ಧಿ ಸುದ್ದಿಮೂಲ ವಾರ್ತೆ ಸಿಂಧನೂರು, ನ.27:
2026-27 ನೇ ಆರ್ಥಿಕ ವರ್ಷದಲ್ಲಿ ಸಿಂಧನೂರು ತಾಲೂಕಿನಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಬಹುದಾದ 3909 ಕಾಮಗಾರಿಗಳಿಗೆ 385 ಕೋಟಿ ರೂ.ಗಳ ವಾರ್ಷಿಕ ಕರಡು ಅಭಿವೃದ್ದಿ ಯೋಜನೆಯ ಪ್ರಸ್ತಾಾವನೆಗೆ ಅನುಮೋದನೆ ನೀಡಲಾಯಿತು.
ಗುರುವಾರ ಜಿ.ಪಂ. ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಮಟ್ಟದ ಯೋಜನಾ ಮತ್ತು ಅಭಿವೃದ್ದಿ ಸಮಿತಿ ಸಭೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಅಂದಾಜು ಯೋಜನೆಗಳ ಪಟ್ಟಿಿ ಪಡೆಯಲಾಯಿತು. ಅತ್ಯಧಿಕವಾಗಿ ಗ್ರಾಾಮ ಪಂಚಾಯತ್ಗಳ 3497 ಕಾಮಗಾರಿಗಳ ಪಟ್ಟಿಿ ಸಿದ್ದಪಡಿಸಲಾಗಿದ್ದು, 320 ಕೋಟಿ ರೂ.ಗಳ ಪ್ರಸ್ತಾಾವನೆ, ಇನ್ನೂ ಇತರೆ ಇಲಾಖೆಗಳ 412 ಕಾಮಗಾರಿಗಳಿಗೆ 65.05 ಕೋಟಿ ರೂ.ಗಳ ಬೇಡಿಕೆ ಸಿದ್ದಪಡಿಸಲಾಗಿದೆ.
ಸಿಂಧನೂರು ನಗರಸಭೆಯಿಂದ 19 ಕೋಟಿ, ತುರ್ವಿಹಾಳ ಪಟ್ಟಣ ಪಂಚಾಯತ್ನಿಂದ 18 ಕೋಟಿ, ಜಿ.ಪಂ.ನ ಗ್ರಾಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯಿಂದ 7 ಕೋಟಿ, ಪಿಆರ್ಇಡಿ ಯಿಂದ 3.2 ಕೋಟಿ, ಅರಣ್ಯ ಇಲಾಖೆಯಿಂದ 5.97 ಕೋಟಿ, ಸಿಡಿಪಿಓ ಸಿಂಧನೂರು ಯೋಜನೆಯಿಂದ 5 ಕೋಟಿ, ತುರ್ವಿಹಾಳ ಯೋಜನೆಯಿಂದ 1.2 ಕೋಟಿ, ತೋಟಗಾರಿಕೆ ಇಲಾಖೆಯಿಂದ 3 ಕೋಟಿ, ತಾಲ್ಲೂಕಾ ಪಂಚಾಯತ್ನಿಂದ 2.8 ಕೋಟಿ, ಕಂದಾಯ ಇಲಾಖೆಯಿಂದ 1.75 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಪಟ್ಟಿಿಯನ್ನು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರ, ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಯಿಂದ ಕೈಗೊಳ್ಳಬಹುದಾದ ಕಾಮಗಾರಿಗಳ ಅಂದಾಜು ಕರಡು ಪಟ್ಟಿಿ ಸಿದ್ದ ಪಡಿಸಲಾಗುತ್ತಿಿದೆ. ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು ಈಗಾಗಲೇ ಪಟ್ಟಿಿ ನೀಡಿದ್ದರೂ, ಇನ್ನೂ ಕಾಮಗಾರಿಗಳನ್ನು ಸೇರಿಸಲು ಅವಕಾಶವಿದೆ. ಕೂಡಲೇ ಅಗತ್ಯ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕು ಎಂದು ಸೂಚನೆ ನೀಡಿದರು.
ನೋಟೀಸ್:
ತಾಲೂಕಾ ಮಟ್ಟದ ಯೋಜನಾ ಮತ್ತು ಅಭಿವೃದ್ದಿ ಸಮಿತಿ ಸಭೆಯಲ್ಲಿ ಭಾಗವಹಿಸದ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಸಂಬಂಧಿಸಿದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರದಿದ್ದರೆ ಅವರ ವಿರುದ್ದ ಕ್ರಮಕ್ಕೆೆ ಶಿಾರಸ್ಸು ಮಾಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗೆ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರ ಸೂಚಿಸಿದರು.
ಸಭೆಗೆ ಸಹಕಾರ, ತೋಟಗಾರಿಕೆ, ಆರ್ಡಬ್ಲ್ಯೂಎಸ್ ಹಾಗೂ ಅಲ್ಪಸಂಖ್ಯಾಾತ ಕಲ್ಯಾಾಣ ಇಲಾಖೆ ಅಧಿಕಾರಿಗಳು ಗೈರಾಗಿದ್ದರು.
ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಾ.ಪಂ.ಗಳ ಅಭಿವೃದ್ದಿ ಅಧಿಕಾರಿಗಳು ಭಾಗವಹಿಸಿದ್ದರು.
ಶಾಸಕರು ಗೈರು:
ಶಾಸಕ ಹಂಪನಗೌಡ ಬಾದರ್ಲಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಾ ಮಟ್ಟದ ಯೋಜನಾ ಮತ್ತು ಅಭಿವೃದ್ದಿ ಸಮಿತಿ ಸಭೆ ನಡೆಯಬೇಕಿತ್ತು. ಆದರೆ ಶಾಸಕರು ಬೆಂಗಳೂರಿಗೆ ತೆರಳಿದ್ದರಿಂದ ಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ.
ತಾಲೂಕಾ ಯೋಜನಾ ಮತ್ತು ಅಭಿವೃದ್ದಿ ಸಮಿತಿ ಸಭೆ : 3909 ಕಾಮಗಾರಿ ಬೇಡಿಕೆ ಪಟ್ಟಿಿ 385 ಕೋಟಿ ರೂ. ವಾರ್ಷಿಕ ಕರಡು ಯೋಜನೆಗೆ ಅನುಮೋದನೆ

