ಸುದ್ದಿಮೂಲ ವಾರ್ತೆ ರಾಯಚೂರು, ೆ.01:
ಶಿಕ್ಷಣದ ಜೊತೆಗೆ ಸಂಸ್ಕಾಾರ ಮತ್ತು ಮೌಲ್ಯಗಳ ಬೆಳವಣಿಗೆಗೂ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗುತ್ತವೆ ಎಂದು ವಿದ್ಯಾಾಭಾರತಿ ಶಿಕ್ಷಣ ಕೇಂದ್ರದ ಸದಸ್ಯರಾದ ಡಾ. ಅಜಿತ್ ಕುಲಕರ್ಣಿ ಅಭಿಪ್ರಾಾಯಪಟ್ಟರು.
ನಗರದ ವಿದ್ಯಾಾಭಾರತಿ ಶಿಕ್ಷಣ ಕೇಂದ್ರದ ಅಂಗ ಸಂಸ್ಥೆೆಯಾದ ವಿದ್ಯಾಾಭಾರತಿ ಮಾಂಟೆಸರಿ ಶಾಲೆಯ ಸಿಬಿಎಸ್ಇ ಶಾಲೆಯ ಸ್ವಾಾಮಿ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರತಿಭಾ ಪ್ರದರ್ಶನ ಹಾಗೂ ಪದವಿ ಪ್ರದಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ. ಎಸ್. ರವಿರಾಜನ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ವಿದ್ಯಾಾ ಭಾರತಿ ಶಿಕ್ಷಣ ಕೇಂದ್ರದ ಉಪಾಧ್ಯಕ್ಷರು ಹಾಗೂ ವಿದ್ಯಾಾಭಾರತಿ ಕೇಂದ್ರ ಪಠ್ಯಕ್ರಮದ ಅಧ್ಯಕ್ಷ ಡಾ. ಆರ್. ರಾಘವೇಂದ್ರ ಅವರು ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಿಯಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣ ದಾಗಿದೆ ಎಂದು ಹೇಳಿದರು
ಪೋಷಕರ ಪರವಾಗಿ ನಮಿತಾ ಹಾಗೂ ಹನ್ಹಾಾ ಹನೋಕ್ ಅವರು ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಆಯಾಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಅಭಿಪ್ರಾಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ್ ನಂದಾಪುರ, ಖಜಾಂಚಿ ಪಿ. ವೆಂಕಟೇಶ್ ಮಾನ್ವಿಿಕರ್ ಉಪಸ್ಥಿಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳಿಂದ ಪ್ರಾಾರ್ಥನಾ ನೃತ್ಯ ನಡೆಯಿತು. ಪದವಿ ಪಡೆದ ಪುಟ್ಟ ಮಕ್ಕಳನ್ನು ಆತ್ಮೀಯವಾಗಿ ಸ್ವಾಾಗತಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪುಣ್ಯಕೋಟಿಯ ಕಥೆಯನ್ನು ಆಧರಿಸಿದ ಕಿರು ನಾಟಕದ ಮೂಲಕ ಸತ್ಯ, ಪ್ರಾಾಮಾಣಿಕತೆ ಹಾಗೂ ಧರ್ಮನಿಷ್ಠೆೆಯ ಮೌಲ್ಯಗಳನ್ನು ಮಕ್ಕಳಿಂದ ಮನಮುಟ್ಟುವ ರೀತಿಯಲ್ಲಿ ಪ್ರದರ್ಶಿಸಲಾಯಿತು. ಜಂಕ್ ುಡ್ ಸೇವನೆಯಿಂದ ಆರೋಗ್ಯಕ್ಕೆೆ ಆಗುವ ಅನಾಹುತಗಳ ಕುರಿತು ಮತ್ತೊೊಂದು ಕಿರು ನಾಟಕ ಪ್ರದರ್ಶಿಸಿ, ಉತ್ತಮ ಆಹಾರ ಪದ್ಧತಿಯ ಅಗತ್ಯತೆಯ ಬಗ್ಗೆೆ ಜಾಗೃತಿ ಮೂಡಿಸಲಾಯಿತು. ನಂತರ ಪದವಿ ಪಡೆದ ಮಕ್ಕಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಪ್ರಾಾಂಶುಪಾಲರಾದ ಕಾತ್ಯಾಾಯನಿ ಹೆಗಡೆ ಕಟ್ಟೆೆ, ಉಪಪ್ರಾಾಂಶುಪಾಲರಾದ ಕಾವ್ಯ, ವ್ಯವಸ್ಥಾಾಪಕ ವೀರೇಶ್ ಮುರಾರಿ, ಮಾಂಟೆಸರಿ ಮುಖ್ಯೋೋಪಾಧ್ಯಾಾಯರು ಸುಜಾತ, ಪ್ರೌೌಢಶಾಲಾ ವಿಭಾಗದ ಮುಖ್ಯಸ್ಥರು ಹಾಜ್ರ, ಪ್ರಾಾಥಮಿಕ ವಿಭಾಗದ ಮುಖ್ಯಸ್ಥರಾದ ಸವಿತಾ ಹಾಗೂ ಶಿಕ್ಷಕರು, ಪೋಷಕರು ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಹಾಗೂ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಾಯವಾಯಿತು ಇಡೀ ಕಾರ್ಯಕ್ರಮವನ್ನು ಪುಟ್ಟ ಮಕ್ಕಳೇ ನಡೆಸಿ ಕೊಟ್ಟಿಿರುವುದು ತುಂಬಾ ಗಮನಾರ್ಹವಾಗಿತ್ತು.
ವಿದ್ಯಾಭಾರತಿ ಮಾಂಟೆಸರಿ ಶಾಲೆಯಲ್ಲಿ ಪ್ರತಿಭಾ ಪ್ರದರ್ಶನ ಹಾಗೂ ಪದವಿ ಪ್ರದಾನ ದಿನಾಚರಣೆ ಪ್ರತಿಭಾ ಪ್ರದರ್ಶನ ; ಶಿಕ್ಷಣದ ಜೊತೆಗೆ ಸಂಸ್ಕಾಾರ ಮತ್ತು ಮೌಲ್ಯಗಳ ಬೆಳವಣಿಗೆಗೂ ಪೂರಕ – ಡಾ. ಅಜಿತ್ ಕುಲಕರ್ಣಿ

