ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.10:
ಕೊಪ್ಪಳದಲ್ಲಿ ಮಾಲಿನ್ಯ ಸೂಸುವ ಕೈಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ತಿಳಿಸಿದರು.
ಸದಸ್ಯೆೆ ಹೇಮಲತಾ ನಾಯಕ್ ಅವರ ಕೊಪ್ಪಳದ ಕಬ್ಬಿಿಣ ಮತ್ತು ಸ್ಪಾಾಂಜ್ ಕೈಗಾರಿಕೆಗಳ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದಕ್ಕೆೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಇಲ್ಲಿನ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ಮಡಳಿ ಜೊತೆಗೆ ಚರ್ಚಿಸಿ ಈ ಕುರಿತು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಈ ಕುರಿತು ಅಧ್ಯಯನಕ್ಕೆೆ ಭಾರತೀಯ ವಿಜ್ಞಾನ ಸಂಸ್ಥೆೆ (ಐಐಎಸ್ಸಿಿ)ಗೆ ಬಲ್ಡೋೋಟಾ ಸಮೂಹದ ಎಂಎಸ್ಪಿಎಲ್ ಕೈಗಾರಿಕಾ ಸಂಸ್ಥೆೆ ಮಾಲಿನ್ಯದ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಧ್ಯಯನ ನಡೆಸಲು ಕಾರ್ಯಾದೇಶ ನೀಡಲಾಗಿದ್ದು ವರದಿ ಬಂದ ಬಳಿಕ ಈ ವಿಚಾರದಲ್ಲಿ ಧರಣಿ ನಡೆಸುತ್ತಿಿರುವ ಕೊಪ್ಪಳ ಗವಿಮಠದ ಸ್ವಾಾಮೀಜಿಯವರನ್ನು ಖುದ್ದು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ಇದೀಗ ಕೈಗಾರಿಕೆಗಳ ಸ್ಥಾಾಪನೆಗೆ ತೀವ್ರ ಪೈಪೋಟಿ ರಾಜ್ಯಗಳ ನಡುವೆ ನಡೆಯುತ್ತಿಿದ್ದು ಸುಲಲಿತ ವ್ಯವಹಾರ ಬದಲಾಗಿ ವೇಗದ ವ್ಯವಹಾರ ಎಂಬುದಾಗಿ ಬದಲಾಗಿದೆ. ನಾವು ಮಾಲಿನ್ಯ ಸೂಸುವ ಕೈಗಾರಿಕೆಗಳ ಪರವಾಗಿಲ್ಲ. ಸರ್ಕಾರ ಮಾಲಿನ್ಯಕಾರಕ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಂಶಯ ಬೇಡವೆಂದರು. ಕೊಪ್ಪಳ ಪ್ರದೇಶದಲ್ಲಿ ಕೈಗಾರಿಕೆಗಳಿಂದ ಆಗಿರುವ ಪರಿಣಾಮವನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನೂ ರಚಿಸಲಾಗಿದೆ ಎಂದು ವಿವರ ಒದಗಿಸಿದರು.

