ಸುದ್ದಿಮೂಲ ವಾರ್ತೆ ಬೀದರ್, ಅ.02:
ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಮಾಂಜ್ರಾಾ ನದಿಯಿಂದ ಉಂಟಾದ ನೆರೆಯಿಂದ ರೈತರು ಹಾಗೂ ಸಾರ್ವಜನಿಕರು ಪರದಾಡುತ್ತಿಿದ್ದ ಬಗ್ಗೆೆ ಸುದ್ದಿಮೂಲದಲ್ಲಿ ಪ್ರಕಟಿಸಿದ ವರದಿ ಹಿನ್ನಲೆ ಪೌರಾಡಳಿತ ಸಚಿವ ರಹೀಮ್ ಖಾನ್ ಬುಧವಾರ ಕ್ಷೇತ್ರದ ಐದು ಗ್ರಾಾಮಗಳಿಗೆ ಭೇಟಿ ನೀಡಿ ನೆರೆ ಹಾವಳಿ ವೀಕ್ಷಿಸಿದ್ದಾರೆ.
ಆದರೆ, ತರಾತುರಿಯಲ್ಲಿ ಹಾಗೇ ಬಂದು ಹೀಗೆ ಹೋದರೆ ನಮ್ಮ ಸಮಸ್ಯೆೆ ಕೇಳುವವರು ಯಾರು? ಎಂದು ಗ್ರಾಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಚಿಲ್ಲರ್ಗಿ ಗ್ರಾಾಮದ ಪ್ರೇೇಮಕುಮಾರ್ ಎಂಬುವವರು ವಿಡಿಯೋ ಬಿಡುಗಡೆ ಮಾಡಿ ಸಚಿವ ರಹೀಮ್ ಖಾನ್ ನೆರೆ ವೀಕ್ಷಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ ನಿಂದ ಇಳಿದ ತಕ್ಷಣ ಪುನ್ಃ ಕಾರ್ ಏರಿ ಹೊರಟು ಹೋಗಿದ್ದಾರೆ. ನಮ್ಮ ಸಮಸ್ಯೆೆ ಸರಿಯಾಗಿ ಆಲಿಸಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದ್ದಾರೆ. ನೆರೆ ಉಂಟಾದ ಹಲವು ದಿನಗಳ ಬಳಿಕ ಬಂದರೂ ಸರಿಯಾಗಿ ಸಮೀಕ್ಷೆ ನಡೆಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಳೆ ಹಾಗೂ ನೆರೆಯಿಂದ ಜನರು ತತ್ತರಿಸಿದ ಹಲವು ದಿನಗಳ ಬಳಿಕ ಸಚಿವ ರಹೀಮ್ ಖಾನ್ ಭೇಟಿ ನೀಡಿದ್ದಾರೆ. ಈ ಬಗ್ಗೆೆ ಗ್ರಾಾಮೀಣ ಭಾಗದಲ್ಲಿ ವ್ಯಾಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಸಚಿವ ರಹೀಮ್ ಖಾನ್, : ಬುಧವಾರ ಬೀದರ ತಾಲ್ಲೂಕಿನ ಜಾಂಪಾಡ, ಚಿಲ್ಲರಗಿ , ಇಸ್ಲಾಾಂಪುರ, ಯರನಳ್ಳಿಿ ಗ್ರಾಾಮಗಳಿಗೆ ಭೇಟಿ ನೀಡಿ ಪರಿಸ್ಥಿಿತಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಇವರು, ಭಾರೀ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳಯಲಾದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು ವಿವಿಧ ಸ್ಥಳಗಳಲ್ಲಿ ಮನೆಗಳು, ರಸ್ತೆೆ, ಸೇತುವೆ ಕುಸಿದಿವೆ. ರಸ್ತೆೆ ಸಂಪರ್ಕ ಕಡಿತಗೊಂಡಿವೆ. ಹೀಗಾಗಿ ಪರ್ಯಾಯ ರಸ್ತೆೆ ವ್ಯವಸ್ಥೆೆ ಮಾಡಲಾಗಿದೆ ಎಂದರು. ಅಧಿಕಾರಿಗಳಿಗೆ ತುರ್ತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಹೆಚ್ಚುವರಿ ರೂ. 8,500 ಪ್ರತಿ ಹೆಕ್ಟೇರ್ಗೆ ಪರಿಹಾರ ಸೇರಿದಂತೆ ಒಟ್ಟು ರೂ.17,000 ಖುಷ್ಕಿಿ ಜಮೀನಿಗೆ, ರೂ. 25,000 ನೀರಾವರಿ ಜಮೀನಿಗೆ ಹಾಗೂ ರೂ. 31,000 ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಿಗಳು ಭರವಸೆ ನೀಡಿದ್ದಾರೆ ಎಂದರು.
ಸಾರ್ವಜನಿಕರು ನದಿ, ಕೆರೆಗಳಿಂದ ದೂರ ಇರಬೇಕು ಮತ್ತು ಯಾವುದೇ ಅಪಾಯವಾಗದಂತೆ ಅಗತ್ಯ ಮುನ್ನೆೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಿಎಂ ಜೊತೆ ೆಟೋ ಶೂಟ್ಗೆ ಆಯ್ಕೆೆ ಮಾಡಿಲ್ಲ
ಮುಖ್ಯಮಂತ್ರಿಿ ಸಿದ್ದರಾಮಯ್ಯ ಜೊತೆ ಕುಳಿತು ೆಟೋಶೂಟ್ ಮಾಡಿಸಿಕೊಳ್ಳಲು ಮತ ನೀಡಿ ಶಾಸಕ ಸ್ಥಾಾನಕ್ಕೆೆ ಆಯ್ಕೆೆ ಮಾಡಿಲ್ಲ ಎಂದು ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಸಂಜುಕುಮಾರ್ ಟೊಳ್ಳೆೆ ಕಿಡಿಕಾರಿದ್ದಾರೆ.
ಮಳೆ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ರೈತರ ನೆರವಿಗೆ ಬಂದು ಸಮಸ್ಯೆೆ ಆಲಿಸುವ ಹಾಗೂ ಪರಿಹರಿಸುವ ನಿಟ್ಟಿಿನಲ್ಲಿ ಕೆಲಸ ಮಾಡಬೇಕು. ಅದು ಬಿಟ್ಟು ಮುಖ್ಯಮಂತ್ರಿಿ ಜೊತೆ ಕುಳಿತು ೆಟೋ ತೆಗೆದುಕೊಂಡರೆ ಜನರಿಗೇನು ಪ್ರಯೋಜನವಿಲ್ಲ ಎಂದು ಸಚಿವ ರಹೀಮ್ ಖಾನ್ ಗೆ ಸಲಹೆ ಮಾಡಿದ್ದಾರೆ.