ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜೂ 29 : ತಾಲೂಕಿನ ಕಸಬಾ ಹೋಬಳಿಯ ಹಂಡಿಗನಾಳ ಗ್ರಾಮದ ಸಮೀಪವಿರುವ ಕೆ.ವಿ ಭವನದಲ್ಲಿ 2022- 23ನೇ ಸಾಲಿನ 9ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶಾಸಕ ಬಿ.ಎನ್ ರವಿಕುಮಾರ್ ರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
2022 -23ನೇ ಸಾಲಿನಲ್ಲಿ ಓಟ್ಟೂರು ಕುಲಬಾಂಧವರ ಮಕ್ಕಳು ಹಾಗೂ ಹೆಣ್ಣು ಮಕ್ಕಳ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85% ಕಿಂತಲು ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿ ಗಳಿಗೆ ಹಾಗೂ ಪೋಷಕರಿಗೂ ಸಹಾ ಸನ್ಮಾನ ಮಾಡಲಾಯಿತು.
ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ 2022 -23ನೇ ಸಾಲಿನ ಒಟ್ಟೂರು ಕುಲಬಾಂಧವರ ಮಕ್ಕಳು ಎಸ್.ಎಸ್.ಎಲ್.ಸಿ ಯಲ್ಲಿ 25 ವಿದ್ಯಾರ್ಥಿಗಳಿಗೆ ಹಾಗೂ ಕುಲ ಬಾಂಧವರ ಹೆಣ್ಣುಮಕ್ಕಳ ಮಕ್ಕಳು 27 ವಿದ್ಯಾರ್ಥಿಗಳಿಗೆ ಹಾಗೂ 2022-23ನೇ ಸಾಲಿನ ಕುಲಬಾಂಧವರ ಮಕ್ಕಳು ಪಿಯುಸಿಯಲ್ಲಿ 14 ವಿದ್ಯಾರ್ಥಿಗಳಿಗೆ ಹಾಗೂ ಹೆಣ್ಣು ಮಕ್ಕಳ ಮಕ್ಕಳು ಪಿಯುಸಿಯಲ್ಲಿ 14 ವಿದ್ಯಾರ್ಥಿಗಳಿಗೆ ಶಾಲು ಓದಿಸಿ ಹಾರ ಹಾಕಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ರವಿ ಬೆಳೆಶಿವಾಲೆ, ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹೆಚ್ಚಿನ ಸಾಧನೆ ಮಾಡಬೇಕು. ಇಂದು ಪ್ರಶಸ್ತಿ ಪಡೆದವರು ಮತ್ತೆ ಪದವಿಯಲ್ಲೂ ಪ್ರಶಸ್ತಿ ಸ್ವೀಕರಿಸುವಂತಾಗಬೇಕು. ನಮ್ಮ ದೇವಸ್ಥಾನ ಹಂತ ಹಂತವಾಗಿ ಬೆಳೆದು ಬಂದಿದೆ. ವರ್ಷಕ್ಕೆ ಒಂದೊಂದು ಕಾರ್ಯಕ್ರಮವನ್ನು ತುಂಬಾ ವಿಜೃಂಭಣೆಯಿಂದಾಗಿ ನಡೆದು ಬರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಶಾಸಕ ಬಿ. ಎನ್ ರವಿಕುಮಾರ್, ಪ್ರತಿಯೊಬ್ಬ ವಿದ್ಯಾರ್ಥಿಯೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಈ ಮೂರು ವರ್ಷ ಬಹಳಷ್ಟು ಮುಖ್ಯವಾಗಿರುವಂತಹ ಸಮಯ. ಇವತ್ತು ತಂದೆ ತಾಯಂದಿರು ಮಕ್ಕಳ ಮೇಲೆ ನಿರೀಕ್ಷೆ ಇಟ್ಟುಕೊಂಡು ಓದಿಸುತ್ತಾರೆ. ತಂದೆ ತಾಯಿಗೆ ಆ ನಿರೀಕ್ಷೆಯನ್ನು ಖುಷಿ ಪಡುವಂತ ಕೆಲಸವನ್ನು ಮಕ್ಕಳು ಮಾಡಬೇಕು. ತಂದೆ ತಾಯಿ ಮಾತನ್ನು ಮಕ್ಕಳು ಕೇಳಬೇಕು. ತಾವೆಲ್ಲರೂ ಮುಂದೆ ಈ ಸಮಾಜದಲ್ಲಿ ಎತ್ತರ ಮಟ್ಟಕ್ಕೆ ಬೆಳೆಯಬೇಕಾದರೆ ಒಳ್ಳೆಯ ಸ್ಥಾನಮಾನಗಳಿಸಿ ತಂದೆ ತಾಯಿಯನ್ನು ಪಾಲನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ನಾರಾಯಣಗೌಡ ,ಟ್ರಸ್ಟಿನ ಅಧ್ಯಕ್ಷ ನಾಗರಾಜ.ಎನ್, ಉಪಾಧ್ಯಕ್ಷ ಆರ್ ರವಿ, ಖಜಾಂಚಿ ಮುನಿಸ್ವಾಮಿ ಗೌಡ, ಕಾರ್ಯದರ್ಶಿ ಅಶ್ವತಯ್ಯ, ಸದಸ್ಯರಾದ ಆನೂರು ವಿಜಯೇಂದ್ರ,ಗೊರಮಡುಗು ರಾಜಣ್ಣ,ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಮುಂತಾದವರು ಹಾಜರಿದ್ದರು.