ಸುದ್ದಿಮೂಲ ವಾರ್ತೆ
ತುಮಕೂರು,ಮಾ.24: ಬೆ.ವಿ.ಕಂ. ತುಮಕೂರು ವಿಭಾಗ ಹಾಗೂ ಗುಬ್ಬಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಉಪವಿಭಾಗ ಮತ್ತು ಶಾಖೆಗಳಲ್ಲಿ
ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಭಾರಿ ಗಾಳಿ ಮತ್ತು ಮಳೆಗೆ ಗಿಡಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ತಂತಿಗಳು
ತುಂಡಾಗಿ ಅಪಾಯ ಸಂಭವ ಹೆಚ್ಚಾಗಿರುತ್ತದೆ. ಉಪವಿಭಾಗ ಶಾಖೆಗಳ ವ್ಯಾಪ್ತಿಗೆ ಬರುವ ಗ್ರಾಮಗಳ ಸಾರ್ವಜನಿಕರು ಇಂತಹ ಸಂದರ್ಭಗಳಲ್ಲಿ, ಸಂಬಂಧಪಟ್ಟ ಕ್ಯಾಂಪ್ ಪವರ್ಮೆನ್ ಹಾಗೂ ಶಾಖಾಧಿಕಾರಿಗಳಿಗೆ ಮತ್ತು ಎಂ.ಯು.ಎಸ್.ಎಸ್.ಗೆ ಮಾಹಿತಿ ತಿಳಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮನವಿ ಮಾಡಿದ್ದಾರೆ.
ವಿದ್ಯುತ್ ತಂತಿಗಳು ಇರುವ ಮಾರ್ಗಗಳ ಕೆಳಗೆ ತೋಟಗಳನ್ನುನಿರ್ಮಿಸುವುದಾಗಲೀ, ಕಟ್ಟಡ ನಿರ್ಮಾಣ ಕೆಲಸಗಳಾಗಲೀ, ವಿದ್ಯುತ್ ಕಂಬಗಳಿಗೆ
ತಂತಿ/ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಂಬಕ್ಕೆಕಟ್ಟುವುದು, ಮನೆಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದು,
ಹುಲ್ಲಿನ ಬಣವೆ ಹಾಕುವುದು, ವಿದ್ಯುತ್ ಕಂಬಗಳಿಗೆ ಹಾಕಿರುವ ಆಧಾರ ತಂತಿಗಳನ್ನು ತೆಗೆಯಬಾರದು. ಇದರಿಂದ ವಿದ್ಯುತ್ ಅಪಘಾತಗಳು ಆಗುವ
ಸಂಭವವಿರುವುದರಿಂದ ಈ ರೀತಿಯ ಕೆಲಸಗಳನ್ನು ಮಾಡಬಾರದೆಂದು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ ಹಾಗೂ ವಿದ್ಯುತ್ ಅಪಘಾತಗಳು
ಸಂಭವಿಸಿದಲ್ಲಿ ಸಹಾಯವಾಣಿ ಸಂಖ್ಯೆ 1912/112ನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.