ಸುದ್ದಿ ಮೂಲ ವಾರ್ತೆ
ಕುಷ್ಟಗಿ,ಮೇ.26: ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಮಳೆ ಮಾಪನ ಕೇಂದ್ರಗಳು ಇದ್ದು ಇಲ್ಲದಂತಾಗಿದ್ದು, ಮಳೆ ಪ್ರಮಾಣ ಸೇರಿ ಗಾಳಿ, ಸಿಡಿಲಿನಿಂದಾಗಿ ಸಂಭವಿಸುವ ಹಾನಿ ಕುರಿತು ಕಂದಾಯ ಇಲಾಖೆ ಮಾಹಿತಿ ನೀಡದೇ ಮೌನಕ್ಕೆ ಶರಣಾಗಿದೆ.
ಕುಷ್ಟಗಿ ಪಟ್ಟಣ ಸೇರಿದಂತೆ ಕಿಲ್ಲಾರಹಟ್ಟಿ, ದೋಟಿಹಾಳ, ತಾವರಗೇರಾ, ಹನುಮಸಾಗರ, ಹನುಮನಾಳ ಭಾಗದ ಮಳೆ ಮಾಪನ ಕೇಂದ್ರಗಳು ಇದ್ದು ಇಲ್ಲದಂತಾಗಿವೆ. ಇತ್ತೀಚೆಗೆ ತಾಲೂಕಿನ ವಿವಿಧೆಡೆ ಮಳೆ ಸುರಿಯಲಾರಂಭಿಸಿದ್ದು, ಪ್ರತಿ ವರ್ಷ ಕಂದಾಯ ಇಲಾಖೆ ಮಳೆಯ ಪ್ರಮಾಣ ಮಾಧ್ಯಮ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿತ್ತು. ಪ್ರಸಕ್ತ ವರ್ಷ ಮಳೆಗಾಲ ಆರಂಭವಾದಾಗಿನಿಂದಲೂ ಯಾವುದೇ ರೀತಿಯಗೆ ಮಳೆ ಪ್ರಮಾಣ ಕುರಿತು ಮಾಹಿತಿ ಜನರಿಗೆ ತಲುಪುತಿಲ್ಲ. ಈ ಕುರಿತು ಯಾರನ್ನು ವಿಚಾರಿಸಬೇಕು. ಯಾರಿಂದ ಮಾಹಿತಿ ಪಡೆಯಬೇಕು ಎಂಬುದು ತಿಳಿಯುತ್ತಿಲ್ಲವೆಂದು ಸಾರ್ವಜನಿಕರು ಪ್ರಶ್ನಿಸಿ ತೊಡಗಿದ್ದಾರೆ.
ಮಳೆಯ ಮಾಪನ ವರದಿ ನೀಡಬೇಕಾದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದೇಕೆ ಎಂಬ ಪ್ರಶ್ನೆ ಸದ್ಯ ಜನತೆಯಲ್ಲಿ ನಾನಾ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.