ಸುದ್ದಿಮೂಲವಾರ್ತೆ
ಸಿರವಾರ,ಜೂ.11:ರಾಜ್ಯ ಸರಕಾರದ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ರಾಜ್ಯದ ತುಂಬಾ ಉಚಿತ ಪ್ರಯಾಣದ ಸದುಪಯೋಗ ಪಡಿಸಿಕೊಳ್ಳಿ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ರವಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ, ಸರಕಾರ ನಿಗದಿಪಡಿಸಿದ ಬಸ್ ಗಳಿಗೆ, ಆಧಾರ್ ಚುನಾವಣೆಯ ಗುರುತಿನ ಚೀಟಿ, ತೋರಿಸಿ ನಂತರ ಸರಕಾರದಿಂದ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಶಶಿಕಾಂತ.ಕೆ, ಸಿಡಿಪಿಓ ನಾಗರತ್ನ, ಕಾಂಗ್ರೆಸ್ ಮುಖಂಡರಾದ ಬ್ರಿಜೇಶ್ ಪಾಟೀಲ, ಶಿವಶರಣರ ಸಾಹುಕಾರ್ ಅರಕೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ ಎರಡ್ಡಿ, ನಿರ್ಮಲಾ ಬೆಣ್ಣೆ, ಪ.ಪಂ.ಸದಸ್ಯರಾದ ಹಸೇನ ಅಲಿ, ಹಾಜೀ ಚೌದ್ರಿ, ಮೌಲಸಾಬ್, ಬಸವರಾಜ ನಾಯಕ, ಎಂ.ಶ್ರೀನಿವಾಸ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.