು ಮಹತ್ವಾಾಕಾಂಕ್ಷಿ ಯೋಜನೆಯಾದ ಸ್ವಾಾಮಿತ್ವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಾಮೀಣ ಭಾಗದ ನಿವಾಸಿಗಳಿಗೆ ಅವರ ಮನೆಗಳ ಮಾಲೀಕತ್ವವನ್ನು ನಿರ್ಧರಿಸಲು, ಆಸ್ತಿಿ ಕಾರ್ಡ್ ಅಥವಾ ’ಹಕ್ಕು ಪತ್ರ’ಗಳನ್ನು ಡ್ರೋೋನ್ ತಂತ್ರಜ್ಞಾನ ಬಳಸಿ ನೀಡುವ ಮಹತ್ತರ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಜನರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎನ್ಬಿರೆಡ್ಡಿಿ ಗುರುಜಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಮಗೊಂಡ, ತಾಪಂ ಸಹಾಯಕ ನಿರ್ದೇಶಕ ಸುದೇಶ, ಕಂದಾನ ಇಲಾಖೆ ಅಧಿಕಾರಿ ನಾಗರಾಜ, ಪಿಡಿಓ ವೀರಣ್ಣ, ರೇಕುಳಗಿ ಗ್ರಾಾಪಂ ಅಧ್ಯಕ್ಷೆ ವಿದ್ಯಾಾವತಿ, ಉಪಾಧ್ಯಕ್ಷ ಶಿಲ್ಪಾಾ ಭಕ್ತಕುಮಾರ, ಮನ್ನಾಾಏಖೇಳ್ಳಿಿ ಗ್ರಾಾಪಂ ಅಧ್ಯಕ್ಷ ರಾಜಕುಮಾರ, ಮುಖಂಡರಾದ ಸುರೇಶ ಮಾಶೆಟ್ಟಿಿ, ಸಂಗಪ್ಪಾಾ ಪಾಟೀಲ್, ಬಸವರಾಜ ಬೋರಾಳ, ವೀರಶೆಟ್ಟಿಿ ಮೂಲಗೆ, ವೈಜಿನಾಥ ಹಚ್ಚಿಿ, ಮಹೇಶ ಹಚ್ಚಿಿ, ವಿಠ್ಠಲ, ಪ್ರಕಾಶ, ಕ್ರೀೆಸ್ಟರ್ಪ ಗ್ರಾಾಮಸ್ಥರು ಮತ್ತಿಿತರರು ಉಪಸ್ಥಿಿತರಿದ್ದರು.
ಸ್ವಾಮಿತ್ವ ಯೋಜನೆ ಸದುಪಯೋಗ ಪಡೆದುಕೊಳ್ಳಿ- ಡಾ. ಶೈಲೇಂದ್ರ ಬೆಲ್ದಾಳೆ

