ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ರಾಯಚೂರು ಗ್ರಾಾಮಾಂತರದಲ್ಲಿ ಜಲಧಾರೆ ಕಾಮಗಾರಿ ಚುರುಕುಗೊಳಿಸಿ, ತುರುಕನಡೋಣಿ ಸಮೀಪ ಕೆರೆ ಮಾಡಲು ಕ್ರಿಿಯಾ ಯೋಜನೆ ಸಲ್ಲಿಸಿ, ಶುದ್ಧ ನೀರು ಪೂರೈಕೆ ಬಗ್ಗೆೆ ಸುಳ್ಳು ಹೇಳಿ ಜಾರಿಕೊಳ್ಳದೆ ಕೆಲಸ ಮಾಡಿ…
ಹೀಗೆ ಗ್ರಾಾಮಾಂತರ ಶಾಸಕ ಬಸನಗೌಡ ದದ್ದಲ್ ಇಂದು ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಮೇಲೇಯೇ ಹೆಚ್ಚಿಿನ ಚರ್ಚೆ ಮಾಡಿ ಸಮಸ್ಯೆೆಯ ತೀವ್ರತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಿಸಿ ಸರಿಪಡಿಸಿಕೊಳ್ಳಲು ಸೂಚಿಸಿದರು.
ಗ್ರಾಾಮೀಣ ಭಾಗದಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆೆ ಎದುರಾದ ಸಾರ್ವಜನಿಕರ ದೂರುಗಳ ಮೇಲೆ ಗಮನ ಹರಿಸಿದ ಅವರು ಸುದೀರ್ಘ, ವಿವರವಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಜಲಧಾರೆಯಡಿ ಕಾಮಗಾರಿ ನಿರೀಕ್ಷಿಿತ ಮಟ್ಟದಲ್ಲಿ ಗುತ್ತಿಿಗೆದಾರರು ಮಾಡುತ್ತಿಿಲ್ಲಘಿ, ಮೇಲುಸ್ತುವಾರಿ ವಹಿಸಿದ ಇಲಾಖೆ ಅಧಿಕಾರಿಗಳು ಸಹಿತ ಕೈಕಟ್ಟಿಿ ಕುಳಿತಂತಿದೆ.73 ನೀರಿನ ಟ್ಯಾಾಂಕ್ಗಳ ಪೈಕಿ 41 ಕಾಮಗಾರಿ ಪ್ರಗತಿಯಲ್ಲಿದ್ದು ಉಳಿದವೂ ಆರಂಭವೇ ಆಗಿಲ್ಲಘಿ. ನಾನಾ ಕಾಮಗಾರಿಗಳು ಪೂರ್ಣಗೊಂಡಿಲ್ಲ ಇನ್ನೂ ಪ್ರಗತಿಯಲ್ಲಿವೆ ಎಂಬುದನ್ನೇ ಪ್ರತಿ ಬಾರಿ ಹೇಳುವುದು ಸರಿಯಲ್ಲಘಿ. ಹೀಗಾಗಿ, ಬಾಕಿ ಇರುವ ಕಾಮಗಾರಿಗಳ ವೇಗ ಹೆಚ್ಚಿಿಸಲು ಗ್ರಾಾಮೀಣ ನೈರ್ಮಲ್ಯ ನೀರು ಸರಬರಾಜು, ಜಿಲ್ಲಾಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಿಇಓಗಳು ಪ್ರತ್ಯೇಕ ಸಭೆ ಮಾಡಿ ವಾಸ್ತವ ಗಮನಿಸಲು ಸಲಹೆ ಮಾಡಿದರು.
ತಾಲೂಕಿನ ತುರುಕನಡೋಣಿ ಗ್ರಾಾಮದ ಬಳಿ ವಾರದೊಳಗೆ ಕೆರೆ ಮಾಡಲು ವಿಸ್ತೃತ ಕ್ರಿಿಯಾ ಯೋಜನೆ ರೂಪಿಸಿ ವರದಿ ಸಲ್ಲಿಸಿ ಆ ಮೂಲಕ ಹೀರಾಪೂರು, ಮೂಡಲದಿನ್ನಿಿಗಳಿಗೆ ಎದುರಾಗಿರುವ ಕುಡಿಯುವ ನೀರಿನ ನಿರಂತರ ಸಮಸ್ಯೆೆ ಪರಿಹರಿಸಲು ತಾಕೀತು ಮಾಡಿದರು.
ಜಲಧಾರೆ ಯೋಜನೆಯ ಪ್ರಗತಿಯ ಏನಾಗಿದೆ. ನದಿ ದಂಡೆಯ ಗ್ರಾಾಮಗಳಿಗೆ ಶುದ್ಧೀಕರಿಸಿದ ನೀರನ್ನು ಕೊಡುತ್ತಿಿದ್ದೀರಾ ಎಂದು ಶಾಸಕರು ಕೇಳಿದರು. ಜಲಧಾರೆ ಯೋಜನೆಯ ಕಾಮಗಾರಿಗಳ ಬಗ್ಗೆೆ ಪ್ರಗತಿ ಸಾಧಿಸಲು ಗುತ್ತಿಿಗೆದಾರರಿಗೆ ಸೂಚಿಸಲಾಗಿದೆ. ಅರಳಿಬೆಂಚಿ ಕಾಮಗಾರಿ ಬುನಾದಿ ಹಂತ ನಿರ್ಮಿಸಲಾಗಿದ್ದು ಎಸ್ಪಿಿಟಿಗೆ ರೂಪಿಸಲಾಗಿದೆ. ಗಂಜಳ್ಳಿಿ ಗ್ರಾಾಮದ ಓಎಚ್ಟಿಿ ಟ್ಯಾಾಂಕ್ ದುರಸ್ಥಿಿಯಲ್ಲಿದ್ದು ನೆಲಸಮ ಮಾಡಲು ಮತ್ತು ಜಂಬಲದಿನ್ನಿಿ ಗ್ರಾಾಮದ ಓಎಚ್ಟಿಿ ಟ್ಯಾಾಂಕ್ ನಿರ್ಮಾಣಕ್ಕೆೆ ಬೇರೆ ಸ್ಥಳ ಗುರುತಿಸಲು ಗುತ್ತಿಿಗೆದಾರರಿಗೆ ತಿಳಿಸಲಾಗಿದೆ. ನದಿ ದಂಡೆಯ ಗ್ರಾಾಮಗಳಿಗೆ ಶುದ್ಧೀಕರಿಸಿ ನೀರು ಸರಬರಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಿಯಿಸಿದರು.
ಗಂಜಳ್ಳಿಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ಇದೆ ಎಂದು ಸುಳ್ಳು ಅನುಪಾಲನಾ ವರದಿ ಸಲ್ಲಿಸಿದ್ದಕ್ಕೆೆ ಆಕ್ಷೇಪಿಸಿ ಶಾಸಕರು ತರಾಟೆಗೆ ತೆಗೆದುಕೊಂಡರು. ಇನ್ನೆೆರಡು ದಿನದಲ್ಲಿ ಸರಿಪಡಿಸಿ ನೀರು ಪೂರೈಸಿ ಅಲ್ಲದೆ, ನದಿ ದಡದ ಗ್ರಾಾಮಗಳಲ್ಲಿ ಇದನ್ನು ಪಾಲಿಸಿ ಎಂದು ತಾಕೀತು ಮಾಡಿದರು.
ತಾಲೂಕಿನ ಮಟಮಾರಿ ಗ್ರಾಾಮದಲ್ಲಿ ಓಎಚ್ಟಿ ಟ್ಯಾಾಂಕ್ ನಿರ್ಮಾಣದ ಸ್ಥಳ ಗುರುತಿಸಿದ್ದು ಕಾಮಗಾರಿ ಆರಂಭಿಸುವ ಮುನ್ನ ಈ ಭೂಮಿ ತಮಗೆ ಸೇರಿದ್ದೆೆಂದು ತಕರಾರರು ತೆಗೆದ ಬಗ್ಗೆೆ ಅಧಿಕಾರಿ ಗಮನ ಸೆಳೆದರು. ಆಗ ಶಾಸಕರು ನಾಳೆಯೇ ಪೊಲೀಸ್ರಿಗೆ ದೂರು ಸಲ್ಲಿಸಿ ದಾಖಲೆ ಪರಿಶೀಲಿಸಿ ಸರ್ಕಾರದ್ದಾಾದರೆ ಕೆಲಸ ಆರಂಭಿಸಿ, ಒಂದೊಮ್ಮೆೆ ಅಡ್ಡಿಿ ಪಡಿಸಿದರೆ ದೂರು ದಾಖಲಿಸಲು ತಾಕೀತು ಮಾಡಿದರು. ಕಲ್ಮಲಾ ಕೆರೆಗೆ ವಿದ್ಯುತ್ ಸಂಪರ್ಕ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಕುಡಿಯುವ ನೀರಿಗಾಗಿ ಕೆರೆ ಮಾಡಲಾಗಿದೆ. ವಾರದೊಳಗೆ ಹುಣಿಸಿಹಾಳ ಹುಡಾ, ಕಲ್ಮಲಾ, ಮಾರಮ್ಮ ಕ್ಯಾಾಂಪ್, ಸೀತಾನಗರ ಸೇರಿ ನೀರು ಸರಬರಾಜಿಗೆ ತಾಕೀತು ಮಾಡಿದರು.
ಸಾಮಾನ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿಿರುವುದರಿಂದ ಮುಂಬರಲಿರುವ ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಕ್ಕೆೆ ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿಿನ ನಿರ್ದೇಶನ ನೀಡಿದರು.
ಮುಂಗಾರು ಹಂಗಾಮಿನ ಸೆಪ್ಟೆೆಂಬರ್ನಲ್ಲಿ ಸುರಿದ ಮಳೆಹಾನಿ ಬಗ್ಗೆೆ ಕಂದಾಯ ಮತ್ತು ಕೃಷಿ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು ಗ್ರಾಾಮೀಣ ಕ್ಷೇತ್ರದಲ್ಲಿ 10,672 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾದ ವರದಿ ಸಲ್ಲಿಸಲಾಗಿದೆ. ನ್ಯಾಾನೋ ಯೂರಿಯಾ ಬಳಕೆ ಹಾಗೂ ಪ್ರಯೋಜನೆಗಳ ಬಗ್ಗೆೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ತರಬೇತಿ ನಡೆಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.
ಗ್ರಾಾಮೀಣ ಭಾಗದ ಒಟ್ಟು 27 ಶಾಲೆಗಳಲ್ಲಿ ಪೂರ್ವ ಪ್ರಾಾಥಮಿಕ ತರಗತಿ ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು. ಗ್ರಾಾಮ ಮತ್ತು ಜನಸಂಖ್ಯೆೆಯನುಸಾರ ಅಗತ್ಯವಿರುವ ಕಡೆಗೆ ಕೆಪಿಎಸ್ ಶಾಲೆ ಆರಂಭಿಸುವುದಕ್ಕೆೆ ಮಾರ್ಪಾಡು ಪ್ರಸ್ತಾಾವನೆ ಸಿದ್ಧಪಡಿಸಿ ಸಲ್ಲಿಸಲು ಶಾಸಕರು ಬಿಇಓ ಅವರಿಗೆ ಸೂಚನೆ ನೀಡಿದರು.
ಸಿಂಗನೋಡಿ ಟ್ರಿಿ ಪಾರ್ಕ್ ಹಾಗೂ ಗಾಣದಾಳ ದೈವವನ ಕಾರ್ಯದ ಬಗ್ಗೆೆ ಶಾಸಕರು ಕೇಳಿದರು. ಯರಗೇರಾ ಟ್ರಿಿ ಪಾರ್ಕ್ ಮಂಜೂರಾಗಿದ್ದು ಗಾಣದಾಳ ದೈವಿವನಕ್ಕೆೆ ಕ್ರಿಿಯಾ ಯೋಜನೆ ಸಲ್ಲಿಸಲಾಗಿದೆ ಅನುಮೋದನೆ ಸಿಕ್ಕಿಿದೆ. ಸಿಂಗನೋಡಿ ಟ್ರಿಿ ಪಾರ್ಕಗೆ 50 ಲಕ್ಷ ರೂ. ಹಾಗೂ ಪಂಚಮುಖಿ ಗಾಣದಾಳ ದೈವಿವನಕ್ಕೆೆ 19 ಲಕ್ಷ ರೂ ಅನುದಾನ ಮಂಜೂರಾತಿಗೆ ಆದೇಶವಾಗಿದೆ ಎಂದು ವಲಯ ಅರಣ್ಯಾಾಧಿಕಾರಿಗಳು ಮಾಹಿತಿ ನೀಡಿದರು.
ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ವಿದ್ಯುತ್ ಸಮಸ್ಯೆೆ ಕುರಿತು ಸ್ಥಳ ಪರಿಶೀಈಲಿಸಿ ಶನಿವಾರದೊಳಗೆ ಜೆಸ್ಕಾಾಂಗೆ ನೀಡಬೇಕು ನಂತರ ಸಂಬಂಧಿಸಿದ ಇಲಾಖೆಗಳ ಜೊತೆ ಸಭೆ ಮಾಡಿ ಸಮಸ್ಯೆೆ ಪರಿಹಾರ ಹುಡುಕು ವರದಿ ಸಲ್ಲಿಸಿ ಎಂದರು.
ಯರಮರಸ್ ಸೀಮಾಂತರದಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇದ್ದರೂ ಅದನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಕಂದಾಯ ಅಧಿಕಾರಿಗಳು ಕ್ರಮ ವಹಿಸಬೇಕು ಅರ್ಹರಿಗೆ ನೀಡಬೇಕು. ಮನಸಿಗೆ ಬಂದಂತೆ ಹಂಚಿಕೆ ಪತ್ರ ನೀಡಿದ್ದನ್ನು ಪ್ರಶ್ನಿಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಇಲ್ಲದ ಕಡೆ ನಿವೇಶನ ಗುರುತಿಸಿ ಸ್ವಂತ ಕಟ್ಟಡ ಕಟ್ಟಬೇಕು ಅಲ್ಲದೆ, ಪೌಷ್ಠಿಿಕ ಆಹಾರ ಪೂರೈಕೆ ಬಗ್ಗೆೆ ಗಮನ ಹರಿಸಲು ಸಲಹೆ ಮಾಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಶೀಲ್ದಾಾರ ಸುರೇಶ ವರ್ಮಾ, ತಾ.ಪಂ ಇಓ ಚಂದ್ರಶೇಖರ ಪವಾರ, ಆರ್ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ತಾಲೂಕಾಧ್ಯಕ್ಷ ಪವನ್ ಕಿಶೋರ ಪಾಟೀಲ ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ತಾಲೂಕು ಕೆಡಿಪಿ ಪ್ರಗತಿ ಪರಿಶೀಲನೆ, ಜಲಧಾರೆ ವಿಳಂಬಕ್ಕೆೆ ತರಾಟೆ ನೀರಿನ ಸಮಸ್ಯೆೆ ಸದ್ದು, ಸಮನ್ವಯತೆಯೊಂದಿಗೆ ಸರಿದೂಗಿಸಲು ಶಾಸಕ ದದ್ದಲ್ ತಾಕೀತು

