ಸುದ್ದಿಮೂಲ ವಾರ್ತೆ ಮಾನ್ವಿ, ಡಿ.03:
ತಹಸೀಲ್ದಾಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ ಜರುಗಿತು.
ತಾಲೂಕು ಪಂಚಾಯಿತಿ ಇಓ ಹಾಗೂ ಐಎಎಸ್ ತರಬೇತಿ ಅಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ ಮಾತನಾಡಿ ಪೋಲಿಯೋ ಕಾಯಿಲೆ ಒಮ್ಮೆೆ ಮಗುವಿನಲ್ಲಿ ಕಾಣಿಸಿಕೊಂಡಲ್ಲಿ ಮಗು ಅಂಗವಿಕಲವಾಗುತ್ತದೆ ಆದ್ದರಿಂದ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತಾಲೂಕಿನ ಯಾವೊಂದು ಮಗು ಕೂಡ ಪೋಲಿಯೋ ಲಸಿಕೆಯಿಂದ ಹೊರ ಉಳಿಯದಂತೆ ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡುವ ಮೂಲಕ ತಾಲೂಕಿನ 1ರಿಂದ 5ರ ಒಳಗಿನ ಪ್ರತಿಯೊಂದು ಮಗುವಿಗೂ ಕೂಡ ಪೋಲಿಯೋ ಲಸಿಕೆ ಹಾಕಿಸುವುದಕ್ಕೆೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಲೂಕಾ ಆರೋಗ್ಯಾಾಧಿಕಾರಿ ಡಾ.ಶರಣಬಸವರಾಜಗೌಡ ಮುಸ್ಟೂರು ಮಾತನಾಡಿ ಮಾನ್ವಿಿ ವಿಧಾನಸಭಾ ವ್ಯಾಾಪ್ತಿಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಡಿ.21 ರಂದು ಬೂತ್ ಡೇ ಅಂಗವಾಗಿ ಬೂತ್ ಗಳಲ್ಲಿ 1ರಿಂದ 5ರ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಡಿ.22, 23, 24 ರಂದು ಪ್ರತಿ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದಕ್ಕೆೆ ಕ್ರಮ ಕೈಗೊಳ್ಳಲಿದ್ದಾರೆ. ಮಾನ್ವಿಿ ಕ್ಷೇತ್ರದ ವ್ಯಾಾಪ್ತಿಿಯಲ್ಲಿ 5 ವರ್ಷದೊಳಗಿನ 47 ಸಾವಿರ ಮಕ್ಕಳನ್ನು ಗುರುತಿಸಲಾಗಿದ್ದು ಪೋಲಿಯೋ ಲಸಿಕೆ ಹಾಕುವುದಕ್ಕೆೆ ಒಟ್ಟು 221 ಬೂತ್ಗಳ ವ್ಯವಸ್ಥೆೆ ಮಾಡಲಾಗಿದ್ದು442 ಸಿಬ್ಬಂದಿಗಳು 47 ಮೇಲ್ವಿಿಚಾರಕರು, 8 ಸಂಚಾರಿ ತಂಡಗಳ ವ್ಯವಸ್ಥೆೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರೇೇಡ್ 2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಸೇರಿದಂತೆ ಆರೋಗ್ಯ ಶಿಕ್ಷಣಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ ಮಾನ್ವಿ : ಪಲ್ಸ್ ಪೋಲಿಯೋ ಕಾರ್ಯದಲ್ಲಿ ಅಧಿಕಾರಿಗಳು ತಪ್ಪದೇ ಭಾಗವಹಿಸಿ – ಪುರುರಾಜ ಸಿಂಗ್ ಸೋಲಂಕಿ

